ಆ್ಯಪ್ನಗರ

ಉಕ್ಕಿ ಹರಿಯುತ್ತಿರುವ ಒಳಚರಂಡಿ ನೀರು ತಡೆಗಟ್ಟಲು ಮನವಿ

ಕೆಂಪೇಗೌಡ ವೃತ್ತದಲ್ಲಿರುವ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಕಲುಷಿತ ನೀರು ಉಕ್ಕಿ ಹರಿದಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Vijaya Karnataka 25 May 2019, 5:00 am
ಮಾಗಡಿ: ಕೆಂಪೇಗೌಡ ವೃತ್ತದಲ್ಲಿರುವ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಕಲುಷಿತ ನೀರು ಉಕ್ಕಿ ಹರಿದಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web requested to prevent overflow drainage water
ಉಕ್ಕಿ ಹರಿಯುತ್ತಿರುವ ಒಳಚರಂಡಿ ನೀರು ತಡೆಗಟ್ಟಲು ಮನವಿ


ಪಟ್ಟಣದಲ್ಲಿ ಕೆಂಪೇಗೌಡ ವೃತ್ತ ಪ್ರಮುಖ ಸ್ಥಳವಾಗಿದ್ದು, ಈ ವೃತ್ತದಲ್ಲಿ ಅಂಗಡಿಗಳು, ಕ್ಲಿನಿಕ್‌, ಆಟೋ ಸ್ಟಾಂಡ್‌ ಇದೆ. ಬೈಚಾಪುರ, ತಿರುಮಲೆ, ಎನ್‌ಇಎಸ್‌ ಬಡಾವಣೆಯಿಂದ ಬಸ್‌ ಸ್ಟಾಂಡ್‌, ಮಾರುಕಟ್ಟೆಗೆ ತೆರಳುವವರು ಈ ವೃತ್ತದ ಮುಖಾಂತರವೇ ತೆರಳಬೇಕಿದೆ. ಕೆಂಪೇಗೌಡ ವೃತ್ತದಲ್ಲಿರುವ ಒಳ ಚರಂಡಿಯ ಮ್ಯಾನ್‌ಹೋಲ್‌ನಿಂದ ಶುಕ್ರವಾರ ಬೆಳಗ್ಗೆ ಕಲುಷಿತ ನೀರು ಉಕ್ಕಿ ರಸ್ತೆಯ ತುಂಬಾ ಹರಿದ ಪರಿಣಾಮ ಈ ಸುತ್ತಮುತ್ತಲ ಸ್ಥಳದಲ್ಲಿ ಕೆಟ್ಟ ವಾಸನೆ ಹರಡಿತ್ತು. ಶಾಲೆ, ಕಾಲೇಜು, ಮದುವೆ, ದೇವಾಲಯ ಮುಂತಾದ ಶುಭ ಕಾರ್ಯಗಳಿಗೆ ತೆರಳುವವರು ಒಳಚರಂಡಿಯ ಮಲಿನ ನೀರನ್ನು ತುಳಿದುಕೊಂಡೇ ತೆರಳುವಂತಾಯಿತು. ಉಕ್ಕಿ ಹರಿಯುತ್ತಿರುವ ಒಳಚರಂಡಿ ಕಲುಷಿತ ನೀರನ್ನು ತಡೆಗಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಶ್ವತ ಪರಿಹಾರಕ್ಕೆ ಮನವಿ:

ಉಕ್ಕಿ ಹರಿಯುತ್ತಿರುವ ಒಳ ಚರಂಡಿ ಕಲುಷಿತದ ಬಗ್ಗೆ ಸ್ಥಳೀಯ ಅಂಗಡಿ ಮಾಲೀಕ ಎಂ.ವೈ.ಕರ್ಣಾರ್ಜುನ್‌ ಮಾತನಾಡಿ, ಪ್ರತಿಯೊಂದು ತಿಂಗಳಿಗೊಮ್ಮೆ ಒಳಚರಂಡಿ ಉಕ್ಕಿ ಹರಿಯುತ್ತದೆ. ಈ ಸಮಯದಲ್ಲಿ ಕಲುಷಿತ ನೀರು ರಸ್ತೆಯ ಮೇಲೆ ಹರಿಯುವುದರಿಂದ ಕೆಟ್ಟ ವಾಸನೆ ಹರಡುತ್ತದೆ. ಇದರಿಂದ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡು ಹಿಡಿದು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ