ಆ್ಯಪ್ನಗರ

ವಸತಿ ಶಾಲೆ ಮಕ್ಕಳ ಬವಣೆ ಕಣ್ಣಾರ ಕಂಡ ಡಿಸಿ

ನೀರಿನ ಸಮಸ್ಯೆಯಿಂದ ಮಕ್ಕಳು ಚರ್ಮರೋಗಕ್ಕೆ ತುತ್ತಾಗಿರುವ ತಾಲೂಕಿನ ಕೈಲಾಂಚ ಗ್ರಾಮದಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ. ಎಸ್‌.ಅರ್ಚನಾ ನೇತೃತ್ವದ ತಂಡವು, ಮಕ್ಕಳು ಅನುಭವಿಸುತ್ತಿರುವ ಬವಣೆಯನ್ನು ಕಣ್ಣಾರೆ ಕಂಡಿತು.

Vijaya Karnataka 29 Aug 2019, 3:29 pm
ರಾಮನಗರ: ನೀರಿನ ಸಮಸ್ಯೆಯಿಂದ ಮಕ್ಕಳು ಚರ್ಮರೋಗಕ್ಕೆ ತುತ್ತಾಗಿರುವ ತಾಲೂಕಿನ ಕೈಲಾಂಚ ಗ್ರಾಮದಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ. ಎಸ್‌.ಅರ್ಚನಾ ನೇತೃತ್ವದ ತಂಡವು, ಮಕ್ಕಳು ಅನುಭವಿಸುತ್ತಿರುವ ಬವಣೆಯನ್ನು ಕಣ್ಣಾರೆ ಕಂಡಿತು.
Vijaya Karnataka Web residential school children
ವಸತಿ ಶಾಲೆ ಮಕ್ಕಳ ಬವಣೆ ಕಣ್ಣಾರ ಕಂಡ ಡಿಸಿ


ನೀರು ಮತ್ತು ಸ್ವಚ್ಛತೆ ಕೊರತೆಯಿಂದ ಮಕ್ಕಳು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ವಿಜಯ ಕರ್ನಾಟಕ ತನ್ನ ಬುಧವಾರದ ಸಂಚಿಕೆಯಲ್ಲಿವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಡಿಸಿ ನೇತೃತ್ವದ ಅಧಿಕಾರಿಗಳ ತಂಡ, ವಸತಿ ಶಾಲೆಗೆ ಬಂದು, ಪರಿಶೀಲನೆ ನಡೆಸಿ, ಸಮಸ್ಯೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿತು. ಜಿಲ್ಲಾ ಪಂಚಾಯಿತಿ ಸಿಇಒ ಜಯವಿಭವ ಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಧಿಕಾರಿ ಅಮರ್‌ನಾಥ್‌ ಕೂಡ ಡಿಸಿ ಜತೆಯಲ್ಲಿ ಇದ್ದರು.

ಸಚಿವರ ಭೇಟಿ ಇಂದು: ಡಿಸಿ ಭೇಟಿ ಬೆನ್ನಿಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಕೂಡ ಗುರುವಾರ ವಸತಿ ಶಾಲೆಗೆ ಭೇಟಿ ನೀಡಿ, ಮಾಹಿತಿ ಪಡೆಯಲಿದ್ದಾರೆ. ಮೈಸೂರಿಗೆ ಎರಡು ದಿನಗಳ ಭೇಟಿಗೆ ತೆರಳುತ್ತಿರುವ ಸಚಿವರು, ರಾಮನಗರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.


ಇಕ್ಕಟ್ಟಾದ ಕಟ್ಟಡ, ನೀರು ಮತ್ತು ಶುಚ್ಚಿತ್ವದ ಕೊರತೆಯಿಂದ ಮಕ್ಕಳಿಗೆ ಚರ್ಮ ಸಮಸ್ಯೆ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ತಕ್ಷಣವೇ ಪರಾರ‍ಯಯ ವ್ಯವಸ್ಥೆ ಮಾಡಲಾಗುವುದು. ಘಟನೆ ಸಂಬಂಧ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

-ಎಂ.ಎಸ್‌.ಅರ್ಚನಾ, ಜಿಲ್ಲಾಧಿಧಿಕಾರಿ ರಾಮನಗರ

ಮಕ್ಕಳಲ್ಲಿಕಜ್ಜಿ ಉಲ್ಬಣಗೊಳ್ಳಲು ಶುಚಿತ್ವದ ಕೊರತೆಯೇ ಕಾರಣ. ಒಬ್ಬ ವಿದ್ಯಾರ್ಥಿಗೆ ಕಜ್ಜಿ ಸೋಂಕು ತಗುಲಿತ್ತು.ಮಕ್ಕಳೆಲ್ಲರೂ ಇಕ್ಕಟ್ಟಾಗಿರುವ ಒಂದೇ ಕೋಣೆಯಲ್ಲಿಮಲಗುವ ಕಾರಣ ಚರ್ಮ ಸಮಸ್ಯೆ ಎಲ್ಲರಿಗೂ ಹರಡಿದೆ. ಎಲ್ಲವಿದ್ಯಾರ್ಥಿಗಳಿಗೂ ಚಿಕಿತ್ಸೆ ನೀಡಲಾಗಿದೆ.

-ಶಶಿಕಲಾ, ತಾಲೂಕು ವೈದ್ಯಾಧಿಧಿಕಾರಿ, ರಾಮನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ