ಆ್ಯಪ್ನಗರ

ಗುಂಡಿಯಲ್ಲಿ ಸಿಲುಕಿದ ಶಾಲಾ ವಾಹನ!

ಒಳಚರಂಡಿ ವ್ಯವಸ್ಥೆ ಸರಿಪಡಿಸಲು ತೋಡಲಾಗಿದ್ದ ಹಳ್ಳದಿಂದಾಗಿ ಮಂಗಳವಾರ ಸಂಜೆ ಖಾಸಗಿ ಶಾಲೆಯ ವಾಹನ ಗುಂಡಿಯೊಳಗೆ ಸಿಲುಕಿದ ಘಟನೆ ಜರುಗಿದೆ.

Vijaya Karnataka 29 May 2019, 5:00 am
ರಾಮನಗರ: ಒಳಚರಂಡಿ ವ್ಯವಸ್ಥೆ ಸರಿಪಡಿಸಲು ತೋಡಲಾಗಿದ್ದ ಹಳ್ಳದಿಂದಾಗಿ ಮಂಗಳವಾರ ಸಂಜೆ ಖಾಸಗಿ ಶಾಲೆಯ ವಾಹನ ಗುಂಡಿಯೊಳಗೆ ಸಿಲುಕಿದ ಘಟನೆ ಜರುಗಿದೆ.
Vijaya Karnataka Web school bus caught in the brook
ಗುಂಡಿಯಲ್ಲಿ ಸಿಲುಕಿದ ಶಾಲಾ ವಾಹನ!


ನಗರದ ವಿಜಯನಗರದ ರಾಮದೇವರ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಚಾಲಕ ಎಂದಿನಂತೆ ಮಕ್ಕಳನ್ನು ಮನೆಗೆ ತಲುಪಿಸಿ ವಾಪಾಸ್ಸು ತೆರಳುವಾಗ ಘಟನೆ ಸಂಭವಿಸಿದೆ. 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ವಾಹನದಲ್ಲಿದ್ದರು ಎನ್ನಲಾಗುತ್ತಿದೆ. ಆದರೆ, ಅದೃಷ್ಟವಶಾತ್‌ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಈ ಮಾರ್ಗದಲ್ಲಿ ಕಳೆದ ಎರಡು ತಿಂಗಳಿನಿಂದ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕಾಮಗಾರಿ ನಡೆಯುತ್ತಿದೆ. ಆದರೆ, ಸಮಪರ್ಕವಾಗಿ ಕಾಮಗಾರಿ ಕೈಗೊಳ್ಳದ ಪರಿಣಾಮದಿಂದಾಗಿ ಭೂಮಿಯೊಳಗೆ ವಾಹನ ಸಿಲುಕುವ ಘಟನೆ ಆಗಿದ್ದಾಂಗೆ ಸಂಭವಿಸುತ್ತಿದೆ ಎಂಬುದು ಸ್ಥಳೀಯ ನಾಗರೀಕರ ವಾದ.

ಸ್ಥಳೀಯರ ಆಕ್ರೋಶ:

ಈ ಭಾಗದಲ್ಲಿ ನಿವಾಸ ಹಾಗೂ ಬೃಹತ್‌ ಕಟ್ಟಡ ನಿರ್ಮಾಣದ ಕಾರ‍್ಯ ನಡೆಯುತ್ತಿದೆ. ಈ ಮಾರ್ಗವಾಗಿಯೇ ಕಲ್ಲು ಹಾಗೂ ಮರಳು ತುಂಬಿದ್ದ ಟ್ರಾಕ್ಟರ್‌ಗಳು ಹೆಚ್ಚಾಗಿ ಸಂಚರಿಸುತ್ತಿವೆ. ವಾಹನಗಳ ಭಾರಕ್ಕೆ ಈ ಹಿಂದೆಯೂ ಕೂಡ ಹಲವು ಬಾರಿ ಈ ರೀತಿಯ ಘಟನೆಗಳು ಜರುಗಿವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ಇದ್ದಾರೆ ಎಂದು ಸ್ಥಳೀಯ ನಿವಾಸಿ ಅಜಯ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಶಾಲಾ ವಾಹನ ಸಿಲುಕಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅದೃಷ್ಟವಶಾತ್‌ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂದೆ ಇಂತಹ ಘಟನೆ ಜರುಗಿ ಅನಾಹುತ ಸಂಭವಿಸಿದರೆ, ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

-----

ಎಂದಿನಂತೆ ಮಕ್ಕಳನ್ನು ಬಿಟ್ಟು ನಿಧಾನವಾಗಿಯೇ ವಾಹನ ಚಲಾಯಿಸಿಕೊಂಡು ಬಂದೆ. ಸಮರ್ಪಕವಾಗಿ ಒಳಚರಂಡಿ ಕಾಮಗಾರಿ ನಿರ್ವಹಿಸದ ಪರಿಣಾಮ ವಾಹನ ಭೂಮಿಯಲ್ಲಿ ಸಿಲುಕಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಿಲ್ಲ.

-ಪ್ರದೀಪ್‌, ಖಾಸಗಿ ಶಾಲಾ ವಾಹನ ಚಾಲಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ