ಆ್ಯಪ್ನಗರ

ಜಿಲ್ಲಾಸ್ಪತ್ರೆಗೆ ಆಗಮಿಸಿದ ಏಳು ಹೆಚ್ಚುವರಿ ಆಂಬ್ಯುಲೆನ್ಸ್‌ಗಳು

ಜಿಲ್ಲಾಸ್ಪತ್ರೆಯಲ್ಲಿನ ಆಂಬ್ಯುಲೆನ್ಸ್‌ ಕೊರತೆ ನೀಗಿಸುವ ಸಲುವಾಗಿ ಬೆಂಗಳೂರಿನಿಂದ 7 ಆಂಬ್ಯುಲೆನ್ಸ್ಸ್‌ಗಳನ್ನು ಜಿಲ್ಲೆಗೆ ತರಿಸಲಾಗಿದೆ...

Vijaya Karnataka 29 Jan 2019, 5:00 am
ರಾಮನಗರ: ಜಿಲ್ಲಾಸ್ಪತ್ರೆಯಲ್ಲಿನ ಆಂಬ್ಯುಲೆನ್ಸ್‌ ಕೊರತೆ ನೀಗಿಸುವ ಸಲುವಾಗಿ ಬೆಂಗಳೂರಿನಿಂದ 7 ಆಂಬ್ಯುಲೆನ್ಸ್ಸ್‌ಗಳನ್ನು ಜಿಲ್ಲೆಗೆ ತರಿಸಲಾಗಿದೆ.
Vijaya Karnataka Web seven additional ambulances arrived at the district hospital
ಜಿಲ್ಲಾಸ್ಪತ್ರೆಗೆ ಆಗಮಿಸಿದ ಏಳು ಹೆಚ್ಚುವರಿ ಆಂಬ್ಯುಲೆನ್ಸ್‌ಗಳು


ರಾಮನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಸಾಂಕೇತಿಕವಾಗಿ ಎರಡು 108 ವಾಹನಗಳಿಗೆ ಚಾಲನೆ ನೀಡಲಾಯಿತು. ಉಳಿದ 5 ನೂತನ ಆಂಬ್ಯುಲೆನ್ಸ್‌ಗಳು ಆಯಾ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಚಾಲನೆ ಪಡೆದಿವೆ.

108 ಯೋಜನೆಯ ಪ್ರಾರಂಭದಲ್ಲಿ ನೀಡಲಾಗಿದ್ದ ಹಳೆಯ 7 ವಾಹನಗಳನ್ನು ಹಸ್ತಾಂತರಿಸಿ, ನೂತನ ವಾಹನಗಳನ್ನು ಆರೋಗ್ಯ ಇಲಾಖೆಯು ಪಡೆದುಕೊಳ್ಳಲಾಗಿದೆ. ಇವುಗಳ ಪೈಕಿ 3 ಆಂಬ್ಯುಲೆನ್ಸ್‌ಗಳು ವೆಂಟಿಲೇಟರ್‌ ಒಳಗೊಂಡಂತೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಹೊಂದಿದ್ದು, ಇವು ಕೊಡಂಬಳ್ಳಿ, ಕನಕಪುರ ಮತ್ತು ಸಾತನೂರು ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಿವೆ. ಉಳಿದ ನಾಲ್ಕು ಸೋಲೂರು, ಕುದೂರು, ಬಿಡದಿ ಮತ್ತು ಸಾತನೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ.

ಹಳೆ ವಾಹನಗಳಲ್ಲಿ ದೋಷ: ಹಳೆಯ 180 ಆಂಬ್ಯುಲೆನ್ಸ್‌ ವಾಹನಗಳಲ್ಲಿ ಆಗಾಗ ತಾಂತ್ರಿಕ ದೋಷಗಳು ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ನೂತನ ಅತ್ಯಾಧುನಿಕ 108 ವಾಹನಗಳನ್ನು ಇದೀಗ ಪಡೆಯಲಾಗಿದೆ.

ರೋಗಿಗಳ ಪರದಾಟ: ಜಿಲ್ಲಾಸ್ಪತ್ರೆಯಲ್ಲಿನ 2 ಆಂಬ್ಯುಲೆನ್ಸ್‌ಗಳು ಕೆಟ್ಟು ನಿಂತಿದ್ದು, ಒಂದನ್ನು ಆಸ್ಪತ್ರೆಯ ಹಿಂಭಾಗದಲ್ಲಿ ನಿಲ್ಲಿಸಲಾಗಿದೆ. ನಗು ಮಗು ಜತೆಗೆ ಚನ್ನಪಟ್ಟಣದ ತಾಲೂಕು ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ ಒಂದನ್ನು ಜಿಲ್ಲಾಸ್ಪತ್ರೆ ಪಡೆದುಕೊಂಡಿದೆ. ಒಟ್ಟು ಎರಡು 108 ಆಂಬ್ಯುಲೆನ್ಸ್‌ ಜಿಲ್ಲಾಸ್ಪತ್ರೆಯಲ್ಲಿ ಕಾರ‍್ಯನಿರ್ವಹಿಸುತ್ತಿದೆ. ತುರ್ತು ಸಂದರ್ಭಗಳಲ್ಲಿ 108 ಆಂಬ್ಯುಲೆನ್ಸ್‌ ದೊರೆಯುವುದೇ ಕಷ್ಟವಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಒಂದೊಂದು ಆಂಬ್ಯುಲೆನ್ಸ್‌, ಎರಡು 108 ಆಂಬ್ಯುಲೆನ್ಸ್‌ಗಳು ಕಾರ‍್ಯನಿರ್ವಹಿಸುತ್ತಿದೆ.

ಇವುಗಳಲ್ಲಿ ಪದೆ ಪದೇ ಕೆಟ್ಟು ನಿಲ್ಲುವ ಆಂಬ್ಯುಲೆನ್ಸ್‌ಗಳ ಸಂಖ್ಯೆಗಳಿಗೇನು ಕಡಿಮೆ ಇಲ್ಲ. ಜಿಲ್ಲಾಸ್ಪತ್ರೆಯ ಆಂಬ್ಯುಲೆನ್ಸ್‌ ಮೂಲೆಗೆ ಸೇರಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ ಕೊರತೆ ಎದುರಾಗಿದೆ. ನಗು-ಮಗು ಆಂಬ್ಯುಲೆನ್ಸ್‌ನಲ್ಲಿ ಕೇವಲ ಗರ್ಭಿಣಿ-ಬಾಣಂತಿಯರನ್ನು ಮಾತ್ರವೇ ಕರೆದ್ಯೊಯಲಾಗುತ್ತಿದೆ. ಇದಲ್ಲದೇ, ಇವುಗಳಲ್ಲಿ ಗರ್ಭಿಣಿ ಅಥವಾ ಬಾಣಂತಿಯರಿಗೆ ಪ್ರಥಮ ಚಿಕಿತ್ಸೆಯನ್ನು ಅಂಬ್ಯುಲೆನ್ಸ್‌ ಚಾಲಕರೇ ನೀಡಬೇಕು. ಇದರಿಂದ ರೋಗಿಗಳು ಪರದಾಡಬೇಕಿದೆ.

ಆರೋಗ್ಯ ಕವಚ ವಾಹನಗಳಿಗೆ ಚಾಲನೆ..!

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾಗರಾಜು ಅವರು ನೂತನ ಆರೋಗ್ಯ ಕವಚ ವಾಹನಗಳಿಗೆ ಚಾಲನೆ ನೀಡಿ, ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸಬೇಕು. ಉತ್ತಮ ರೀತಿಯಲ್ಲಿ ವಾಹನಗಳನ್ನು ನಿರ್ವಹಿಸಬೇಕು. 108 ಆಂಬ್ಯುಲೆನ್ಸ್‌ ತಡವಾಗಿ ಆಗಮಿಸುತ್ತದೆ. ಉತ್ತಮ ಸೇವೆ ಲಭ್ಯವಾಗುತ್ತಿಲ್ಲ ಎಂಬ ಒಂದೇ ಒಂದು ಆರೋಪಗಳು ಸಹ ಮುಂದಿನ ದಿನಗಳಲ್ಲಿ ಕೇಳಿಬರಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌, ಜಿ.ಪಂ ಉಪಾಧ್ಯಕ್ಷೆ ವೀಣಾಚಂದ್ರು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ.ಅಮರನಾಥ್‌, ಆರ್‌ಸಿಎಚ್‌ ಅಧಿಕಾರಿ ಡಾ.ಲಕ್ಷ್ಮೀಪತಿ, 108 ಜಿಲ್ಲಾ ಸಂಯೋಜಕ ಮಹಮದ್‌ ಆಸೀಫ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ