ಆ್ಯಪ್ನಗರ

ನಾಟಕಕಾರ ಕಂಬಾರರಿಗೆ ‘ಶಿವಗಂಗೆ ಶ್ರೀ’ ಪ್ರಶಸ್ತಿ

ಶಿವಗಂಗೆ ಪರ್ವತ ಪ್ರದೇಶದ ತಪ್ಪಲಿನಲ್ಲಿರುವ ಮೇಲಣಗವಿ ಮಠ ನೀಡುವ ಹೆಸರಾಂತ ಶಿವಗಂಗೆ ಶ್ರೀ ಪ್ರಶಸ್ತಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ...

Vijaya Karnataka 10 Mar 2019, 5:00 am
ಮಾಗಡಿ ಗ್ರಾಮಾಂತರ: ಶಿವಗಂಗೆ ಪರ್ವತ ಪ್ರದೇಶದ ತಪ್ಪಲಿನಲ್ಲಿರುವ ಮೇಲಣಗವಿ ಮಠ ನೀಡುವ ಹೆಸರಾಂತ ಶಿವಗಂಗೆ ಶ್ರೀ ಪ್ರಶಸ್ತಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆಮಾಡಲಾಗಿದೆ ಎಂದು ಮೇಲಣಗವಿ ಮಠದ ಶ್ರೀಮಲಯ ಶಾಂತಮುನಿ ಶಿವಾಚಾರ್ಯ ಶ್ರೀಗಳು ಮಾಹಿತಿ ನಿಡಿದ್ದಾರೆ.
Vijaya Karnataka Web sivagange sri award for playwright kambar
ನಾಟಕಕಾರ ಕಂಬಾರರಿಗೆ ‘ಶಿವಗಂಗೆ ಶ್ರೀ’ ಪ್ರಶಸ್ತಿ


''2009 ರಿಂದಲೂ ಶ್ರೀಮಠ 'ಶಿವಗಂಗೆ ಶ್ರೀ' ಪ್ರಶಸ್ತಿ ಪ್ರದಾನ ಮಡುತ್ತಾ ಬಂದಿದ್ದು, ಈ ಬಾರಿ ಜ್ಞಾನಪಿಠ ಪ್ರಶಸ್ತಿ ಪುರಸ್ಕೃತ ಹಾಗೂ ಈ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿದ್ದ ಡಾ. ಚಂದ್ರಶೇಖರ ಕಂಬಾರ ಅವರನ್ನು ಗೌರವಿಸಲು ಶ್ರೀಮಠ ತೀರ್ಮಾನಿಸಿದೆ,'' ಎಂದು ತಿಳಿಸಿದ್ದಾರೆ.

''ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರಾಗಿ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ರಾಗಿ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಹಾಗೂ ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಜತೆಗೆ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಕಂಬಾರರ ಸೇವೆಯನ್ನು ಪರಿಗಣಿಸಿ ಶ್ರೀಮಠ ಪ್ರಶಸ್ತಿ ಪ್ರಕಟಿಸಿದೆ,'' ಎಂದರು.

ಮೇಲಣಗವಿ ಮಠದಲ್ಲಿ ಮಾ. 10ರ ಭಾನುವಾರ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ, ಬಿ.ಎಸ್‌ ಯಡಿಯೂರಪ್ಪ ಹಾಗೂ ವಿವಿಧ ಯತಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ಕಳೆದ ವರ್ಷ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಅವರ ಹಿಂದಿನ ವರ್ಷ ಸಾಲುಮರದ ತಿಮ್ಮಕ್ಕ, ಅವರ ಹಿಂದಿನ ವರ್ಷ ಮಲ್ಯಪುರಂ ವೆಂಕಟೇಶ್‌ ಅವರಿಗೆ ಶಿವಗಂಗೆ ಶ್ರೀ ಪ್ರಶಸ್ತಿ ನೀಡಿ ಈ ಹಿಂದೆ ಗೌರವಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ