ಆ್ಯಪ್ನಗರ

ರೈತರಿಗಾಗಿ ಸುಧಾ ಸಾಲ ಯೋಜನೆ

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಸಾಲ ಸೇವೆಯಾದ ಉಜ್ಜೀವನ್‌ ಬ್ಯಾಂಕ್‌ ಕಿಸಾನ್‌ ಸುಧಾ ಸಾಲ ನೀಡಲು ಮುಂದಾಗಿದೆ.

Vijaya Karnataka 31 Jan 2019, 5:00 am
ರಾಮನಗರ: ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಸಾಲ ಸೇವೆಯಾದ ಉಜ್ಜೀವನ್‌ ಬ್ಯಾಂಕ್‌ ಕಿಸಾನ್‌ ಸುಧಾ ಸಾಲ ನೀಡಲು ಮುಂದಾಗಿದೆ.
Vijaya Karnataka Web sudha loan scheme for farmers
ರೈತರಿಗಾಗಿ ಸುಧಾ ಸಾಲ ಯೋಜನೆ


ಹಾಲಿನ ಡೇರಿ, ಖರೀದಿ ಮತ್ತು ನಿರ್ವಹಣೆ, ಕಟಾವು ನಂತರದ ಸಾಗಾಣಿಕೆ, ಕೃಷಿ ಉಪಕರಣಗಳ ಖರೀದಿ, ಮೀನುಗಾರಿಕೆ, ಕುರಿ ಸಾಕಣೆ, ರೇಷ್ಮೆ ಕೃಷಿ, ಹೂವು ಬೆಳೆಯುವುದು, ಅಣಬೆ ಬೇಸಾಯ, ತೆಂಗುತೋಟ ನಿರ್ವಹಣೆ, ತರಕಾರಿತೋಟ ಅಭಿವೃದ್ಧಿ ಸೇರಿದಂತೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬ್ಯಾಂಕ್‌ ಸಾಲ ನೀಡಲು ಮುಂದಾಗಿದೆ.

ಸೌಲಭ್ಯವನ್ನು ತುಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಒಡಿಶಾ ಸೇರಿದಂತೆ ಐದು ರಾಜ್ಯಗಳಲ್ಲಿ ಈ ಸೇವೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ವ್ಯವಸ್ಥಿತವಾದ ಸಾಲ ಪ್ರಕ್ರಿಯೆ, ಮನೆ ಬಾಗಿಲಲ್ಲಿ ಸೇವೆಗಳು, ಸುಲಭ ಮರುಪಾವತಿ ಅವಕಾಶಗಳು, ಸರಳೀಕೃತವಾದ ದಾಖಲಾತಿಗಳನ್ನು ನೀಡಿ ಸಾಲ ಸೌಲಭ್ಯ ಪಡೆಯಬಹುದಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ