ಆ್ಯಪ್ನಗರ

ನನಗೆ ಆರೋಗ್ಯ ಸರಿ ಇಲ್ಲ, ವರ್ಗಾವಣೆ ಮಾಡಿಸಿಕೊಡಿ: ಶಿಕ್ಷಣ ಸಚಿವರಿಗೆ ಶಿಕ್ಷಕಿ ಮನವಿ

ಹಾಸ್ಟೆಲ್‌ಗೆ ಭೇಟಿ ನೀಡಿದ ಸಚಿವರು, ಇಲ್ಲಿಯು ಸಹ ಚಪ್ಪಲಿ ಬಿಚ್ಚಿಟ್ಟು ಓಡಾಡಿದರು. ಶೌಚಾಲಯ, ಅಡುಗೆ ಕೋಣೆ ಪರಿಶೀಲನೆ ನಡೆಸಿದ ಬಳಿಕ, ಅಡುಗೆ ಮನೆಯಲ್ಲಿದ್ದ ಕಡಲೆಪುರಿ ಸವಿದರು. ಈ ವೇಳೆ ಜಿಲ್ಲಾಧಿಕಾರಿಗಳು ಸಹ ಬಾಯಿ ಆಡಿಸಿದ್ದು ವಿಶೇಷ. ಇದಲ್ಲದೇ, ಮಕ್ಕಳು ಕುಡಿಯುವ ನೀರನ್ನೇ ಕುಡಿದರು.

Vijaya Karnataka Web 9 Sep 2019, 9:42 pm
ರಾಮನಗರ: ನನಗೆ ವರ್ಗಾವಣೆ ಆಗಿಲ್ಲ. ಏಳೆಂಟು ವರ್ಷಗಳಿಂದ ಇಲ್ಲೆ ಇದ್ದೇನೆ. ನನ್ನ ಗಂಡನಿಗೆ ಹುಷಾರಿಲ್ಲ. ಮಕ್ಕಳು ನನ್ನ ಬಳಿ ಇಲ್ಲ. ಪ್ಲೀಸ್‌ ವರ್ಗಾವಣೆ ಮಾಡಿ..... ಇದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್ ಮುಂದೆ ಶಿಕ್ಷಕರು ಸಲ್ಲಿಸಿದ ಮನವಿಗಳ ಮಹಾಪೂರ....
Vijaya Karnataka Web ಸುರೇಶ್‌ ಕುಮಾರ್‌
ಸುರೇಶ್‌ ಕುಮಾರ್


ರಾಮನಗರ ತಾಲೂಕಿನ ಕೈಲಾಂಚ ಗ್ರಾಮದಲ್ಲಿನ ಬಾಲಕರ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಯಲಯಕ್ಕೆ ಭೇಟಿ ನೀಡಿದ ಸಚಿವರು, ಶಿಕ್ಷಕರ ಬೇಡಿಕೆ ಪಟ್ಟಿ ಕಂಡು ತತ್ತರಿಸಿ ಹೋದರು.

ಜಿಲ್ಲೆಯಲ್ಲಿ 107 ಶಿಕ್ಷಕರ ವರ್ಗಾವಣೆ ಮಾಡಲಾಗಿದೆ. ಅದರಲ್ಲಿ7 ಪುರುಷರು ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ''ಶಿಕ್ಷಣ ಇಲಾಖೆಯಲ್ಲಿಶೇ.70 ಮಂದಿ ಮಹಿಳಾ ಶಿಕ್ಷಕರೇ ಇದ್ದಾರೆ. ಎಲ್ಲವು ಕಾನೂನಿನ ಚೌಕಟ್ಟಿನಲ್ಲೆ ನಡೆದಿದೆ'' ಎಂದರು.

''ನನಗೆ ಅನಾರೋಗ್ಯ ಇದೆ. ದಯವಿಟ್ಟು ವರ್ಗಾವಣೆ ಕೊಟ್ಟು ಬಿಡಿ,'' ಎಂದು ಮತ್ತೊಬ್ಬ ಶಿಕ್ಷಕಿ ಮೊರೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ''ಅಕ್ಟೋಬರ್‌ವರೆಗೂ ಸಮಾಧಾನವಾಗಿರಿ. ಈ ಹಿಂದೆ ಒಬ್ಬ ಶಿಕ್ಷಕಿಯ ಪತಿಗೆ ಬೈಪೋಲ ಡಿಸಿಸ್‌ ಇತ್ತು. ಹೀಗಾಗಿ ವರ್ಗಾವಣೆ ಬಯಸಿದ್ದರು. ಆದರೆ, ಈ ಕಾಯಿಲೆ ನಮ್ಮ ಕಾಯ್ದೆ ವ್ಯಾಪ್ತಿಯಲ್ಲಿಲ್ಲ. ಹೀಗಾಗಿ ನಮ್ಮ ಇಲಾಖೆಯಲ್ಲಿಯೇ ಕೆಲ ಬದಲಾವಣೆ ಆಗಬೇಕು. ಅವುಗಳ ತಿದ್ದುಪಡಿ ಮಾಡಬೇಕಿದೆ'' ಎಂದು ಸ್ಪಷ್ಟಪಡಿಸಿದರು.

ಶೌಚಾಲಯ ವೀಕ್ಷಣೆ

ಕಳೆದ ಬಾರಿ ಇದೇ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಸಚಿವರ ಮುಂದೆ ವೇತನ ಆಗಿಲ್ಲಎಂದು ಮನವಿ ಮಾಡಿದ್ದ ಸಿಬ್ಬಂದಿಯೊಬ್ಬರನ್ನು ಸಚಿವರೇ ಪತ್ತೆ ಹಚ್ಚಿ ಮಾತನಾಡಿಸಿದರು. ಇದಲ್ಲದೇ, ಬಿಜೆಪಿ ಮುಖಂಡರಿಗೆ ಮಕ್ಕಳಿಗೆ ಸೂರ್ಯ ನಮಸ್ಕಾರ ಹೇಳಿಕೊಡುವಂತೆ ಸೂಚನೆ ನೀಡಿದ್ದು ಮಾತ್ರವಲ್ಲದೇ, ಖುದ್ದು ಸ್ಥಳದಲ್ಲೇ ನಿಂತಿದ್ದರು ಎಂಬುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ