ಆ್ಯಪ್ನಗರ

ಫಸಲಿಗೆ ಬಂದಿದ್ದ ರಾಗಿ ಬೆಳೆ ನಾಶ

ತಾಲೂಕಿನ ಮಂಗಾಡಿಹಳ್ಳಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ರಾಗಿ ಬೆಳೆಗೆ ದಾಳಿ ಮಾಡಿದ ಆನೆಗಳು ಲಕ್ಷಾಂತರ ರೂ, ಮೌಲ್ಯದ ಬೆಳೆಯನ್ನು ತಿಂದು, ತುಳಿದು ನಾಶಮಾಡಿವೆ...

Vijaya Karnataka 10 Mar 2019, 5:00 am
ಚನ್ನಪಟ್ಟಣ: ತಾಲೂಕಿನ ಮಂಗಾಡಿಹಳ್ಳಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ರಾಗಿ ಬೆಳೆಗೆ ದಾಳಿ ಮಾಡಿದ ಆನೆಗಳು ಲಕ್ಷಾಂತರ ರೂ, ಮೌಲ್ಯದ ಬೆಳೆಯನ್ನು ತಿಂದು, ತುಳಿದು ನಾಶಮಾಡಿವೆ.
Vijaya Karnataka Web the crops that came to crops destroyed the crop
ಫಸಲಿಗೆ ಬಂದಿದ್ದ ರಾಗಿ ಬೆಳೆ ನಾಶ


ಗ್ರಾಮದ ಬಸವೇಗೌಡ ಮಗ ಮಲ್ಲೇಗೌಡ ಎಂಬುವರು ಬೆಳೆದಿದ್ದ ರಾಗಿ ಫಸಲಿಗೆ ಮುಗಿಬಿದ್ದ ಆನೆಗಳು ಕಟಾವಿಗೆ ಬಂದಿದ್ದ ರಾಗಿಬೆಳೆಯನ್ನು ತಿಂದು ನಂತರ ತುಳಿದು ನಾಶಮಾಡಿವೆ. ಸುಮಾರು 20 ಕ್ವಿಂಟಾಲ್‌ಗೂ ಹೆಚ್ಚು ರಾಗಿಬೆಳೆ ನಾಶವಾಗಿದೆ.

ಮುತ್ತತ್ತಿ ಅರಣ್ಯ ಪ್ರದೇಶದಿಂದ ನೀರು ಮತ್ತು ಆಹಾರಕ್ಕಾಗಿ ಗುಳೆ ಹೊರಟ್ಟಿರುವ ಆನೆಗಳು ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ತಾಲೂಕಿನ ಭಾಗಕ್ಕೆ ಲಗ್ಗೆ ಇಟ್ಟಿದ್ದು, ರೈತರು ಬೆಳದ ರಾಗಿ, ಬಾಳೆ. ಸೋತೆ. ಕಲ್ಲಂಗಡಿ ಬೆಳೆಗಳನ್ನು ಕ್ಷ ಣರ್ಧದಲ್ಲಿ ತಿಂದು ತುಳಿದು ನಾಶಪಡಿಸುತ್ತಿರುವುದು ರೈತರನ್ನು ಕಂಗಲಾಗಿಸಿದೆ.

ರಾತ್ರಿ ಸಂದರ್ಭದಲ್ಲಿ ಮೂರರಿಂದ ನಾಲ್ಕು ಆನೆಗಳ ಗುಂಪು ವಿರುಪಾಕ್ಷಿಪುರ, ಮಂಗಾಡಹಳ್ಳಿ, ಅರಳಾಳುಸಂದ್ರ, ಬಿ.ವಿ.ಹಳ್ಳಿ, ದ್ಯಾವಪಟ್ಟಣ, ಹಾಗೂ ಇತರೆ ಭಾಗದ ಹಳ್ಳಿಗಳಿಗೆ ಎಡತಾಕುತ್ತಿದ್ದು, ಬಿರು ಬೇಸಿಗೆಯಲ್ಲಿ ಕಷ್ಟಪಟ್ಟು ಭಾರಿ ಶ್ರಮದಿಂದ ಬೆಳದ ಬೆಳೆಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ರೈತರಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

ಅರಣ್ಯ ಇಲಾಖೆಯವರು ತಕ್ಷ ಣ ಇತ್ತಕಡೆ ಗಮನ ಹರಿಸಿ ರೈತರ ಜಮೀನಿನ ಫಸಲಿಗೆ ದಾಳಿ ಮಾಡುತ್ತಿರುವ ಆನೆಗಳನ್ನು ಕಾಡಿನತ್ತ ಹೋಗುವಂತೆ ಮಾಡಿ, ರೈತರಿಗೆ ಶಾಶ್ವತ ಪರಿಹಾರ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ