ಆ್ಯಪ್ನಗರ

ಉನ್ನತ ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ

ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಗುರುವಿನ ಮಾರ್ಗದರ್ಶನ ಇರಬೇಕು, ಗುರಿ ಮುಟ್ಟುವ ಛಲ ಇರಬೇಕೇ ಹೊರತು ಮುಖದ ಅಂದ ಚಂದ, ದೇಹದ ಸೌಂದರ್ಯ ...

Vijaya Karnataka 12 May 2019, 5:00 am
ರಾಮನಗರ: ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಗುರುವಿನ ಮಾರ್ಗದರ್ಶನ ಇರಬೇಕು, ಗುರಿ ಮುಟ್ಟುವ ಛಲ ಇರಬೇಕೇ ಹೊರತು ಮುಖದ ಅಂದ ಚಂದ, ದೇಹದ ಸೌಂದರ್ಯ ಮುಖ್ಯವಾಗುವುದಿಲ್ಲ ಎಂದು ವಾಗ್ಮಿ ಪ್ರೊ ಕೃಷ್ಣೇಗೌಡ ಅಭಿಪ್ರಾಯಟ್ಟರು.
Vijaya Karnataka Web the highest achievement requires the guidance of the guru
ಉನ್ನತ ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ


ಆದಿಚುಂಚನಗಿರಿ ಮಹಾಸಂಸ್ಥಾನದ ರಾಮನಗರ ಶಾಖಾ ಮಠದಲ್ಲಿ ಆಯೋಜಿಸಿದ್ದ 22 ನೇ ರಾಜ್ಯಮಟ್ಟದ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ಕುರಿತು ಮಾತನಾಡಿದರು.

''ಸನ್ಯಾಸಿಗಳು ಎಂದರೆ ಮೃದು ಸ್ವಭಾವದವರು ಎಂದರ್ಥ, ಮೃದು ಸ್ವಭಾವ ಎಂದಾಕ್ಷಣ ಅವರು ಶಕ್ತಿ ಹೀನರು ಎಂದು ತಿಳಿದುಕೊಳ್ಳುವುದು ತಪ್ಪು, ಅವರು ಬೌದ್ಧಿಕವಾಗಿ ಬಹಳ ಶಕ್ತಿವಂತರು, ಗಟ್ಟಿತನದ ಶಕ್ತಿವಂತರಿಗಿಂತಲೂ ಕಠಿಣವಾದವರು,'' ಎಂದು ಹೇಳಿದರು.

''ಅನೇಕ ವೇಳೆ ನಾವು ಬಾಹ್ಯ ಸೌಂದರ್ಯಕ್ಕೆ ಮರುಳಾಗುತ್ತೇವೆ, ಸಾಧನೆ ಮಾಡಿದವರು ವಿಕಲಚೇತನರು, ಬುದ್ಧಿಮಾಂದ್ಯರು ಸೇರಿದಂತೆ ಅಂದಚಂದವಿಲ್ಲದ ಕಪ್ಪು ವರ್ಣದವರೇ ಹೆಚ್ಚು, ಸಾಲುಮರದ ತಿಮ್ಮಕ್ಕ ಸಹ ದೇಶದ ನೂರು ಸಾಧಕರಲ್ಲಿ ಒಬ್ಬರು,'' ಎಂದು ಹೇಳಿದರು.

ಶ್ರೀಡಾ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ''ಜೀವನ ಒಂದಕ್ಕೊಂದು ಪೂರಕವಾಗಿರಬೇಕೇ ವಿನಾ ತದ್ವಿರುದ್ಧವಾಗಿ ಇರಬಾರದು. ಜೀವನದಲ್ಲಿ ದೂರ ಸಾಗುವುದು ಕಷ್ಟದ ಕೆಲಸ. ಚಂದವಿರುವವರನ್ನು ನೋಡಿ ನಾ ಚಂದವಿಲ್ಲ ಎಂದುಕೊಳ್ಳದೆ ಶಾಶ್ವತ ಸಾಧನೆಯ ಮಾಡಿ ಚಂದದ ಹೆಸರು ಸಂಪಾದಿಸಬೇಕು,'' ಎಂದು ಕಿವಿಮಾತು ಹೇಳಿದರು.

''ಅತ್ತು ಹಗುರವಾಗುವುದು ಒಂದು ಭಾಗವಾದರೆ, ದುಃಖವನ್ನು ತಡೆದು ಬರುವ ಕಣ್ಣೀರನ್ನು ತಡೆ ಹಿಡಿದರೆ ಹೆಚ್ಚು ಶಕ್ತಿವಂತರಾಗುತ್ತೀರಿ,'' ಎಂದು ಹೇಳಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ ರಾಜೇಂದ್ರ ಮಾತನಾಡಿ, ''ಶಿಬಿರದಲ್ಲಿ ಭಾಗವಹಿಸುವುದು ಮುಖ್ಯವಲ್ಲ. ಇಲ್ಲಿ ಕಲಿತ ವಿದ್ಯೆಗಳನ್ನು, ಗಣ್ಯರು ಮತ್ತು ಸ್ವಾಮೀಜಿಗಳಿಂದ ಕೇಳಿದ ಉಪನ್ಯಾಸಗಳನ್ನು ಮನನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡರೆ ಶಿಬಿರದಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕವಾಗುತ್ತದೆ,'' ಎಂದು ತಿಳಿಸಿದರು.

ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ದಸರೀಘಟ್ಟ ಶಾಖಾ ಮಠದ ಚಂದ್ರನಾಥ ಸ್ವಾಮೀಜಿ, ಚುಂಚನಕಟ್ಟೆ ಶಾಖಾ ಮಠದ ಶಿವಾನಂದನಾಥ ಸ್ವಾಮೀಜಿ, ಆದಿಹಳ್ಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ ಮತ್ತು ಕೀರ್ತಿನಾಥ ಸ್ವಾಮೀಜಿ, ಚಿತ್ರ ನಟಿ ಅಮೂಲ್ಯ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ