ಆ್ಯಪ್ನಗರ

ಗ್ರಾಮದೇವತೆ ಕೊಂಡೋತ್ಸವದಲ್ಲಿ ಅಗ್ನಿಕೊಂಡಕ್ಕೆ ಬಿದ್ದ ಅರ್ಚಕ

ಕನಕಪುರ ತಾಲೂಕಿನ ಕಸಬಾ ಹೋಬಳಿಯ ಕೆರಳಾಳುಸಂದ್ರ ಗ್ರಾಮದಲ್ಲಿ ಗ್ರಾಮದೇವತೆಗಳ ಹಬ್ಬದಲ್ಲಿ ನಡೆಸಲಾಗುವ ಕೊಂಡೋತ್ಸವದಲ್ಲಿ ಅಗ್ನಿಕೊಂಡ ಹಾಯುವಾಗ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದ ಅರ್ಚಕ ಸುಟ್ಟಗಾಯಗಳಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

Vijaya Karnataka 3 May 2019, 4:55 pm
ಕನಕಪುರ: ಕನಕಪುರ ತಾಲೂಕಿನ ಕಸಬಾ ಹೋಬಳಿಯ ಕೆರಳಾಳುಸಂದ್ರ ಗ್ರಾಮದಲ್ಲಿ ಗ್ರಾಮದೇವತೆಗಳ ಹಬ್ಬದಲ್ಲಿ ನಡೆಸಲಾಗುವ ಕೊಂಡೋತ್ಸವದಲ್ಲಿ ಅಗ್ನಿಕೊಂಡ ಹಾಯುವಾಗ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದ ಅರ್ಚಕ ಸುಟ್ಟಗಾಯಗಳಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
Vijaya Karnataka Web the priest who fell into the fire at the village goddess kondotsava
ಗ್ರಾಮದೇವತೆ ಕೊಂಡೋತ್ಸವದಲ್ಲಿ ಅಗ್ನಿಕೊಂಡಕ್ಕೆ ಬಿದ್ದ ಅರ್ಚಕ


ಅರ್ಚಕ ಮುನಿಮಲ್ಲಪ್ಪ ಗಯಗೊಂಡವರು. ಕೆರಳಾಳುಸಂದ್ರ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಏಳುಮುಖದ ಮಾರಮ್ಮ ಮತ್ತು ಕಬ್ಬಾಳಮ್ಮ ದೇವಿಯ ಕೋಂಡೋತ್ಸವದಲ್ಲಿ ಕಬ್ಬಾಳಮ್ಮನ ದೇವಿಯ ಹೊತ್ತ ಅರ್ಚಕ ನಾಗೇಶ್‌ ಕೊಂಡೋತ್ಸವ ಹಾಯುವಾಗ ಕಿಕ್ಕಿರಿದು ನಿಂತಿದ್ದ ಭಕ್ತಾದಿಗಳ ಕೇಕೆಗಳ ನಡುವೆ ಅಗ್ನಿಕೊಂಡವನ್ನು ಯಶಸ್ವಿಯಾಗಿ ಪ್ರವೇಶಿಸಿ ಹೊರಬಂದರು. ನಂತರ ಅಗ್ನಿಕೊಂಡೋತ್ಸವ ಪ್ರವೇಶಿಸಲು ಮುಂದಾದ ಏಳುಮುಖದ ಮಾರಮ್ಮ ದೇವಿಯ ಅರ್ಚಕ ಮುನಿಮಲ್ಲಪ್ಪ ಅಗ್ನಿಕೊಂಡ ಪ್ರವೇಶ ಪಡೆದ ಸ್ವಲ್ಪದರಲ್ಲೇ ಆಯತಪ್ಪಿ ಅಗ್ನಿಕೊಂಡದಲ್ಲೇ ಮುಗ್ಗರಿಸಿ ಬಿದ್ದರು.

ಆಯತಪ್ಪಿ ಬಿದ್ದ ಅರ್ಚಕ: ಒಂದೇ ಅಗ್ನಿಕೊಂಡದಲ್ಲಿ ಎರಡು ದೇವರುಗಳ ಕೊಂಡೋತ್ಸವ ನಡೆಯುತ್ತದæ. ಇಲ್ಲಿ ಪ್ರಥಮ ಬಾರಿಗೆ ಕೊಂಡ ಪ್ರವೇಶ ಮಾಡಿದ ಕಬ್ಬಾಳಮ್ಮ ಅರ್ಚಕ ಯಶಸ್ವಿಯಾಗುತ್ತಿದ್ದಂತೆ, ಎರಡನೇ ಕೊಂಡೋತ್ಸವಕ್ಕೆ ಏಳುಮುಖದ ಮಾರಮ್ಮನ ಪ್ರವೇಶಕ್ಕೆ ನೆರೆದಿದ್ದ ಭಕ್ತಾದಿಗಳ ಜಯಘೋಷ ಹಾಗೂ ಕಿರುಚಾಟದ ನಡುವೆ ಪ್ರವೇಶ ಪಡೆಯಲು ಮುಂದಾದ ಅರ್ಚಕ ಭಕ್ತಾದಿಗಳ ಕೂಗಾಟದಿಂದ ವೇಗವಾಗಿ ಕೊಂಡೋತ್ಸವಕ್ಕೆ ಪ್ರವೇಶ ಪಡೆದಿದ್ದರಿಂದ ಆಯತಪ್ಪಿ ಬೀಳುವಂತಾಯಿತು ಎಂದು ನೆರೆದಿದ್ದ ಭಕ್ತರು ಹಾಗು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಹಲವಾರು ಬಾರಿ ಕೊಂಡೋತ್ಸವ ಪ್ರವೇಶಿಸಿದ್ದ ಅರ್ಚಕ ಮುನಿಮಲ್ಲಪ್ಪನಿಗೆ 60 ವರ್ಷ ಮೀರಿದ್ದು, ಅವರ ವಯಸ್ಸು ಸಹ ಸಹಕರಿಸಲಿಲ್ಲ ಎನ್ನುವ ಮಾತುಗಳು ಭಕ್ತವೃಂದದಲ್ಲಿ ಕೇಳಿಬಂದವು.

ಆಸ್ಪತ್ರೆಗೆ ದಾಖಲು: ಅಗ್ನಿಕೊಂಡ ಪ್ರವೇಶ ಪಡೆಯುತ್ತಿದ್ದಂತೆ ಆಯತಪ್ಪಿ ಬಿದ್ದ ಅರ್ಚಕ ಮುನಿಮಲ್ಲಪ್ಪ ತಡವರಿಸಿಕೊಂಡು ಅಗ್ನಿಕೊಂಡದಿಂದ ಎದ್ದು ಹಿಂದಕ್ಕೆ ತೆರಳಿ ಅಗ್ನಿಕೊಂಡ ಬಾಗಿಲಿಗೆ ತೆರಳಿದರು ಅಲ್ಲಿಂದ ಗ್ರಾಮದ ಜನತೆ ಅವರನ್ನು ಸಂತೈಸಿ ಅಲ್ಲಿಂದ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅರ್ಚಕನಿಗೆ ಕೈಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಚೇತರಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರಿಂದ ಮೊಬೈಲ್‌ ಕಸಿದು ಬೆದರಿಕೆ:

ಬುಧವಾರ ಬೆಳಗ್ಗೆ ಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದ ಯುವಕರು ಹಾಗು ಭಕ್ತಾದಿಗಳು ಕೊಂಡೋತ್ಸವದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನ್ನು ಗಮನಿಸಿದ ರಕ್ಷ ಣೆಗೆಂದು ತೆರಳಿದ್ದ ಪೊಲೀಸರು ಯುವಕರಿಗೆ ವಿಡಿಯೋ ಯಾರಿಗೂ ನೀಡದಂತೆ ಮೊಬೈಲ್‌ ಕಸಿದು ಬೆದರಿಕೆ ಹಾಕಿದ್ದರು ಎಂದು ವಿಡಿಯೋ ಚಿತ್ರೀಕರಿಸಿದ್ದ ಯುವಕರು ದೂರಿದ್ದಾರೆ. ರಕ್ಷ ಣೆಗೆಂದು ಬಂದ ಪæäಲೀಸರು ನಮ್ಮನ್ನು ಬೆದರಿಸುವ ಮೂಲಕ ರಕ್ಷ ಣೆ ಬದಲು ಬೆದರಿಕೆ ಹಾಕಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ