ಆ್ಯಪ್ನಗರ

ಎಣ್ಣೆ ಮಜ್ಜನ, ಹೈಡ್ರೋಥೆರಪಿ ಪಡೆದ ಪ್ರೊಕಬಡ್ಡಿ ತಂಡ

ಪ್ರೊಕಬ್ಬಡಿ ಆಟಗಾರರು ಪ್ರಕೃತಿ ಚಿಕಿತ್ಸೆಗೆ ದಾಸರಾಗಿ ಮಾಗಡಿಯ ಸೋಲೂರು ಬಳಿಯ ಪ್ರಕೃತಿ ಚಿಕಿತ್ಸಾಲಯದಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka 8 Sep 2019, 3:37 pm
ಮಾಗಡಿ ಗ್ರಾಮಾಂತರ: ಪ್ರೊಕಬ್ಬಡಿ ಆಟಗಾರರು ಪ್ರಕೃತಿ ಚಿಕಿತ್ಸೆಗೆ ದಾಸರಾಗಿ ಮಾಗಡಿಯ ಸೋಲೂರು ಬಳಿಯ ಪ್ರಕೃತಿ ಚಿಕಿತ್ಸಾಲಯದಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web the prokabuddy team which received an oil marrow hydrotherapy
ಎಣ್ಣೆ ಮಜ್ಜನ, ಹೈಡ್ರೋಥೆರಪಿ ಪಡೆದ ಪ್ರೊಕಬಡ್ಡಿ ತಂಡ


ಕ್ರೀಡಾಪಟುಗಳಿಗೆ ಚೈತನ್ಯ ಹೆಚ್ಚಿಸಿಕೊಳ್ಳುವ ಸಲುವಾಗಿ ತೈಲಮಜ್ಜನ ಮತ್ತು ಶೀರೋದಾರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ಸಮಯದಲ್ಲಿಇರಾನ್‌ ಮೂಲದ ತೆಲುಗು ಟೈಟಾನ್‌ ತಂಡದ ಕಬಡ್ಡಿ ಕೋಚ್‌ ಗೋಲ್‌ ಮರಾಜ ಮಜರ ಮಾತನಾಡಿ, ''ಆಟಗಾರರಿಗೆ ದೈಹಿಕ ಮತ್ತು ಮಾನಸಿಕ ಗಟ್ಟಿತನ ಇರಬೇಕು. ಅದು ನಮ್ಮೊಳಗೆ ಸದಾ ಜಾಗೃತವಾಗಿರುವಂತೆ ಮಾಡಲು ಭಾರತೀಯ ಪದ್ಧತಿಗಳಾದ ಯೋಗ ಮತ್ತು ಚಿಕಿತ್ಸಾ ಪದ್ಧತಿಗಳು ತುಂಬಾ ಪರಿಣಾಮಕಾರಿ,'' ಎಂದರು.

ನಿಸರ್ಗ ಚಿಕಿತ್ಸೆಯ ತಜ್ಞವೈದ್ಯ ಡಾ ಆರ್‌.ಚೇತನ್‌ಕುಮಾರ್‌ ಮಾತನಾಡಿ, ''ಕ್ರೀಡಾಪಟುಗಳಿಗೆ ಏಕಾಗ್ರತೆ ಮತ್ತು ನೈಸರ್ಗಿಕ ಚಿಕಿತ್ಸೆಯ ಪಾಠ ಅವರ ಕ್ರೀಡೆಗೆ ಮತ್ತಷ್ಟು ಪುಷ್ಟಿ ಒದಗಿಸಲಿದೆ. ದೈಹಿಕ ಸದೃಢತೆ ಮತ್ತು ರಣತಂತ್ರ ರೂಪಿಸಲು ಸೈಸರ್ಗಿಕ, ಯೋಗ ಚಿಕಿತ್ಸೆ ವರವಾಗಲಿದೆ,'' ಎಂದರು.

ದೈಹಿಕ ಕ್ಷಮತೆ ಅಗತ್ಯ: ತಂಡದ ಪ್ರಮುಖ ಆಟಗಾರ ಬಾಹುಬಲಿ ಮಾತನಾಡಿ, ''ಕಬಡ್ಡಿ ಆಟಗಾರರಿಗೆ ಮೊದಲು ಬೇಕಾದದ್ದು ದೈಹಿಕ ಕ್ಷಮತೆ. ಇದರೊಂದಿಗೆ ಹೆಚ್ಚು ಹೊತ್ತು ಉಸಿರನ್ನು ಬಿಗಿ ಹಿಡಿದು ಏಕಾಗ್ರತೆಯಿಂದ ವ್ಯಾಘ್ರ ಬೇಟೆಯಾಡುವ ರೀತಿ ಆಟವಾಡಬೇಕು. ಆಗ ಎದುರಾಳಿ ಎಂತಹ ಬಲಶಾಲಿಯಾದರು ಸಹ ನಾನು ಚಂದದಿಂದ ಆಟವಾಡಿಸಬಲ್ಲೆ. ಇದಕ್ಕೆ ಯೋಗ ಮತ್ತು ಪ್ರಾಣಾಯಾಮ ನನಗೆ ಹೆಚ್ಚು ಶಕ್ತಿಯನ್ನು ನೀಡಿದೆ,'' ಎಂದು ತಿಳಿಸಿದರು.

ಈ ಸಂದರ್ಭದಲ್ಲಿಕ್ರೀಡಾಪಟುಗಳಿಗೆ ಪಿಜಿಯೋಥೆರಪಿ, ಮತ್ತು ತೈಲ ಮಜ್ಜನ ಹಾಗೂ ಯೋಗ ಪ್ರಾಣಾಯಾಮ ತರಬೇತಿಗಳನ್ನು ನೀಡಲಾಯಿತು. ನಂತರ ಎಲ್ಲಾಕ್ರೀಡಾಪಟುಗಳನ್ನು ಸನ್ಮಾನಿಸಿ ಕಳುಹಿಸಲಾಯಿತು.

ತೆಲುಗು ಟೈಟನ್ಸ್‌ ಕಬ್ಬಡ್ಡಿ ತಂಡದ ಕಾರ‍್ಯನಿರ್ವಾಹಕ ಅಧಿಕಾರಿ ಶ್ರೀನಾಥ್‌ರೆಡ್ಡಿ, ಆಟಗಾರರಾದ ಬಾಹುಬಲಿ, ವಿಶಾಲ್‌ ಭಾರಧ್ವಾಜ್‌, ಸೂರಜ್‌ದೇಸಾಯಿ, ಸಿದ್ದಾರ್ಥದೇಸಾಯಿ, ಸಿ.ಅರುಣ್‌, ಅಮಿತ್‌ಕುಮಾರ್‌, ಪರ್ಹಾದ್‌, ಎಂ.ಆರ್‌.ಆರ್‌.ಆಸ್ಪತ್ತೆಯ ಡಾ.ದೇಸಾಯಿ, ಡಾ.ಪ್ರಗತಿ, ಡಾ.ಶ್ವೇತಾ, ಡಾ.ಸುಮಂಗಲಾ ಮತ್ತಿತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ