ಆ್ಯಪ್ನಗರ

ಗಂಡ ಹೆಂಡತಿ ಜಗಳದಲ್ಲಿಬಯಲಾದ ಗಾಂಜಾ ರಹಸ್ಯ !

ಗಂಡ-ಹೆಂಡತಿ ಜಗಳದಲ್ಲಿಬೃಹತ್‌ ಗಾಂಜಾ ದಂಧೆಯೊಂದು ಬಯಲಾಗಿದ್ದು, ನಗರದಲ್ಲಿ ಪೊಲೀಸರು ಬರೋಬ್ಬರಿ 44 ಕೆ.ಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.!

Vijaya Karnataka 4 Sep 2019, 3:11 pm
ರಾಮನಗರ: ಗಂಡ-ಹೆಂಡತಿ ಜಗಳದಲ್ಲಿಬೃಹತ್‌ ಗಾಂಜಾ ದಂಧೆಯೊಂದು ಬಯಲಾಗಿದ್ದು, ನಗರದಲ್ಲಿ ಪೊಲೀಸರು ಬರೋಬ್ಬರಿ 44 ಕೆ.ಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.!
Vijaya Karnataka Web the secret of cannabis that husbands and wives fight
ಗಂಡ ಹೆಂಡತಿ ಜಗಳದಲ್ಲಿಬಯಲಾದ ಗಾಂಜಾ ರಹಸ್ಯ !


ಐಜೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಹನುಮಂತನಗರ ರಾಯರಬೀದಿಯಲ್ಲಿವಾಸವಿರುವ ಬೈರೇಗೌಡ ಎಂಬುವರ ಮನೆಯಲ್ಲಿ20 ಕೆಜೆ ಹಾಗೂ ಅಲ್ಲಿಂದ ಮಾರಾಟವಾಗಿ ಸಾಗಿಸಲ್ಪಡುತ್ತಿದ್ದ 24 ಕೆಜಿ ಗಾಂಜಾವನ್ನು ನಗರದ ಈದ್ಗ ಮೈದಾನದ ಬಳಿ ವಶಪಡಿಸಿಕೊಳ್ಳಲಾಗಿದೆ.

ಆಗಿದ್ದೇನು?:
ಬೈರೇಗೌಡ ಹಾಗು ಆತನ ಪತ್ನಿ ನಡುವೆ ಸೋಮವಾರ ಜಗಳ ಶುರುವಾಗಿದೆ. ಹೀಗಾಗಿ, ಮನೆಯಲ್ಲಿದ್ದ ಗಾಂಜಾ ತುಂಬಿದ್ದ ಬ್ಯಾಗ್‌ ಅನ್ನು ನೇರವಾಗಿ ಮಹಿಳಾ ಠಾಣೆಗೆ ನೀಡಿದ್ದಾಳೆ. ನನ್ನ ಗಂಡ ಈ ಬ್ಯಾಂಗ್‌ ಇಟ್ಟುಕೊಂಡು ವ್ಯವಹಾರ ಮಾಡುತ್ತಾನೆ. ಇದರಲ್ಲಿಏನಿದೆ ಎಂಬುದು ನನಗೆ ಗೊತ್ತಿಲ್ಲ. ಇದರ ಬಗ್ಗೆ ಪೊಲೀಸರಿಗೆ ಹೇಳುತ್ತೇನೆ ಎಂದಾಗಲೆಲ್ಲಹೊಡೆಯುತ್ತಾನೆ ಎಂದು ದೂರು ನೀಡಿದ್ದಾಳೆ.

ಪೊಲೀಸ್‌ ಠಾಣೆಯ ಸಿಬ್ಬಂದಿ ಬ್ಯಾಗ್‌ ಪರಿಶೀಲನೆ ನಡೆಸಿದ ಬಳಿಕ ಗಾಂಜಾ ಇರುವುದು ಬೆಳಕಿಗೆ ಬಂದಿದೆ. ಬಳಿಕ ಐಜೂರು ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಬಳಿಕ ಕಾರ‍್ಯಪ್ರವೃತ್ತರಾದ ಪೊಲೀಸರು ದಾಳಿ ನಡೆಸಿ 44 ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ಆರೋಪಿ ಬೈರೇಗೌಡ ಎಂಬುವರ ಮನೆಯಲ್ಲಿಅಪಾರ ಪ್ರಮಾಣದಲ್ಲಿಗಾಂಜಾ ಸಂಗ್ರಹಿಸಿಟ್ಟು, ನಂತರ ಇಲ್ಲಿಂದ ಮೈಸೂರು, ಕೊಡಗು, ಕೇರಳಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆಂಧ್ರದಿಂದ ಇಲ್ಲಿಗೆ ವ್ಯಕ್ತಿಯೊಬ್ಬ ಗಾಂಜಾ ತಂದುಕೊಡುತ್ತಿದ್ದ ಎನ್ನಲಾಗಿದೆ. ಬೆಂಗಳೂರಿನಿಂದ ಮತ್ತೊಬ್ಬ ಆರೋಪಿ ಸಿದ್ಧಿಕ್‌ ಸೇರಿ ಒಟ್ಟು 4 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಕೆ.ಜಿ ಪ್ಯಾಕೆಟ್‌ 10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಐಜೂರು ಠಾಣೆ ಪಿಎಸ್‌ಐ ಶುಭಾಂಬಿಕ ನೇತೃತ್ವದ ತಂಡ ದಾಳಿ ನಡೆಸಿದ್ದು, ಇದು ನಗರದಲ್ಲಿನಡೆದ ಅತಿದೊಡ್ಡ ಗಾಂಜಾ ಪ್ರಕರಣ ಎನ್ನಬಹುದು.

ಕೋಟ್‌..!

ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. 44 ಕೆಜಿ ಗಾಂಜಾ ಪತ್ತೆಯಾಗಿದೆ. ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

-ಡಾ.ಅನೂಪ್‌ ಎ.ಶೆಟ್ಟಿ , ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ರಾಮನಗರ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ