ಆ್ಯಪ್ನಗರ

ಜಿಲ್ಲೆಯಲ್ಲಿಪೊಲೀಸರಿಗಿಂತ ರೌಡಿ ಶೀಟರ್‌ಗಳೇ ಹೆಚ್ಚು !

ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಯಲ್ಲಿಕಾನೂನು ಕಾಪಾಡಬೇಕಿರುವ ಪೊಲೀಸರಿಗಿಂತ ಕಾನೂನು ಉಲ್ಲಂಘನೆ ಮಾಡುವ ರೌಡಿ ಶೀಟರ್‌ಗಳ ಸಂಖ್ಯೆಯೇ ಹೆಚ್ಚಿದೆ! ಇರುವ ಪುಂಡರ ಸಂಖ್ಯೆಗೆ ಹೋಲಿಸಿದರೆ ಕೇವಲ ಅರ್ಧದಷ್ಟು ಮಾತ್ರವೇ ಪೊಲೀಸರು ಇರುವುದು ವಿರ್ಪಯಾಸವಾದರೂ ಸತ್ಯ.

Vijaya Karnataka 14 Sep 2019, 3:15 pm
ರಾಮನಗರ: ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಯಲ್ಲಿಕಾನೂನು ಕಾಪಾಡಬೇಕಿರುವ ಪೊಲೀಸರಿಗಿಂತ ಕಾನೂನು ಉಲ್ಲಂಘನೆ ಮಾಡುವ ರೌಡಿ ಶೀಟರ್‌ಗಳ ಸಂಖ್ಯೆಯೇ ಹೆಚ್ಚಿದೆ! ಇರುವ ಪುಂಡರ ಸಂಖ್ಯೆಗೆ ಹೋಲಿಸಿದರೆ ಕೇವಲ ಅರ್ಧದಷ್ಟು ಮಾತ್ರವೇ ಪೊಲೀಸರು ಇರುವುದು ವಿರ್ಪಯಾಸವಾದರೂ ಸತ್ಯ.
Vijaya Karnataka Web there are more rowdy sheets than the police in the district
ಜಿಲ್ಲೆಯಲ್ಲಿಪೊಲೀಸರಿಗಿಂತ ರೌಡಿ ಶೀಟರ್‌ಗಳೇ ಹೆಚ್ಚು !


ಇಡೀ ಜಿಲ್ಲೆಗೆ 750 ಮಂದಿ ಪೊಲೀಸರು: ಜಿಲ್ಲಾಪೊಲೀಸ್‌ ಇಲಾಖೆಯಲ್ಲಿಬೆಂಗಳೂರು ಗ್ರಾಮಾಂತರ, ಬೆಂಗಳೂರು ಸಿಟಿಯು ಸೇರಿ ಒಟ್ಟು 22 ಪೊಲೀಸ್‌ ಠಾಣೆಗಳಿವೆ. ಇವುಗಳೆಲ್ಲವು ಸೇರಿ ಅಂದಾಜು 750 ಮಂದಿ ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆಯಲ್ಲಿಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ, ಡಿವೈಎಸ್ಪಿ, ವೃತ್ತ ನಿರೀಕ್ಷಕರೆಲ್ಲರು ಸೇರಿದ್ದಾರೆ. ಆದರೆ, ಜಿಲ್ಲೆಯಲ್ಲಿಬರೊಬ್ಬರಿ 1,562 ಮಂದಿ ರೌಡಿಶೀಟರ್‌ಗಳಿದ್ದು, ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

1500ಕ್ಕಿಂತಲೂ ಹೆಚ್ಚು ರೌಡಿ ಎಲಿಮೆಂಟ್‌ಗಳು: ಪೊಲೀಸ್‌ ಇಲಾಖೆಯಲ್ಲಿನ ಡಿಎಆರ್‌(ಚಾಲಕರು), ಸಿಎಆರ್‌, ಕೆಎಸ್‌ಆರ್‌ಪಿ, ಲಾ ಅಂಡ್‌ ಆರ್ಡರ್‌, ಕ್ರೈಂ, ಟ್ರಾಫಿಕ್‌..ಹೀಗೆ ವಿವಿಧ ಇಲಾಖೆಗಳ ಸಿಬ್ಬಂದಿ ಸಂಖ್ಯೆಯನ್ನು ಕ್ರೂಢಿಕರಿಸಿದರೂ, 800ರ ಗಡಿ ದಾಟುವುದೇ ಇಲ್ಲ. ಆದರೆ, ರೌಡಿ ಶೀಟರ್‌ಗಳ ಸಂಖ್ಯೆ 1500 ರ ಗಡಿ ದಾಟ್ಟಿದ್ದು, ಮುಂದಿನ ದಿನಗಳಲ್ಲಿಇನ್ನಷ್ಟು ಹೆಚ್ಚಾಗುವ ಸಾಧ್ಯತೆಯು ಉಂಟು.

ಹೆಚ್ಚಿದ ಪುಂಡರ ಅಟ್ಟಹಾಸ: ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿಸಣ್ಣ ಪುಟ್ಟ ಅಪರಾಧ ಕೃತ್ಯಗಳು ನಡೆಯುತ್ತಲೇ ಇದ್ದು, ಸಾರ್ವಜನಿಕರು ತಮ್ಮ ಹಣ, ಮೊಬೈಲ್‌ ಸೇರಿದಂತೆ ಚಿನ್ನಾಭರಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ, ರೌಡಿಗಳ ಪುಂಡಾಟ, ಬೆದರಿಕೆಯಿಂದ ಹೆದರಿ ಪೊಲೀಸರಿಗೆ ದೂರು ನೀಡುವ ಧೈರ್ಯ ಮಾಡುತ್ತಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡು ಹಳೆಯ ವೃತ್ತಿಪರ ಅಪರಾಧಿಗಳು ಮತ್ತು ರೌಡಿಶೀಟರ್‌ಗಳು ತಮ್ಮ ಅಪರಾಧ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇವರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ.

ಪೊಲೀಸರ ಮೇಲೆ ಪುಂಡರ ದಾಳಿ: ಕಳೆದ 10 ದಿನಗಳ ಹಿಂದಷ್ಟೆ ಮಾಗಡಿಯ ವೃತ್ತ ನಿರೀಕ್ಷಕರು ರೌಡಿಶೀಟರ್‌ಗಳ ಮೇಲೆ ಗುಂಡು ಹಾರಿಸಿದ್ದರು. ಒಬ್ಬ ಪೊಲೀಸ್‌ ಪೇದೆ ಆಸ್ಪತ್ರೆ ಸೇರಿದ್ದ. ಈ ರೀತಿಯ ಪ್ರಕರಣಗಳು ತಾವರೆಕೆರೆ, ಕುಂಬಳಗೋಡು, ಕಗ್ಗಲೀಪುರ ಠಾಣಾ ವ್ಯಾಪ್ತಿಯಲ್ಲಿಹೆಚ್ಚಿದ್ದರೆ, ಕೊಲೆ, ಸುಲಿಗೆ ಪ್ರಕರಣಗಳು ಕನಕಪುರ ಠಾಣಾ ವ್ಯಾಪ್ತಿಯಲ್ಲಿಹೆಚ್ಚುತ್ತಲೇ ಇದೆ. ಒಂದೆಡೆ ಪೊಲೀಸರ ಸಂಖ್ಯೆ ದಿನದಿಂದ ದಿನ್ಕಕೆ ಕಡಿಮೆಯಾಗುತಿದ್ದರೆ, ಪುಂಡರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ.

ಇಲಾಖೆ ಏನು ಮಾಡುತ್ತಿದೆ?: ಚುನಾವಣೆ ಸೇರಿದಂತೆ ಗೌರಿ ಹಬ್ಬ, ರಂಜಾನ್‌ ಮತ್ತಿತರ ಹಬ್ಬ ಹರಿದಿನಗಳಲ್ಲಿಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಳೆಯ ಅಪರಾಧಿಗಳು ಸೇರಿದಂತೆ ರೌಡಿ ಶೀಟರ್‌ಗಳ ಪರೇಡ್‌ ನಡೆಸಿ ಎಚ್ಚರಿಕೆ ನೀಡಲಾಗಿದೆ. ಇನ್ನು ಕೆಲವನ್ನು ವಿಶೇಷ ನ್ಯಾಯಿಕ ದಂಡಾಧಿಕಾರ ಬಳಸಿ ಬಂಧಿಸಲಾಗಿದ್ದು, ಬಂಧನದ ವೇಳೆ ಅವರ ಕಡೆಯವರು ಅಥವಾ ಕುಟುಂಬದವರು ಜಾಮೀನು ನೀಡಿದರೆ ಬಿಡುಗಡೆ ಮಾಡಲಾಗುತ್ತದೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಯೊಬ್ಬರು.

ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದಲ್ಲಿಸರಾಸರಿ 150 ಮಂದಿ ಸಿಬ್ಬಂದಿ ಇದ್ದರೆ ಹೆಚ್ಚು. ಹೀಗಾಗಿ ಒಬ್ಬರು ಕನಿಷ್ಟ 5ಮಂದಿ ರೌಡಿಶೀಟರ್‌ಗಳ ಹೆಡೆಮುರಿ ಕಟ್ಟಬೇಕಿರುವುದು ಇಲಾTಗೂ ತಲೆನೋವಾಗಿ ಪರಿಣಮಿಸಿದೆ.

ವಿಶೇಷ ನ್ಯಾಯಿಕ ದಂಡಾಧಿಕಾರ: ಸರಗಳ್ಳತನ, ಸುಲಿಗೆ, ಪುಂಡಾಟ, ಪಿಕ್‌ಪಾಕೆಟ್‌ ಸೇರಿದಂತೆ ನಾನಾ ಅಪರಾಧ ಪ್ರಕರಣ ನಡೆದಾಗ ಮಾತ್ರವಲ್ಲ, ಸಣ್ಣ ಅನುಮಾನ ಬಂದಾಗಲೂ ಹಳೆ ಅಪರಾಧಿಗಳು, ರೌಡಿಶೀಟರ್‌ಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಬೇಕು. ಜಿಲ್ಲಾಧಿಕಾರಿಗಳಿಗೆ ವಿಶೇಷ ನ್ಯಾಯಿಕ ದಂಡಾಧಿಕಾರ ಇದ್ದು, ಅದನ್ನು ಬಳಸಿ, ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿ ಜೈಲಿಗಟ್ಟುವ ಮೂಲಕ ಜಿಲ್ಲೆಯನ್ನು ಅಪರಾಧ ಮುಕ್ತ ನಗರವಾಗಿಸುವ ಪ್ರಯತ್ನ ನಡೆಸಬೇಕಿದೆ.

ಸಾರ್ವಜನಿಕ ಸ್ಥಳಗಳಲ್ಲಿಅನುಮಾನಾಸ್ಪದವಾಗಿ ಓಡಾಡುವ ಹಳೆಯ ಅಪರಾಧಿಗಳು ಮತ್ತು ರೌಡಿಶೀಟರ್‌ಗಳು ಕಂಡು ಬಂದರೆ ತಕ್ಷಣ ವಶಕ್ಕೆ ಪಡೆದು, ವಿಚಾರಣೆ ವೇಳೆ ಸರಿಯಾದ ಉತ್ತರ ನೀಡದಿದ್ದಲ್ಲಿಅಂತಹವರನ್ನು ಜಿಲ್ಲಾಧಿಕಾರಿಗಳ ಎದುರು ಹಾಜರುಪಡಿಸುತ್ತಾರೆ. ಈ ಸಂಬಂಧ ವಿಚಾರಣೆ ನಡೆಸುವ ಡಿಸಿಗೆ ಅವರಿಗೆ ಸೂಕ್ತ ಉತ್ತರ ನೀಡದಿದ್ದರೆ ಅಂತಹ ವ್ಯಕ್ತಿಗಳನ್ನು ಸಿಆರ್‌ಪಿಸಿ ಕಲಂ 109 ಅನ್ವಯ ಬಂಧಿಸಿ, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ.


ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇರುವ ವಿಶೇಷ ನ್ಯಾಯಿಕ ದಂಡಾಧಿಕಾರದಿಂದ ಅನುಮಾನಾಸ್ಪದವಾಗಿ ಓಡಾಡುವ ಹಳೆಯ ಅಪರಾಧಿಗಳು ಮತ್ತು ರೌಡಿ ಶೀಟರ್‌ಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು. ಇದರಿಂದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬಹುದಲ್ಲದೆ ನ್ಯಾಯಾಲಯಗಳ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ.

-ಅರವಿಂದ್‌, ನ್ಯಾಯವಾದಿ

ಜಿಲ್ಲೆಯಲ್ಲಿ1,562 ಮಂದಿ ರೌಡಿಶೀಟರ್‌ಗಳಿದ್ದಾರೆ. ಅವರುಗಳಿಗೆ ಎಚ್ಚರಿಕೆ ನೀಡಲಾಗಿದೆ. ಕಾನೂನು ಉಲ್ಲಂಘನೆ ಮಾಡುವವರ ಮೇಲೆ ರೌಡಿಶೀಟರ್‌ ತೆರೆಯಲಾಗುತ್ತಿದೆ. ಇನ್ನು ಗಡಿಪಾರು, ಜೈಲಿಗಟ್ಟುವ ವಿಶೇಷ ನ್ಯಾಯಿಕ ದಂಡಾಧಿಕಾರ ಜಿಲ್ಲಾಧಿಕಾರಿಗಳಿದೆ.

-ಡಾ.ಅನೂಪ್‌ ಎ.ಶೆಟ್ಟಿ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ