ಆ್ಯಪ್ನಗರ

ಮನೆ ಕಳ್ಳತನಕ್ಕೆ ನುಗ್ಗಿದ ಖದೀಮನಿಗೆ ಸಾಕು ನಾಯಿಯಿಂದ ದಿಗ್ಬಂಧನ!

ಅಪರಿಚಿತ ವ್ಯಕ್ತಿ ಬಂದಿದ್ದನ್ನು ಕಂಡ ನಾಯಿ ಸತತವಾಗಿ ಅವನತ್ತ ಬೊಗಳತೊಡಗಿದ್ದರಿಂದ ವಿಚಲಿತಗೊಂಡ ಕಳ್ಳ ಮನೆಯ ಶೌಚಾಲಯದಲ್ಲಿ ಅವಿತಿದ್ದು, ತಕ್ಷಣ ಬಾಗಿಲು ಮುಚ್ಚಿದ ಮನೆಯವರು ನೆರೆಹೊರೆಯವರ ನೆರವಿನೊಂದಿಗೆ ಕಳ್ಳನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

Vijaya Karnataka Web 20 Nov 2018, 1:38 pm
ರಾಮನಗರ: ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಖದೀಮನಿಗೆ ಸಾಕು ನಾಯಿಯೊಂದು ತಕ್ಕ ಶಾಸ್ತಿ ಮಾಡಿದ ಸ್ವಾರಸ್ಯಕರ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Vijaya Karnataka Web nat


ಹೌದು, ವಿವೇಕಾನಂದ ನಗರದ ಶಿಕ್ಷಕ ಶ್ರೀನಿವಾಸ್ ಆಚಾರ್ ಅರವರ ಮನೆಗೆ ರಾತ್ರಿ 12 ಗಂಟೆ ಸುಮಾರಿಗೆ ಕಾಂಪೌಂಡ್ ಹಾರಿ ಕಳ್ಳನೊಬ್ಬ ಪ್ರವೇಶಿಸಿದ್ದಾನೆ. ಅಪರಿಚಿತ ವ್ಯಕ್ತಿ ಬಂದಿದ್ದನ್ನು ಕಂಡ ನಾಯಿ ಸತತವಾಗಿ ಅವನತ್ತ ಬೊಗಳತೊಡಗಿದ್ದರಿಂದ ವಿಚಲಿತಗೊಂಡ ಕಳ್ಳ ಮನೆಯ ಶೌಚಾಲಯದಲ್ಲಿ ಅವಿತಿದ್ದು, ತಕ್ಷಣ ಬಾಗಿಲು ಮುಚ್ಚಿದ ಮನೆಯವರು ನೆರೆಹೊರೆಯವರ ನೆರವಿನೊಂದಿಗೆ ಕಳ್ಳನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಳ್ಳತನಕ್ಕೆ ಬರುವ ಕೆಲವೇ ನಿಮಿಷಗಳ ಮುನ್ನ ಈ ಕಳ್ಳ ರಸ್ತೆಯಲ್ಲಿ ಪೊಲೀಸರಿಗೆ ಎದುರಾಗಿದ್ದು ಬೀಟ್ ಪೊಲೀಸರು‌ ಎಚ್ಚರಿಕೆ ನೀಡಿದ್ದರೆಂಬ ಮಾಹಿತಿ ತಿಳಿದು ಬಂದಿದೆ.

ಮಾಜಿ ನಗರಸಭಾಧ್ಯಕ್ಷ ಲೋಹಿತ್ ಬಾಬು ತಮ್ಮ ವಾರ್ಡಿನಲ್ಲಿ ನಡೆದಿರುವ ಈ ಕಳ್ಳತನದ ಪ್ರಯತ್ನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಐಜೂರು ಪೊಲೀಸರಿಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ