ಆ್ಯಪ್ನಗರ

ಮೂವತ್ತು ವರ್ಷಗಳ ಬಳಿಕ ಅಧ್ಯಕ್ಷ ಗಾದಿಗೆ ಗುದ್ದಾಟ

ಮೂವತ್ತು ವರ್ಷಗಳ ಬಳಿಕ ಕುದೂರು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಗಾಧಿಗೆ ...

Vijaya Karnataka 12 Feb 2019, 5:00 am
ಕುದೂರು: ಮೂವತ್ತು ವರ್ಷಗಳ ಬಳಿಕ ಕುದೂರು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಗಾಧಿಗೆ ಚುನಾವಣೆ ನಡೆಯುತ್ತಿದೆ. ಅವಿರೋಧವಾಗಿ ಆಯ್ಕೆಯಾದ 12 ಮಂದಿ ನಿರ್ದೇಶಕರು ಅಧ್ಯಕ್ಷಗಾದಿಗೆ ತೆರೆಮರೆಯಲ್ಲಿ ಗುದ್ದಾಟ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web thousands of years later the president was gunned down
ಮೂವತ್ತು ವರ್ಷಗಳ ಬಳಿಕ ಅಧ್ಯಕ್ಷ ಗಾದಿಗೆ ಗುದ್ದಾಟ


ಏನಿದು ಕಸರತ್ತು: ಕುದೂರು ಹಾಲು ಉತ್ಪಾದಕ ಸಹಕಾರ ಸಂಘ ಸ್ಥಾಪನೆಗೊಂಡು 30 ವರ್ಷಗಳೇ ಕಳೆದಿವೆ. ಅಲ್ಲಿಂದ ಇದುವರೆಗೆ ಎಲ್ಲ ಸದಸ್ಯರು ಒಮ್ಮತದಿಂದ ನಿರ್ದೇಶಕರು ಹಾಗೂ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬಂದಿದ್ದರು. ಈ ವರ್ಷ ಕೂಡ ನಿರ್ದೇಶಕರನ್ನು ಸರ್ವಸದಸ್ಯರು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದರಾದರೂ, ಅಧ್ಯಕ್ಷ ಹುದ್ದೆಗೆ ನಿರ್ದೇಶಕರ ನಡುವೆ ಪೈಪೋಟಿ ಏರ್ಪಟ್ಟು ಚುನಾವಣೆ ಅನಿವಾರ‍್ಯವಾಗಿದೆ.

ಚುನಾವಣೆಗೆ ಕೋರಂ ಕೊರತೆ: ಸದ್ಯ 12 ಮಂದಿ ನಿರ್ದೇಶಕರು ತಲಾ 6 ಸದಸ್ಯರಂತೆ ಎರಡು ತಂಡಗಳಾಗಿ ವಿಭಜನೆಗೊಂಡಿದೆ. ಫೆ. 6 ರಂದು ನಡೆಯಬೇಕಿದ್ದ ಅಧ್ಯಕ್ಷ ರ ಆಯ್ಕೆ ಚುನಾವಣೆಗೆ ಒಂದು ಬಣದ 6 ಜನ ನಿರ್ದೇಶಕರು ಗೈರು ಹಾಜರಾದ ಕಾರಣ ಕೋರಂ ಕೊರತೆಯಿಂದ ಚುನಾವಣೆ ಸ್ಥಗಿತಗೊಂಡಿತು.

ತೆರೆಮರೆಯಲ್ಲಿ ರಾಜಕೀಯ ಕಸರತ್ತು: ಇದೇ ಮೊದಲ ಬಾರಿ ಅಧ್ಯಕ್ಷರ ಚುನಾವಣೆ ನಡೆಯುತ್ತಿರುವುದರಿಂದ ಸ್ಥಳೀಯ ರಾಜಕೀಯ ನಾಯಕರು ಚುರುಕಾಗಿದ್ದು, ತಮ್ಮ ಅಭ್ಯರ್ಥಿಯನ್ನು ಸಂಘದ ಮೇಲೆ ಹೇರಲು ತಂತ್ರ ರೂಪಿಸುತ್ತಿದ್ದಾರೆ. ಸಹಕಾರಿ ಸಂಘದಲ್ಲಿ ಒಮ್ಮೆ ರಾಜಕೀಯ ಪ್ರವೇಶವಾದರೆ ಅದರ ಅವನತಿ ಖಚಿತ ಎಂಬುದು ಗೊತ್ತಿರುವ ಗ್ರಾಮಸ್ಥರು ಚಿಂತೆಗೀಡಾಗಿರುವುದು ಸುಳ್ಳಲ್ಲ.

ಅರ್ಹರು 26 ಮಂದಿ: 30 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಂಘದಲ್ಲಿ 187 ಮಂದಿ ಷೇರುದಾರರಿದ್ದರೂ, ಸದ್ಯ ಹಾಲು ಹಾಕುತ್ತಿರುವವರು ಕೇವಲ 80 ಮಂದಿ ಮಾತ್ರ. ಅವರಲ್ಲಿ 67 ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದಾರೆ. ಕೆಎಂಎಫ್‌ ನಿಯಮದ ಪ್ರಕಾರ ಚುನಾವಣೆಗೆ ಸ್ಪರ್ಧಿಸಲು 180ದಿನ ಹಾಲು ಸರಬರಾಜು ಮಾಡಿರಬೇಕು ಹಾಗೂ 3 ಸರ್ವಸದಸ್ಯರ ಸಭೆಗೆ ಹಾಜರಾಗಿರಬೇಕು. ಈ ನಿಯಮದ ಪ್ರಕಾರ ಕೇವಲ 26 ಸದಸ್ಯರು ಮಾತ್ರ ಅರ್ಹರಾಗಿದ್ದರಿಂದ 12 ಜನರನ್ನು ಅವಿರೋಧವಾಗಿ ನಿರ್ದೇಶಕರನ್ನಾಗಿ ಆಯ್ಕೆಮಾಡಲಾಗಿದ್ದು, ಅಧ್ಯಕ್ಷ ಗಾದಿಗೆ ಗುದ್ದಾಟ ನಡೆಯುತ್ತಿದೆ.

ಫೆಬ್ರವರಿ 6 ರಂದು ನಡೆಯಬೇಕಿದ್ದ ಅಧ್ಯಕ್ಷ ರ ಚುನಾವಣೆಗೆ ಕೇವಲ 6 ನಿರ್ದೇಶಕರು ಮಾತ್ರ ಹಾಜರಾಗಿದ್ದರಿಂದ ಕೋರಂ ಕೊರತೆಯಾಗಿ ಚುನಾವಣೆಯನ್ನು ಫೆ.18ಕ್ಕೆ ಮುಂದೂಡಲಾಗಿದೆ.
-ವಿಜಯ್‌ಕುಮಾರ್‌ ಚುನಾವಣಾಧಿಕಾರಿ.

ಕುದೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗಿ 22 ವರ್ಷಗಳ ಕಾಲ ಆವಿರೋಧವಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಈ ಸಾಲಿನ ಚುನಾವಣೆಯಲ್ಲಿ ಕೆಲವು ಸ್ಥಳೀಯ ರಾಜಕೀಯ ಮುಖಂಡರು ಮೂಗು ತೂರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ದುರ್ದೈವ. ಯಾರೇ ಅಧ್ಯಕ್ಷರಾದರೂ ಸಂಘದ ಅಭಿವೃದ್ಧಿಗೆ ಶ್ರಮಿಸಲಿ ಎಂಬುದಷ್ಟೇ ನಮ್ಮ ಕಳಕಳಿ.
-ಯತೀರಾಜು ಮಾಜಿ ಅಧ್ಯಕ್ಷ ರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ