ಆ್ಯಪ್ನಗರ

ಚರ್ಚ್‌ ರಸ್ತೆಯ ಬಳಿ ಕಸದ ರಾಶಿ ಸಂಗ್ರಹ

ಪಟ್ಟಣದ ಚರ್ಚ್‌ ರಸ್ತೆಯ ಚಾಲನ್‌ ರಸ್ತೆ ಬದಿಯಲ್ಲಿ ಕಸದ ರಾಶಿಯ ತುಂಬಿ ಕೊಳೆಯುತ್ತಿದೆ. ಇಲ್ಲಿನ ರಸ್ತೆಗಳಲ್ಲಿ ಪಾದಚಾರಿಗಳು ನಿತ್ಯವೂ ಸಂಚಾರ ನಡೆಸಬೇಕಾದರೆ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ.

Vijaya Karnataka 9 Jun 2019, 5:00 am
ದುರ್ವಾಸನೆ ಸಂಕಟ, ಸಾರ್ವಜನಿಕರಿಗೆ ನಿತ್ಯವೂ ಪಡಿಪಾಟಲು
Vijaya Karnataka Web trash collection near church road
ಚರ್ಚ್‌ ರಸ್ತೆಯ ಬಳಿ ಕಸದ ರಾಶಿ ಸಂಗ್ರಹ


ಚನ್ನಪಟ್ಟಣ: ಪಟ್ಟಣದ ಚರ್ಚ್‌ ರಸ್ತೆಯ ಚಾಲನ್‌ ರಸ್ತೆ ಬದಿಯಲ್ಲಿ ಕಸದ ರಾಶಿಯ ತುಂಬಿ ಕೊಳೆಯುತ್ತಿದೆ. ಇಲ್ಲಿನ ರಸ್ತೆಗಳಲ್ಲಿ ಪಾದಚಾರಿಗಳು ನಿತ್ಯವೂ ಸಂಚಾರ ನಡೆಸಬೇಕಾದರೆ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ.

ಹಂದಿಗಳು ಮತ್ತು ಬೀದಿ ನಾಯಿಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದ್ದು, ಕಸದ ರಾಶಿಯ ಸ್ಥಳ ದುರ್ವಾಸನೆ ಹರಡುತ್ತಿದೆ. ಇಲ್ಲಿನ ನಾಗರಿಕರಿಗೆ ರೋಗ ರುಜಿನದ ಆತಂಕವನ್ನು ತಂದೊಡ್ಡಿದೆ. ನಗರಸಭೆಯ ಯಾವ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಅಲವತ್ತುಗೊಂಡಿದ್ದಾರೆ.

ಹಂದಿ, ನಾಯಿಗಳ ಕಾಟ: ಚರ್ಚೆ ರಸ್ತೆಯ ಚಾಲನ್‌ ರೋಡ್‌ ಮೂಲಕ ಪ್ರತಿಷ್ಠಿತ ಬಡಾವಣೆಗಳು ಸೇರಿದಂತೆ ಹಲವು ಕಡೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ರಾಜಕೇಂಪೇಗೌಡ ಬಡಾವಣೆ, ಮಂಜುನಾಥನಗರ ಹಾಗೂ ಮಂಗಳವಾರಪೇಟೆ ಸೇರಿದಂತೆ ಮುಖ್ಯ ರಸ್ತೆಯ ಸಾರ್ವಜನಿಕರು ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುತ್ತಾರೆ. ಈ ರಸ್ತೆಯ ತೋಟಗಾರಿಕೆಯ ಕಚೇರಿಯ ಮುಂಭಾಗ ತುಂಬಿತುಳುಕುತ್ತಿರುವ ಕಸದ ರಾಶಿಯಲ್ಲಿ ಹಂದಿಗಳು ಹಾಗೂ ಬೀದಿ ನಾಯಿಗಳ ಕಾಟ ತಾಳಲಾರದೆ ಬೇರೆ ಮಾರ್ಗಗಳನ್ನೇ ಬಳಸುವಂತಾಗಿದೆ ಎಂದು ವಾಹನ ಸವಾರರು ಮತ್ತು ಸ್ಥಳೀಯ ನಾಗರಿಕರು ಅರೋಪಿಸಿದ್ದಾರೆ.

ಅಪ್ಪಗೆರೆ, ನೀಲಕಂಠನಹಳ್ಳಿ ರಸ್ತೆ ನಗರದಲ್ಲಿ ಈ ರಸ್ತೆಯ ಬಡಾವಣೆಗಳು ಗ್ರಾಮದ ಆಸು ಪಾಸಿನಲ್ಲಿ ಶಾಲಾ-ಕಾಲೇಜುಗಳು ನಿರ್ಮಾಣವಾಗಿದ್ದು, ಪ್ರತಿ ನಿತ್ಯ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳು ಮತ್ತು ಶಾಲಾ ವಾಹನಗಳಿಗೆ ನಾಯಿ, ಹಂದಿ ಸಿಕ್ಕಿಕೊಳ್ಳುತ್ತವೆ ಎಂಬ ಭಯದಿಂದ ನಿಧಾನವಾಗಿ ಪ್ರಯಾಣಮಾಡುವಂತಾಗಿದೆ. ಮಹಿಳೆಯರು, ಶಾಲಾ ಮಕ್ಕಳು, ವೃದ್ಧರು ಹೆಚ್ಚಾಗಿ ಸಂಚಾರ ಮಾಡುತ್ತಿದ್ದು, ಇಲ್ಲಿನ ಸ್ವಚ್ಛತೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನ ದೂರು ನೀಡಿದರು ಕ್ಯಾರೇ ಅನುತ್ತಿಲ್ಲ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.

ಮನವಿಗೆ ಸ್ಪಂದನೆ ಇಲ್ಲ:
ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಗಳಿಗೆ, ನಗರಸಭೆ ಆಯುಕ್ತರಿಗೆ, ಜನಪ್ರತಿನಿಧಿಗಳು ಮತ್ತು ಮುಖಂಡರಿಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಹಂದಿ, ನಾಯಿಗಳು ರಸ್ತೆ ಮಧ್ಯೆದ ಕಸದ ಮೇಲೆ ವಾಸವಾಗಿದ್ದು, ಸಾರ್ವಜನಿಕರ ಅರೋಗ್ಯದ ದೃಷ್ಟಿಯಿಂದ ಕಸದ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲಿಗೆ ಆಗಮಿಸಿ ವಸ್ತುಸ್ಥಿತಿ ನೋಡಿ ಸ್ವಚ್ಛತೆಗೆ ಮುಂದಾಗದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ವಾರ್ಡ್‌ನ ನಿವಾಸಿಗಳು ಕಿಡಿಕಾರಿದ್ದಾರೆ. ಇನ್ನಾದರೂ ನಗರಸಭೆ ಪರಿಸರ ಮತ್ತು ಅರೋಗ್ಯ ವಿಭಾಗದ ಇಲಾಖೆಗಳ ಅಧಿಕಾರಿಗಳು ಗಮನ ನೀಡುವರೆ ಕಾದು ನೋಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ