ಆ್ಯಪ್ನಗರ

ರಾಮನಗರ: ತಡರಾತ್ರಿ ಅರಣ್ಯ ಇಲಾಖೆ‌ ಬೋನಿಗೆ ಬಿದ್ದ ಎರಡು‌‌ ಚಿರತೆ

ರಾಮನಗರ ಜಿಲ್ಲೆಯಲ್ಲಿ ಮತ್ತೆ ಚಿರತೆ ಹಾವಳಿ ಮಿತಿಮೀರಿದೆ. ತಡರಾತ್ರಿ ಎರಡು ಚಿರತೆ ಅರಣ್ಯ ಇಲಾಖೆ‌ ಬೋನಿಗೆ ಬಿದ್ದಿದೆ. ಈ ತಿಂಗಳಲ್ಲಿ 10ಕ್ಕೂ ಅಧಿಕ‌ ಚಿರತೆಯನ್ನು ಮಾಗಡಿಯಲ್ಲಿ ಸೆರೆ ಹಿಡಿಯಲಾಗಿದೆ.

Vijaya Karnataka Web 26 May 2020, 9:52 am
ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ತಡರಾತ್ರಿ ಎರಡು ಚಿರತೆ ಅರಣ್ಯ ಇಲಾಖೆ‌ ಬೋನಿಗೆ ಬಿದ್ದಿದೆ. ಮಾಡಬಾಳ್ ಹೋಬಳಿಯ ಬೋಡನಪಾಳ್ಯದಲ್ಲಿ ಮಂಗಳವಾರ ಚಿರತೆ ಬೋನಿಗೆ‌ ಬಿದ್ದಿದೆ.
Vijaya Karnataka Web leopard
ಬೋನಿನಲ್ಲಿರುವ ಚಿರತೆ, ಕುತೂಹಲದಿಂದ ನೆರೆದಿರುವ ಗ್ರಾಮಸ್ಥರು


ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ‌ ಮತ್ತೊಂದು‌ ಚಿರತೆ‌‌ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ‌ ಆತಂಕ ಮೂಡಿಸಿದೆ. ಅಲ್ಲದೆ ಕಸಬಾ ಹೋಬಳಿಯ ತಗ್ಗಿಕುಪ್ಪೆ ಗ್ರಾಮದಲ್ಲಿ ಮತ್ತೊಂದು ಚಿರತೆ ಸೆರೆ ಸಿಕ್ಕಿದ್ದು,
ಒಟ್ಟಾರೆ ಈ ತಿಂಗಳಲ್ಲಿ 10ಕ್ಕೂ ಅಧಿಕ‌ ಚಿರತೆಯನ್ನು ಮಾಗಡಿಯಲ್ಲಿ ಸೆರೆ ಹಿಡಿಯಲಾಗಿದೆ.

ಕರಡಿ ಪ್ರತ್ಯಕ್ಷ : ರಾಮನಗರ ಸಮೀಪದ‌ ರಾಮದೇವರ ಬೆಟ್ಟದಲ್ಲಿ ಕರಡಿಯೊಂದು‌ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ. ಯುವಕರು ಬೆಟ್ಟದ ಬಳಿ ವಾಯುವಿಹಾರಕ್ಕೆ ತೆರಳಿದ ವೇಳೆ ಕರಡಿ ಕಾಣಿಸಿಕೊಂಡಿದೆ.

ರಾಮನಗರ, ತುಮಕೂರಲ್ಲಿ ಸ್ಥಳಾಂತರಗೊಂಡ ಚಿರತೆಗಳು

ಕಳೆದವಾರ ಕೂಡ ಕಾಣಿಸಿ, ಸೆರೆಸಿಕ್ಕ ಬಳಿಕ ಮೃತಪಟ್ಟ ಚಿರತೆ:
ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕೋಟೆಕೊಪ್ಪ ಗ್ರಾಮದ ಜಮೀನಿನ ಬೇಲಿಗೆ ಹಾಕಿದ್ದ ಉರುಳಿಗೆ ಸಿಲುಕಿದ್ದ ಸುಮಾರು 3 ವರ್ಷ ಗಂಡು ಚಿರತೆ ಮೇ 22 ರಂದು ಮೃತಪಟ್ಟಿತ್ತು.

ಚಿರತೆ ದಾಳಿಗೆ ಮಾಗಡಿ ವೃದ್ಧೆ ಬಲಿ: ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ

ಕೋಟೆಕೊಪ್ಪ ಗ್ರಾಮದ ರೇಷ್ಮೆ ತೋಟಕ್ಕೆ ಹಾಕಿದ್ದ ತಂತಿಬೇಲಿಯಲ್ಲಿಅಳವಡಿಸಿದ್ದ ಉರುಳಿಗೆ ಚಿರತೆ ಬಿದ್ದಿತ್ತು. ಉರುಳಿನಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದ ಚಿರತೆಯನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದ್ದರು. ತಕ್ಷಣವೇ ಧಾವಿಸಿ ಬಂದ ಪ್ರಾದೇಶಿಕ ಅರಣ್ಯ ಅಧಿಕಾರಿಗಳು, ಜನರನ್ನು ದೂರ ಕಳುಹಿಸಿ, ಉರುಳಿನಿಂದ ಚಿರತೆಯನ್ನು ರಕ್ಷಿಸಲು ಯತ್ನಿಸಿದರು. ಅಷ್ಟರಲ್ಲೇ ಚಿರತೆ ಪ್ರಾಣ ಬಿಟ್ಟಿತು. ಚಿರತೆ ಉರುಳಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅದನ್ನು ನೋಡಲು ಜನಜಾತ್ರೆಯೇ ಸೇರಿತ್ತು. ಇದರಿಂದ ಗಾಬರಿಗೊಂಡ ಚಿರತೆ ಉರುಳಿನಿಂದ ಪಾರಾಗಲು ಯತ್ನಿಸಿತು. ತಂತಿ ಸೊಂಟಕ್ಕೆ ಬಿಗಿದು ಹೃದಯಸ್ತಂಭನವಾಗಿ ಚಿರತೆ ಸಾವನ್ನಪ್ಪಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ