ಆ್ಯಪ್ನಗರ

ಗುಡೇಮಾರನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ

ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಜ್ಯೋತಿ ಹೇಮಂತಕುಮಾರ್‌ ಅಭಿಪ್ರಾಯ ಪಟ್ಟರು.

Vijaya Karnataka 14 Oct 2019, 3:48 pm
ಮಾಗಡಿ ಗ್ರಾಮಾಂತರ: ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಜ್ಯೋತಿ ಹೇಮಂತಕುಮಾರ್‌ ಅಭಿಪ್ರಾಯ ಪಟ್ಟರು.
Vijaya Karnataka Web valmiki jayanti at gudemaranahalli
ಗುಡೇಮಾರನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ


ಮಾಗಡಿಯ ಸೋಲೂರು ಹೋಬಳಿ ಗುಡೇಮಾರನಹಳ್ಳಿ ಬಸ್‌ ನಿಲ್ದಾಣದಲ್ಲಿಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಆಚರಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾತಃ ಸ್ಮರಣೀಯರು: ರಾಮಾಯಣದ ಮೂಲಕ ರಾಜಧರ್ಮ, ನೀತಿಶಾಸ್ತ್ರವನ್ನು ಜಗತ್ತಿಗೆ ಬೋಧಿಸಿದ ವಾಲ್ಮೀಕಿ ಮಹರ್ಷಿಯು ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಬಣ್ಣಿಸಿದರು. ಸ್ತೀ್ರ-ಪುರುಷ ಸರಿಸಮಾನತೆ ಯೊಂದಿಗೆ ಕಲ್ಯಾಣ ರಾಜ್ಯದ ಆಶಯ ಹೊಂದಿದ್ದ ವಾಲ್ಮೀಕಿಯು ರಾಮಾಯಣದಲ್ಲಿವಿವಿಧ ಪಾತ್ರಗಳ ಮೂಲಕ ಬದುಕಿನ ಪ್ರತಿ ಹಂತದಲ್ಲೂಅನುಸರಿಸಬೇಕಾದ ನೀತಿಯನ್ನು ಬೋಧಿಸಿದ್ದಾರೆ ಎಂದರು.

ಕಲ್ಯಾಣ ರಾಜ್ಯದ ಕಲ್ಪನೆ ಇಂದಿಗೂ ಪ್ರಸ್ತುತ: ವಾಲ್ಮೀಕಿಯು ಅಂದು ಕಂಡಿದ್ದ ಕಲ್ಯಾಣ ರಾಜ್ಯದ ಕಲ್ಪನೆ ಈಗಲೂ ಪ್ರಸ್ತುತ ವಾಗಿದ್ದು, ರಾಮಾಯಣ ರಚಿಸುವ ಮೂಲಕ ಭಾರತೀಯ ಸಂಸ್ಕೃತಿಯ ಶಕ್ತಿ ಯಾಗಿ ರೂಪುಗೊಂಡಿದ್ದಾರೆ. ವಾಲ್ಮೀಕಿ ಯಂತಹ ದಾರ್ಶನಿಕರು, ಏಕಲವ್ಯ, ಮದಕರಿ ನಾಯಕ ರಂತಹ ವೀರಾಧಿವೀರರ ಪರಂಪರೆ ಹೊಂದಿರುವ ವಾಲ್ಮೀಕಿ ಸಮಾಜವು ಮಹಾ ಪುರುಷರ ಹಾದಿಯಲ್ಲಿ ನಡೆಯಬೇಕು ಎಂದು ಅವರು ತಿಳಿಸಿದರು.

ಜನಮನದಲ್ಲಿ ಹಾಸುಹೊಕ್ಕು: ವಾಲ್ಮೀಕಿ ಸಂಘದ ಅಧ್ಯಕ್ಷ ಗಂಗಬೈಲಯ್ಯ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ ಮೊದಲಾದ ರಾಷ್ಟ್ರೀಯ ಹಬ್ಬಗಳ ಹಾಗೆ ಇದು ಕೇವಲ ಸರಕಾರಿ ಆಚರಣೆ ಮಾತ್ರವಲ್ಲ, ಬದಲಾಗಿ ವಾಲ್ಮೀಕಿ, ಬೇಡ ಸಮು ದಾಯದ ಮನೆಮನೆಯ ಹಬ್ಬವಾಗಿ ಸಮುದಾಯ ದೊಳಗೆ ಚಲಿಸುತ್ತದೆ. ಈ ಚಲನೆ ಕನಿಷ್ಠ ಒಂದು ತಿಂಗಳತನಕ ಜೀವಂತವಿರುತ್ತದೆ ಎಂದರು.

ರಾಮಾಯಣದಲ್ಲಿ ಜೀವನಾದರ್ಶ: ದಾರ್ಶನಿಕ ಮಹಾಶಯರ ಜಯಂತಿಗಳ ಆಚರಣೆಯನ್ನು ಆಚರಿಸಲೆಂದೇ ಸರಕಾರ ನಿಗದಿತ ದಿನದಂದು ರಜಾ ಘೋಷಣೆ ಮಾಡಿ ಅನುವು ಮಾಡಿಕೊಡುತ್ತಿದೆ. ಆದ್ದರಿಂದ ಸದರಿ ದಿನಗಳಂದೇ ದಿನಾಚಾರಣೆಯನ್ನು ಆಚರಿಸುವುದು ಸೂಕ್ತವಾಗಿರುತ್ತದೆ. ಶ್ರೀ ಮಹರ್ಷಿ ವಾಲ್ಮೀಕಿ ರಚಿಸಿರುವಂತಹ ರಾಮಾಯಣ ದಂತಹ ಉತ್ತಮ ಕೊಡುಗೆಗಳನ್ನು ಅನುಸರಿಸಿದ್ದೇ ಆದಲ್ಲಿ, ಎಲ್ಲಾ ಸಮುದಾಯದವರು ಮುಂದೆ ಬರಲು ಅನುಕೂಲಕವಾಗಲಿದೆ ಎಂದು ಪ್ರಗತಿಪರ ಚಿಂತಕ ಹುಚ್ಯಯ್ಯ ತಿಳಿಸಿದರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ರಾಮಾಯಣದ ಪಾತ್ರಗಳ ಬಗ್ಗೆ ಮತ್ತು ವಾಲ್ಮೀಕಿ ಋುಷಿಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.

ಗ್ರಾಪಂ ಸದಸ್ಯ ಗೋಪಾಲಕೃಷ್ಣ, ನಾಗರಾಜು, ಆಂಜನಮೂರ್ತಿ, ಗಂಗ ಮಾರಯ್ಯ, ವಸಂತಮ್ಮ, ಉದ್ದಂಡಹಳ್ಳಿ ಹನುಮಂತಯ್ಯ, ಶಿವರಾಜು, ರಾಮಕೃಷ್ಣಯ್ಯ, ಉಮೇಶ್‌, ಕೆಂಪರಾಜು, ನರಸಯ್ಯ, ಉಗ್ರಪ್ಪ, ರಮೇಶ್‌, ರಾಮಚಂದ್ರ ಹಾಗೂ ಗುಡೇಮಾರನಹಳ್ಳಿ ಜನರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ