ಆ್ಯಪ್ನಗರ

​ಬೆಳ್ಳಂದೂರಿಗಿಂತ ವೃಷಭಾವತಿ ನದಿಯ ನೊರೆ ಹಾವಳಿ ಅಧಿಕ, ಶುದ್ಧೀಕರಣ ಮಾಡಬೇಕಿದೆ: ಸಿಎಂ

ಬೆಳ್ಳಂದೂರು ಕೆರೆಯ ನೊರೆಗಿಂತ ಭೈರಮಂಗಲದ ವೃಷಭಾವತಿ ನದಿಯ ನೊರೆ ಹಾವಳಿ ಅಧಿಕವಾಗಿದ್ದು, ಶುದ್ಧೀಕರಣ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Vijaya Karnataka Web 6 Sep 2018, 3:10 pm
ರಾಮನಗರ: ಬೆಳ್ಳಂದೂರು ಕೆರೆಯ ನೊರೆಗಿಂತ ಭೈರಮಂಗಲದ ವೃಷಭಾವತಿ ನದಿಯ ನೊರೆ ಹಾವಳಿ ಅಧಿಕವಾಗಿದ್ದು, ಶುದ್ಧೀಕರಣ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
Vijaya Karnataka Web cm


ನಗರದಲ್ಲಿ ಮಾತನಾಡಿದ ಅವರು, ನೊರೆಯುಕ್ತ ನೀರಿನಿಂದಲೇ ಕೃಷಿ ಮಾಡುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಭೈರಮಂಗಲ ಕೆರೆಯ ನೀರಿಗೆ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಿಸಿ ಶುದ್ಧೀಕರಣ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಾಧ್ಯವಾದಷ್ಟು ಬೇಗ ಜನರ ಕಷ್ಟಗಳಿಗೆ ಸ್ಪಂದಿಸಿ. ಬೇಜವಾಬ್ದಾರಿ ವರ್ತನೆ ತೋರಿ ನನ್ನನ್ನು ಕೆಟ್ಟವನನ್ನಾಗಿ ಮಾಡಬೇಡಿ ಎಂದು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡದಿದ್ದರೇ, ಸೇವೆಯಿಂದ ವಜಾಗೊಳಿಸುತ್ತೇವೆ ಎಂದು ಸಿಎ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ