ಆ್ಯಪ್ನಗರ

ನೀರಿನ ಸಮಸ್ಯೆ: ಜಲಮಂಡಳಿಗೆ ಬೀಗ ಜಡಿದ ಜನರು

ಕುಡಿಯುವ ನೀರಿನ ಪೂರೈಕೆಯಲ್ಲಿನ ವ್ಯತ್ಯಯ ಖಂಡಿಸಿ ನಗರದ 1ಮತ್ತು 2ನೇ ವಾರ್ಡಿನ ವಾಸಿಗಳು ಜಲಮಂಡಳಿಗೆ ಬೀಗ ಜಡಿದು ಶನಿವಾರ ಪ್ರತಿಭಟನೆ ನಡೆಸಿದರು.

Vijaya Karnataka 3 Mar 2019, 5:00 am
ರಾಮನಗರ: ಕುಡಿಯುವ ನೀರಿನ ಪೂರೈಕೆಯಲ್ಲಿನ ವ್ಯತ್ಯಯ ಖಂಡಿಸಿ ನಗರದ 1ಮತ್ತು 2ನೇ ವಾರ್ಡಿನ ವಾಸಿಗಳು ಜಲಮಂಡಳಿಗೆ ಬೀಗ ಜಡಿದು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web water problem people locked water board office
ನೀರಿನ ಸಮಸ್ಯೆ: ಜಲಮಂಡಳಿಗೆ ಬೀಗ ಜಡಿದ ಜನರು


ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಹೊರ ಕಳುಹಿಸಿದ ಜನರು, ಕಚೇರಿಗೆ ಮುಂಭಾಗಲಿಗೆ ಬೀಗ ಜಡಿದು, ಜಲಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು.ಹಲವು ವರ್ಷಗಳಿಂದ ಪಟ್ಟಣದ ಸಿದ್ಧಾರ್ಥ ನಗರ, ಮಾರುತಿ, ತೆಂಗಿನತೋಪು ವ್ಯಾಪ್ತಿಯ ಪ್ರದೇಶಗಳಿಗೆ ಸರಿಯಾಗಿ ಕುಡಿಯುವ ನೀರು ಒದಗಿಸುತ್ತಿಲ್ಲ. ಒಮ್ಮೊಮ್ಮೆ 10 ದಿನಗಳಾದರೂ ನೀರು ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯಲು ಯೋಗ್ಯವಲ್ಲ ಎಂದು ನಗರಸಭೆ ಪ್ರಚಾರ ಮಾಡಿದ ನೀರನ್ನೇ, ಈ ಭಾಗದ ಜನತೆಗೆ ಕುಡಿಯಲು ನೀರು ಪೂರೈಕೆ ಮಾಡುತ್ತಿದ್ದಾರೆ. ಅದರಲ್ಲೂ ನೀರು ಕಲುಷಿತಗೊಂಡಿದ್ದು, ಹಳದಿ ಮಿಶ್ರಿತ ಪಾಚಿ ಬಣ್ಣದ ನೀಡು ಬಿಡುಗಡೆ ಮಾಡುತ್ತಿದ್ದಾರೆ. ಇದನ್ನು ಸೇವಿಸಿದ ಹಲವು ಮಂದಿಗೆ ಅನಾರೋಗ್ಯ ಕಾಡುತ್ತಿದೆ ಎಂದು ದೂರಿದ್ದಾರೆ.

ಸರಕಾರಿ ನಿಯಮದ ಪ್ರಕಾರ ಮೂರು ದಿನಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಬೇಕು ಆದರೆ, ಇದನ್ನು ಪಾಲಿಸಲಾಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲಎಂದು ಆರೋಪಿಸಿದರು.

ಈ ವೇಳೆ ಎಇ ಅನಿಲ್‌ ಗೌಡ ಮಾತನಾಡಿ, ನದಿಯ ನೀರನ್ನು ಗೃಹ ಬಳಕೆಗೆ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಜತೆಗೆ 5ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದೇವೆ. ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ಚಾಲ್ತಿಯಲ್ಲಿರುವುದರಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಾಯ ಉಂಟಾಗಿದೆ ಎಂದು ಸ್ಪಷ್ಟಣೆ ನೀಡಿದರು. ಈ ವೇಳೆ ನಿವಾಸಿಗಳಾದ ಹರೀಶ್‌, ನರೇಶ್‌, ಶ್ರೀನಿವಾಸ್‌, ರಾಜಣ್ಣ, ಲಕ್ಷ್ಮಣ್‌, ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ