ಆ್ಯಪ್ನಗರ

ರಾಮನಗರ :ಕಾಡಾನೆ ದಾಳಿಗೆ 2 ಹಸು 1 ಎಮ್ಮೆಯ ಸಾವು, ಬೆಚ್ಚಿ ಬಿದ್ದ ಗ್ರಾಮಸ್ಥರು

ಶುಕ್ರವಾರ ಬೆಳಗ್ಗೆ ಕಾಡಾನೆಯೊಂದು ದಾಳಿ ನಡೆಸಿ ಕನಕಪುರ ತಾಲೂಕಿನ ಸಾತನೂರು ಸಮೀಪದ ಗ್ರಾಮಗಳಲ್ಲಿ ಎರಡು ಹಸು ಮತ್ತು ಒಂದು ಹಸುವನ್ನು ಸಾಯಿಸಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

Vijaya Karnataka Web 6 Mar 2020, 12:38 pm
ರಾಮನಗರ : ಕನಕಪುರ ತಾಲೂಕಿನ ಸಾತನೂರು ಸಮೀಪದ ಎರಡು ಗ್ರಾಮಗಳಲ್ಲಿ ಮಾರ್ಚ್6ರ ಬೆಳಗ್ಗೆ ಕಾಡಾನೆಯೊಂದು ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕವನ್ನು ಉಂಟು ಮಾಡಿದೆ.
Vijaya Karnataka Web wild elephant attacks in ramanagara
ರಾಮನಗರ :ಕಾಡಾನೆ ದಾಳಿಗೆ 2 ಹಸು 1 ಎಮ್ಮೆಯ ಸಾವು, ಬೆಚ್ಚಿ ಬಿದ್ದ ಗ್ರಾಮಸ್ಥರು


ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಕಾಡಾನೆ ದಾಳಿ ನಡೆಸಿದ್ದು, ಮೊದಲಿಗೆ ಸಾಸಲಪುರ ಗ್ರಾಮದಲ್ಲಿನ ಎರಡು ಸೀಮೆ ಹಸುಗಳ ಮೇಲೆ ದಾಳಿ ನಡೆಸಿ, ಕಾಲಿನಿಂದ ತುಳಿದಿದೆ. ಬಳಿಕ ಮರೀಗೌಡ ಎಂಬುವವರಿಗೆ ಸೇರಿದ ಎರಡು ಹಸುಗಳನ್ನು ತುಳಿದು ಸಾಯಿಸಿದ್ದು, ಪಕ್ಕದ ಊರಿನ ಹಲಸಿನ ಮರದೊಡ್ಡಿ ಗ್ರಾಮದ ಕೆಂಪೇಗೌಡ ಎಂಬುವವರಿಗೆ ಸೇರಿದ ಎಮ್ಮೆಯನ್ನು ಕೂಡ ಸಾಯಿಸಿದೆ.

ತದನಂತರ ನಾಟಿ ಹಸುಗಳ ಮೇಲೆಯೂ ಹಲ್ಲೆ ನಡೆಸಿದ್ದು, ಮಲ್ಲೇಗೌಡನ ದೊಡ್ಡಿ ಎಂಬಲ್ಲಿ ಬೈಕ್ ಒಂದನ್ನು ಸಹ ಧ್ವಂಸಗೊಳಿಸಿದೆ. ಆನೆಯನ್ನು ಓಡಿಸಲು ಗ್ರಾಮಸ್ಥರು ಹರಸಾಹಸಪಟ್ಟಿದ್ದು ಪಟಾಕಿ ಸಿಡಿಸಿದ್ದಾರೆ. ಕೊನೆಗೂ ಕಾಡಾನೆ ಕಬ್ಬಾಳು ವಲಯದ ಹಲಸಿನ ಮರದೊಡ್ಡಿ ಅರಣ್ಯದೊಳಗೆ ಸೇರಿಕೊಂಡಿದೆ. ಆನೆಯೊಂದರ ಈ ಅನಿರೀಕ್ಷಿತ ದಾಂದಲೆಯಿಂದ ಎರಡು ಗ್ರಾಮಗಳ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ