ಆ್ಯಪ್ನಗರ

ಗ್ರಾಮೀಣ ಕಲೆಗಳನ್ನು ಉಳಿಸಲು ಯವಜನತೆ ಸಂಕಲ್ಪ ತೊಡಬೇಕು

ಗ್ರಾಮೀಣ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸಲು ಯುವ ಸಮುದಾಯ ಸಂಕಲ್ಪ ತೊಡಬೇಕಾದ ಅಗತ್ಯವಿದೆ ಎಂದು ಜಾನಪದ ಗಾಯಕ ಮಳೂರು ಮಹದೇವ ತಿಳಿಸಿದರು.

Vijaya Karnataka 25 Mar 2019, 4:32 pm
ಜಾನಪದ ಗೀತಗಾಯನ, ವಿಚಾರ ಸಂಕಿರಣ ಕಾರ‍್ಯಕ್ರಮದಲ್ಲಿ ಜಾನಪದ ಗಾಯಕ ಮಳೂರು ಮಹಾದೇವ
Vijaya Karnataka Web young people need to be determined to save rural arts folk singer maluru mahadev
ಗ್ರಾಮೀಣ ಕಲೆಗಳನ್ನು ಉಳಿಸಲು ಯವಜನತೆ ಸಂಕಲ್ಪ ತೊಡಬೇಕು


ಚನ್ನಪಟ್ಟಣ: ಗ್ರಾಮೀಣ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸಲು ಯುವ ಸಮುದಾಯ ಸಂಕಲ್ಪ ತೊಡಬೇಕಾದ ಅಗತ್ಯವಿದೆ ಎಂದು ಜಾನಪದ ಗಾಯಕ ಮಳೂರು ಮಹದೇವ ತಿಳಿಸಿದರು.

ತಾಲೂಕಿನ ಶಿವಪ್ಪನ ಮಠದ ಶ್ರೀ ಮಂಟೇಸ್ವಾಮಿ ದೇವಸ್ಥಾನದ ಆವರಣದಲ್ಲಿ ನಮನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್‌ ಅಯೋಜಿಸಿದ್ದ ಜಾನಪದ ಗೀತಗಾಯನ ಮತ್ತು ವಿಚಾರ ಮಂಡನೆ ಕಾರ್ಯಕ್ರಮವನ್ನು ತಂಬೂರಿ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಲಾವಿದರನ್ನು ಗುರುತಿಸಿ:

ಗ್ರಾಮೀಣಾ ಪ್ರದೇಶದಿಂದ ಮರೆಯಾಗುತ್ತಿರುವ ಜಾನಪದ. ತತ್ವಪದ. ಗೀಗಿ ಪದ ಹಾಗೂ ಪೌರಾಣಿಕ ನಾಟಕಗಳು ಸೇರಿದಂತೆ ಹಲವಾರು ಕಲಾ ಪ್ರಕಾರಗಳನ್ನು ಉಳಿಸಬೇಕಾದರೆ ಯುವ ಸಮೂಹದ ಕಲೆಗಾರರನ್ನು ಗುರುತಿಸಿ ಅವರಿಗೆ ಪ್ರೋತಾಹಿಸಿ, ಅವಕಾಶಗಳನ್ನು ನೀಡಬೇಕಾಗಿದೆ ಎಂದರು.

ಯುವ ಕಲಾವಿದರನ್ನು ಪ್ರೋತ್ಸಾಹಿತಿ:

ಸಾಮಾಜಿಕವಾಗಿ ಹಾಗೂ ಶೈಕ್ಷ ಣಿಕವಾಗಿ ಯುವ ಸಮೂಹವನ್ನು ಗುರುತಿಸಿ ಆರ್ಥಿಕವಾಗಿ ಸದೃಢರಾಗಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳಿಗೆ ಹಣ ಸಹಾಯವನ್ನು ಮಾಡುವ ಮೂಲಕ ಇಂತಹ ಕಾರ್ಯಕ್ರಮಗಳನ್ನು ನರೆವೆರಿಸಿಕೊಡಲು ಮುಂದಾಗಿರುವುದು ಶ್ಲಾಘನೀಯ. ಆದರೆ ಸಮಾಜದಲ್ಲಿ ಯುವ ಸಮೂಹದ ಕಲಾವಿದರನ್ನು ತಾರತಮ್ಯದಿಂದ ನೋಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಹಾಗೂ ಇಲಾಖೆಯ ಅಧಿಕಾರಿಗಳು ಯುವ ಸಮೂಹ ವರ್ಗದವರನ್ನು ಗುರುತಿಸಿ ಅವರಿಗೆ ಅವಕಾಶ ನೀಡಬೇಕಾಗಿದೆ ಎಂದು ಮನವಿ ಮಾಡಿದರು.

ದೇಶೀಯ ಸಂಸ್ಕೃತಿ ಬಗ್ಗೆ ಒಲವು ಬೆಳೆಯಲಿ:


ನಮನ ಶಿವಕುಮಾರ್‌ ಮಾತನಾಡಿ, ಇಂದಿನ ಯುವಕರು ಪಾಶ್ಚಿಮಾತ್ಯ ಸಂಗೀತ. ನೃತ್ಯ. ಹಾಗೂ ವಿವಿಧ ಚಟುವಟಿಕೆಗಳಿಗೆ ಮಾರುಹೋಗುವ ಮೂಲಕ ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿ ಮರೆಯುತ್ತಿದ್ದು, ಮುಂದೆ ಇದರ ಪರಿಣಾಮ ನಮ್ಮ ಸಂಸ್ಕೃತಿಗೆ ಧಕ್ಕೆಯಾಗಲಿದೆ ಎಂದರು. ಸೋಬಾನೆ ಗಾಯಕಿ ಕೆಂಚಮ್ಮ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು.

ಗೀತಗಾಯನ:

ಕಾರ್ಯಕ್ರಮದಲ್ಲಿ ಬಾಣಗಹಳ್ಳಿಜಯಸಿಂಹ, ಎನ್‌.ಡಿ.ಸಿದ್ದರಾಮು, ಪ್ರಕಾಶ್‌ಬಾಣಂತಹಳ್ಳಿ, ಜಾಗೃತಿಪುಟ್ಟಸ್ವಾಮಿ, ಎಸ್‌.ಬಿ.ಗಂಗಾಧರ್‌ ಚಕ್ಕೆರೆಸಿದ್ದರಾಜು, ಚಕ್ಕೆರೆಅಪ್ಪಾಜಿ, ಶ್ರೀನಿವಾಸ್‌, ಗೀತಗಾಯನ ನಡೆಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ