ಆ್ಯಪ್ನಗರ

ಕೋವಿಡ್‌ ಲಸಿಕೆ ಅಭಿಯಾನ: ದೇಶದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ವ್ಯಕ್ತಿ ಯಾರು?

​​ಪ್ರಧಾನಿ ಮೋದಿ ಚಾಲನೆ ನೀಡಿದ ಬಳಿಕ ದೇಶದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ವ್ಯಕ್ತಿಯಾಗಿ ಪೌರ ಕಾರ್ಮಿಕ ಮನೀಷ್‌ ಹೊರಹೊಮ್ಮಿದ್ದಾರೆ. ಇನ್ನು ಲಸಿಕೆಯನ್ನು ಮನೀಶ್‌ ಪಡೆಯುವ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹಾಗೂ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಉಪಸ್ಥಿತರಿದ್ದರು.

Vijaya Karnataka Web 16 Jan 2021, 3:09 pm
ಹೊಸದಿಲ್ಲಿ: ಹತ್ತು ತಿಂಗಳಿನಿಂದ ಜನರಿಗೆ ಮಾರಕವಾಗಿದ್ದ ಕೊರೊನಾ ಎಂಬ ಮಹಾಮಾರಿ ಜನರಿಂದ ದೂರ ಸರಿಯುವ ದಿನ ಬಂದೇ ಬಿಡ್ತು. ಪ್ರಧಾನಿ ಮೋದಿ ದೇಶದ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ.
Vijaya Karnataka Web covisheild vaccine



ಇದೀಗ ದೇಶದಲ್ಲಿ ಕೊರೊನಾ ಲಸಿಕೆ ಮೊದಲು ಪಡೆದ ವ್ಯಕ್ತಿ ಯಾರು ಎಂಬ ಚರ್ಚೆ ಬಿರುಸಿನಿಂದ ಸಾಗುತ್ತಿದೆ. ಹೌದು, ಸೇರಂ ಇನ್ಸ್ಟಿಟ್ಯೂಟ್‌ ತಯಾರಿಸಿರುವ ಕೋವಿಶೀಲ್ಡ್‌ ಎಂಬ ಕೊರೊನಾ ಲಸಿಕೆಯ ಮೊದಲ ಡೋಸ್‌ ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನೀಡಲಾಗಿದೆ. ದಿಲ್ಲಿಯ ಮನೀಶ್‌ ಕುಮಾರ್‌ ಎನ್ನುವ ಪೌರ ಕಾರ್ಮಿಕ ಸಿಬ್ಬಂದಿಗೆ(ಕೊರೊನಾ ವಾರಿಯರ್‌)ಗೆ ಕೊರೊನಾ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ.


ಪ್ರಧಾನಿ ಮೋದಿ ಚಾಲನೆ ನೀಡಿದ ಬಳಿಕ ದೇಶದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ವ್ಯಕ್ತಿಯಾಗಿ ಪೌರ ಕಾರ್ಮಿಕ ಮನೀಷ್‌ ಹೊರಹೊಮ್ಮಿದ್ದಾರೆ. ಇನ್ನು ಲಸಿಕೆಯನ್ನು ಮನೀಶ್‌ ಪಡೆಯುವ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹಾಗೂ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಉಪಸ್ಥಿತರಿದ್ದರು.

ಕೊರೊನಾ ಲಸಿಕೆ ಅಭಿಯಾನ: ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ, ಮಾತೇ ಹೊರಡಲಿಲ್ಲ!

ನಂತರ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಕೂಡ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಇನ್ನು ಮಧ್ಯಪ್ರದೇಶದ ಭೋಪಾಲ್‌, ಗುಜರಾತ್‌, ಜಮ್ಮು-ಕಾಶ್ಮೀರ, ಕರ್ನಾಟಕದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಇಂದು ಮೂರು ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ