ಆ್ಯಪ್ನಗರ

ರೈಲ್ವೆ ಟರ್ಮಿನಲ್‌ ಸ್ಥಳಾಂತರಕ್ಕೆ ನಾ.ಡಿಸೋಜಾ ಖಂಡನೆ

ತಾಳಗುಪ್ಪಕ್ಕೆ ಮಂಜೂರಾಗಿರುವ ರೈಲ್ವೆ ಟರ್ಮಿನಲ್‌ ಅನ್ನು ಶಿವಮೊಗ್ಗದ ಕೋಟೆಗಂಗೂರಿಗೆ ಸ್ಥಳಾಂತರಿಸಿದ ಬಗ್ಗೆ ಸಾಗರ ಕ್ಷೇತ್ರದ ಶಾಸಕ ಎಚ್‌.ಹಾಲಪ್ಪ ಮತ್ತು ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ ಅವರು ಜನತೆಗೆ ಸ್ಪಷ್ಟಪಡಿಸಬೇಕೆಂದು ಸಾಹಿತಿ ಡಾ. ನಾ.ಡಿಸೋಜ ಆಗ್ರಹಿಸಿದ್ದಾರೆ.

Vijaya Karnataka 16 Jan 2020, 5:00 am
ಸಾಗರ: ತಾಳಗುಪ್ಪಕ್ಕೆ ಮಂಜೂರಾಗಿರುವ ರೈಲ್ವೆ ಟರ್ಮಿನಲ್‌ ಅನ್ನು ಶಿವಮೊಗ್ಗದ ಕೋಟೆಗಂಗೂರಿಗೆ ಸ್ಥಳಾಂತರಿಸಿದ ಬಗ್ಗೆ ಸಾಗರ ಕ್ಷೇತ್ರದ ಶಾಸಕ ಎಚ್‌.ಹಾಲಪ್ಪ ಮತ್ತು ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ ಅವರು ಜನತೆಗೆ ಸ್ಪಷ್ಟಪಡಿಸಬೇಕೆಂದು ಸಾಹಿತಿ ಡಾ. ನಾ.ಡಿಸೋಜ ಆಗ್ರಹಿಸಿದ್ದಾರೆ.
Vijaya Karnataka Web
ರೈಲ್ವೆ ಟರ್ಮಿನಲ್‌ ಸ್ಥಳಾಂತರಕ್ಕೆ ನಾ.ಡಿಸೋಜಾ ಖಂಡನೆ


ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಎದುರು ಮಂಗಳವಾರ ಮಲೆನಾಡು ರೈಲ್ವೆ ಹೋರಾಟ ಸಮಿತಿಯಿಂದ ರೈಲ್ವೆ ಟರ್ಮಿನಲ್‌ ಕೋಟೆಗಂಗೂರಿಗೆ ಸ್ಥಳಾಂತರಿಸುತ್ತಿರುವ ಕ್ರಮ ಖಂಡಿಸಿ ಮತ್ತು ತಾಳಗುಪ್ಪದಿಂದ ಕೊಂಕಣ ರೈಲ್ವೆಗೆ ಮಾರ್ಗ ವಿಸ್ತರಿಸುವಂತೆ ಒತ್ತಾಯಿಸಿ ಏರ್ಪಡಿಸಿದ್ದ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ಉದ್ದೇಶಿಸಿ ಅವರು ಮಾತನಾಡಿದರು.

ಯೋಜನೆ ಮಂಜೂರು ಮಾಡಿ ಅದನ್ನು ಕಿತ್ತುಕೊಂಡು ಹೋಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ. ತಾಳಗುಪ್ಪದಲ್ಲೇ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ಸ್ಥಾಪನೆಗೆ ಎರಡೂ ಕ್ಷೇತ್ರದ ಶಾಸಕರು, ಸಿಎಂ ಹಾಗೂ ಸಂಸದರನ್ನು ಒತ್ತಾಯಿಸಬೇಕೆಂದರು.

ಹೋರಾಟ ಸಮಿತಿಯ ಎಚ್‌.ಬಿ. ರಾಘವೇಂದ್ರ ಮಾತನಾಡಿ, ಶಾಸಕದ್ವಯರು ಟರ್ಮಿನಲ್‌ ಬಗ್ಗೆ ಧ್ವನಿ ಎತ್ತಿದರೆ ಯಡಿಯೂರಪ್ಪನವರ ಮನೆ ಬಾಗಿಲು ಮುಚ್ಚುತ್ತದೆ ಎಂಬ ಭಯದಲ್ಲಿಸುಮ್ಮಿನಿದ್ದಾರೆ ಎಂದು ಅನ್ನಿಸುತ್ತಿದೆ ಎಂದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು , ಸಾಮಾಜಿಕ ಕಾರ‍್ಯಕರ್ತ ಓಂಕಾರ ತಾಳಗುಪ್ಪ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌.ಜಯಂತ್‌, ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ತಶ್ರೀಫ್‌, ಜಿಪಂ ಮಾಜಿ ಸದಸ್ಯ ರವಿಕುಗ್ವೆ, ಲೇಖಕ ವಿಲಿಯಂ, ಪ್ರಮುಖರಾದ ಸುಧಾಕರ ಕುಗ್ವೆ, ಶಿವಾನಂದ ಕುಗ್ವೆ, ವಾಮದೇವಗೌಡ, ಕನ್ನಪ್ಪ ಬೆಳಲಮಕ್ಕಿ, ಅ.ರಾ.ಶ್ರೀನಿವಾಸ್‌, ಕನ್ನಪ್ಪ ಮುಳಕೇರಿ, ತುಕಾರಾಮ್‌ ಶಿರವಾಳ, ಎನ್‌.ಡಿ.ವಸಂತಕುಮಾರ್‌, ರವಿ ಜಂಬಗಾರು, ಮೈಕಲ್‌ ಡಿಸೋಜ, ಡಿ.ದಿನೇಶ್‌ , ಮಂಜುನಾಥ ಚಿಪ್ಪಳಿ, ಅಣ್ಣಪ್ಪ ಬಾಳೆಗುಂಡಿ, ಪುಟ್ಟಪ್ಪ, ಎ.ಎ.ಶೇಕ್‌ , ಪರಶುರಾಮ, ಅನ್ವರ್‌, ಮಹಾಬಲೇಶ್ವರ ಕುಗ್ವೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ