Please enable javascript.ಗೀತಾ ಪರ ದಿಗಂತ್ ಮತಪ್ರಚಾರ - ಗೀತಾ ಪರ ದಿಗಂತ್ ಮತಪ್ರಚಾರ - Vijay Karnataka

ಗೀತಾ ಪರ ದಿಗಂತ್ ಮತಪ್ರಚಾರ

ವಿಕ ಸುದ್ದಿಲೋಕ 14 Apr 2014, 5:05 am
Subscribe

ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ಗೆ ಅನುಭವವಿಲ್ಲ ಎಂಬ ಬಿಜೆಪಿಯವರ ಆರೋಪ ಸತ್ಯವಾದುದು. ಯಡಿಯೂರಪ್ಪನವರಂತೆ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಅನುಭವ ಖಂಡಿತವಾಗಿಯೂ ಇಲ್ಲ ಎಂದು ಶಾಸಕ ಮಧು ಬಂಗಾರಪ್ಪ ವ್ಯಂಗವಾಡಿದರು.

ಗೀತಾ ಪರ ದಿಗಂತ್ ಮತಪ್ರಚಾರ
ಸೊರಬ: ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ಗೆ ಅನುಭವವಿಲ್ಲ ಎಂಬ ಬಿಜೆಪಿಯವರ ಆರೋಪ ಸತ್ಯವಾದುದು. ಯಡಿಯೂರಪ್ಪನವರಂತೆ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಅನುಭವ ಖಂಡಿತವಾಗಿಯೂ ಇಲ್ಲ ಎಂದು ಶಾಸಕ ಮಧು ಬಂಗಾರಪ್ಪ ವ್ಯಂಗವಾಡಿದರು.

ತತ್ತೂರಿನಲ್ಲಿ ಭಾನುವಾರ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ವಿದ್ಯುತ್ ಸಮಸ್ಯೆಯಿಂದಾಗಿ ರೈತರು ಕಂಗೆಟ್ಟಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಅಭಿವದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ರೋಸಿ ಹೋಗಿರುವ ಜನತೆ, ಕಾಂಗ್ರೆಸ್ ಮತ್ತು ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದರು.

ಚಿತ್ರನಟ ದಿಗಂತ್ ಮಾತನಾಡಿ, ಜಿಲ್ಲೆಯ ತೀರ್ಥಹಳ್ಳಿ ನನ್ನ ಹುಟ್ಟೂರು. ನನ್ನ ತಾತ ವೆಂಕಟಗಿರಿಯಪ್ಪ ಅವರು ಸೊರಬ ತಾಲೂಕಿನ ಹೊಸಬಾಳೆಯವರು. ನಮ್ಮ ತಾತ ಮತ್ತು ಬಂಗಾರಪ್ಪ ಒಟ್ಟಿಗೆ ರಾಜಕಾರಣ ಆರಂಭಿಸಿದವರು. ಬಂಗಾರಪ್ಪ ಅವರ ಮೇಲೆ ನಮ್ಮ ತಾತ ಇಟ್ಟ ವಿಶ್ವಾಸದಿಂದ ಹಾಗೂ ಶಿವರಾಜ್‌ಕುಮಾರ್ ಸ್ನೇಹದಿಂದ ಅಭ್ಯರ್ಥಿ ಪರ ಮತಯಾಚಿಸಲು ಬಂದಿದ್ದೇನೆ. ನಮಗೆ ಪಕ್ಷ ಮುಖ್ಯವಲ್ಲ. ವ್ಯಕ್ತಿ ಮೇಲಿನ ಗೌರವದಿಂದ ಬಂದಿದ್ದು, ಗೀತಾ ಶಿವರಾಜ್ ಕುಮಾರ್ ಉತ್ತಮ ನಾಯಕತ್ವ ಹಾಗೂ ಸೇವೆ ಸಲ್ಲಿಸುವ ಭರವಸೆ ಇರುವುದರಿಂದ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ವಿನಂತಿಸಿದರು.

ಸುಜಾತ ತಿಲಕ್‌ಕುಮಾರ್ ಮಾತನಾಡಿ, ಬಂಗಾರಪ್ಪ ಅವರ ಅನುಪಸ್ಥಿತಿಯಲ್ಲಿ ತಂದೆಯವರ ಧ್ಯೇಯೋದ್ದೇಶಗಳನ್ನು ಎತ್ತಿ ಹಿಡಿಯಲು ತಾಯಿ ಅನಾರೋಗ್ಯದ ನಿಮಿತ್ತ ಜವಾಬ್ದಾರಿಯನ್ನು ಗೀತಾಳ ಹೆಗಲಿಗೆ ಏರಿಸಿದ್ದೇವೆ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ ಎಂಬ ಭರವಸೆ ಇದ್ದು, ಗೆಲುವು ನಿಶ್ಚಿತ ಎಂದರು. ಸಭೆಯಲ್ಲಿ ತಾ.ಪಂ ಅಧ್ಯಕ್ಷ ಬಸವಲಿಂಗಪ್ಪ, ಸದಸ್ಯ ಜಯಶೀಲಪ್ಪ, ಕೆ.ಪಿ ರುದ್ರಗೌಡ, ಚೌಟಿ ಚಂದ್ರಣ್ಣ, ಸಂಜೀವ್ ಲಕ್ಕವಳ್ಳಿ, ಹಾಲಪ್ಪ ಚೌಟಿ, ಶಿವಕುಮಾರ್, ರಂಗಪ್ಪ, ಸುರೇಶ್‌ಗೌಡ, ಗೀತಾಂಜಲಿ, ಪರಮೇಶ್ ನೆಗವಾಡಿ ಮತ್ತಿತರರು ಹಾಜರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ