Please enable javascript.ಅಣ್ಣನ ಕೊಲೆ: ಶವವಿಟ್ಟು ಪ್ರತಿಭಟನೆ - ಅಣ್ಣನ ಕೊಲೆ: ಶವವಿಟ್ಟು ಪ್ರತಿಭಟನೆ - Vijay Karnataka

ಅಣ್ಣನ ಕೊಲೆ: ಶವವಿಟ್ಟು ಪ್ರತಿಭಟನೆ

ವಿಕ ಸುದ್ದಿಲೋಕ 23 Jul 2014, 5:24 am
Subscribe

ಅಂಬಾರಗೊಪ್ಪ ಗ್ರಾಮದಲ್ಲಿ ಸಹೋದರರಿಬ್ಬರ ನಡುವಿನ ಆಸ್ತಿ ವಿವಾದದ ಗಲಾಟೆಯಲ್ಲಿ ಅಣ್ಣ ಮತಪಟ್ಟಿದ್ದು , ತಮ್ಮನನ್ನು ಬಂಧಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಸಂಜೆ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಅಣ್ಣನ ಕೊಲೆ: ಶವವಿಟ್ಟು ಪ್ರತಿಭಟನೆ
ಶಿಕಾರಿಪುರ : ಅಂಬಾರಗೊಪ್ಪ ಗ್ರಾಮದಲ್ಲಿ ಸಹೋದರರಿಬ್ಬರ ನಡುವಿನ ಆಸ್ತಿ ವಿವಾದದ ಗಲಾಟೆಯಲ್ಲಿ ಅಣ್ಣ ಮತಪಟ್ಟಿದ್ದು , ತಮ್ಮನನ್ನು ಬಂಧಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಸಂಜೆ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಅಂಬಾರಗೊಪ್ಪ ಗ್ರಾಮದ ಡಾಕ್ಯಾನಾಯ್ಕ ಮತಪಟ್ಟ ವ್ಯಕಿ. ಸೋಮವಾರ ಮಧ್ಯಾಹ್ನ ಸಹೋದರ ಪರಮೇಶ ನಾಯ್ಕನೊಂದಿಗೆ ಆಸ್ತಿ ವಿವಾದದಲ್ಲಿ ಜಗಳ ನಡೆದಿದ್ದು , ಈ ಕುರಿತಂತೆ ಡಾಕ್ಯಾನಾಯ್ಕ ಠಾಣೆಗೆ ಕಂಪ್ಲೆಂಟ್ ಕೊಡಲು ಬಂದಾಗ ಮತ್ತೆ ಇವರಿಬ್ಬರಿಗೂ ಗಲಾಟೆ ನಡೆದು ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಡಾಕ್ಯಾನಾಯ್ಕನನ್ನು ಮೊದಲು ಶಿಕಾರಿಪುರ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

‘ಪರಮೇಶನಾಯ್ಕನೇ ತನ್ನ ಗಂಡನನ್ನು ಹೊಡೆದು ಕೊಲೆ ಮಾಡಿದ್ದಾನೆ. ಈ ಆಸ್ತಿ ವಿವಾದದ ಕುರಿತು ಈ ಹಿಂದೆ ಠಾಣೆಗೆ ಕಂಪ್ಲೆಂಟ್ ಕೊಟ್ಟಿದ್ದರೂ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರ ಪರಿಣಾಮ ಗಲಾಟೆ ನಡೆದು ನನ್ನ ಗಂಡ ಸಾಯುವಂತಾಯಿತು’ ಎಂದು ಪತ್ನಿ ಗೌರಿಬಾಯಿ ಆರೋಪಿಸಿದ್ದಾಳೆ.

ಗ್ರಾಮಾಂತರ ಠಾಣೆ ಎದುರು ಗ್ರಾಮಸ್ಥರು ಶವವಿಟ್ಟು , ಆರೋಪಿ ಯನ್ನು ಬಂಧಿಸುವವರೆಗೂ ಶವವನ್ನು ಮೇಲೆತ್ತುವುದಿಲ್ಲವೆಂದು ಸುಮಾರು ಅರ್ಧ ಗಂಟೆಗಳ ಕಾಲ ಪ್ರತಿಭಟನೆ ಮಾಡಿದರು. ಡಿವೈಎಸ್ಪಿ ಶ್ರುತಿ, ಅಡಿಷನಲ್ ಎಸ್.ಪಿ. ದಯಾಳ್ ಕುಟುಂಬಸ್ಥರ ಮನವೊಲಿಸಿ, ತನಿಖೆ ನಡೆಸಿ ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದ ಮೇಲೆ ಶವವನ್ನು ಗ್ರಾಮಕ್ಕೆ ಕೊಂಡೊ ಯ್ಯಲಾಯಿತು.

ಸಾವಿಗೆ ಪಿಎಸ್‌ಐ ಕಾರಣ: ಆರೋಪ
ಢಾಕ್ಯಾ ನಾಯ್ಕ ಸಾವಿಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಅವರೇ ಕಾರಣ ಎಂದು ಆರೋಪಿಸಿ ಮೃತನ ಕುಟುಂಬದವರು ಹಾಗೂ ಜೆಡಿಎಸ್ ಕಾರ್ಯಕರ್ತರು ಎಸ್ಪಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮೃತ ಡಾಕ್ಯಾ ನಾಯ್ಕಗೆ ಆತನ ಸಹೋದರ ಮತ್ತು ಅವರ ಮಕ್ಕಳು ತೊಂದರೆ ನೀಡಿ, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದನ್ನು ಠಾಣೆಯ ಪಿಎಸೈ ಗಮನಕ್ಕೆ ತರಲಾಗಿತ್ತು. ದೂರನ್ನೂ ಕೊಡಲಾಗಿತ್ತು. ಆದರೆ ದೂರು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದರು. ಬೆಳಗ್ಗೆಯಿಂದ ಸಂಜೆ ತನಕ ಡಾಕ್ಯಾನಾಯ್ಕರನ್ನು ಠಾಣೆಯಲ್ಲೇ ಕೂರಿಸಿಕೊಂಡರು.

ಹೊಟ್ಟೆ ಹಸಿದು ಆರೋಗ್ಯದಲ್ಲಿ ವ್ಯತ್ಯಾಸ ಆದರೂ ಆಸ್ಪತ್ರೆಗೆ ಸೇರಿಸಲಿಲ್ಲ. ಶಿಕಾರಿಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೋಮವಾರ ಕರೆತಂದಾಗ ಮೃತಪಟ್ಟಿದ್ದು ಇದಕ್ಕೆ ಪಿಎಸೈ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಕೌಶಲೇಂದ್ರ ಕುಮಾರ್, ಮೃತ ವ್ಯಕ್ತಿಯ ಮರಣೋತ್ತರ ವರದಿ ಬಂದ ನಂತರ ನಿಜವಾದ ಕಾರಣ ತಿಳಿದುಬರಲಿದೆ.

ಆದಾಗ್ಯೂ ಘಟನೆಯಲ್ಲಿ ಪಿಎಸೈ ಅವರ ಪಾತ್ರ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಶಿಕಾರಿಪುರ ಡಿಎಸ್ಪಿಗೆ ಸೂಚನೆ ನೀಡಲಾಗುವುದು.

ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರಲ್ಲದೆ, ಸ್ಥಳಕ್ಕೆ ಬುಧವಾರ ಖುದ್ದು ಭೇಟಿ ನೀಡುವುದಾಗಿ ಭರವಸೆ ನೀಡಿದರು.ಮೃತನ ಪತ್ನಿ ಗೌರಿಬಾಯಿ ಹಾಗೂ ಕುಟುಂಬಸ್ಥರು, ಜೆಡಿಎಸ್ ಮುಖಂಡ ಬಳಿಗಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ