Please enable javascript.ಪರಿಹಾರ ನೀಡದ ಹೊರತು ಪ್ರತಿಭಟನೆ ಕೈ ಬಿಡೆ: ಅಪ್ಪಾಜಿ - ಪರಿಹಾರ ನೀಡದ ಹೊರತು ಪ್ರತಿಭಟನೆ ಕೈ ಬಿಡೆ: ಅಪ್ಪಾಜಿ - Vijay Karnataka

ಪರಿಹಾರ ನೀಡದ ಹೊರತು ಪ್ರತಿಭಟನೆ ಕೈ ಬಿಡೆ: ಅಪ್ಪಾಜಿ

ವಿಕ ಸುದ್ದಿಲೋಕ 26 Sep 2014, 5:35 am
Subscribe

ಅರಳಿಕೊಪ್ಪ ಗ್ರಾಮದಲ್ಲಿ ಕಳೆದ ವರ್ಷ ಅಡುಗೆ ಅನಿಲ ಸೋರಿಕೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮಡಿದ 3ಮಂದಿ ದಲಿತ ಬಡ ಕುಟುಂಬಗಳಿಗೆ ಪರಿಹಾರ ನೀಡದ ಹೊರತು ಅಹೋರಾತ್ರಿ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಶಾಸಕ ಎಂ.ಜೆ.ಅಪ್ಪಾಜಿ ಹೇಳಿದರು.

ಪರಿಹಾರ ನೀಡದ ಹೊರತು ಪ್ರತಿಭಟನೆ ಕೈ ಬಿಡೆ: ಅಪ್ಪಾಜಿ
ಭದ್ರಾವತಿ: ಅರಳಿಕೊಪ್ಪ ಗ್ರಾಮದಲ್ಲಿ ಕಳೆದ ವರ್ಷ ಅಡುಗೆ ಅನಿಲ ಸೋರಿಕೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮಡಿದ 3ಮಂದಿ ದಲಿತ ಬಡ ಕುಟುಂಬಗಳಿಗೆ ಪರಿಹಾರ ನೀಡದ ಹೊರತು ಅಹೋರಾತ್ರಿ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಶಾಸಕ ಎಂ.ಜೆ.ಅಪ್ಪಾಜಿ ಹೇಳಿದರು.

ಅವರು ಗುರುವಾರ ಲೋಯರ್ ಹುತ್ತಾದ ರಂಗನಾಥ ಗ್ಯಾಸ್ ಏಜೆನ್ಸಿ ಕಚೇರಿ ಮುಂಭಾಗ ಕೈಗೊಂಡಿರುವ ಎರಡನೇ ದಿನದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2013 ಮೇ10 ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಸೇರಿ ಒಟ್ಟು ನಾಲ್ವರು ಮೃತಪಟ್ಟು, ಐವರು ತೀವ್ರಗಾಯ ಗೊಂಡಿ ದ್ದರು. ಗ್ಯಾಸ್ ಏಜೆನ್ಸಿ ಮಾಲೀಕರು ಮಾನವೀಯತೆ ಮೆರೆಯದೆ ಮೃತಪಟ್ಟವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಬಿಡಿಗಾಸು ಪರಿಹಾರ ನೀಡದೆ ವಂಚಿಸಿದ್ದಾರೆ. ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹನುಮಂತಪ್ಪ ಮೃತಪಟ್ಟ ಸಂದರ್ಭ ನಡೆದ ಪ್ರತಿಭಟನೆಯಿಂದಾಗಿ ಆ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಅದರಂತೆ ಶಾಂತಮ್ಮ, ಪ್ರಜ್ವಲ್ ಹಾಗೂ ಬಿಂದು ಕುಟುಂಬ ಹಾಗೂ ಗಾಯಗೊಂಡ ಉಷಾ, ಕವಿತ, ನವೀನ, ಕೌಶಿಕ್, ಕುಮಾರ ನಾಯ್ಕ್ ಅವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಈ ನತದಷ್ಟ ಕುಟುಂಬಗಳು ಪರಿಹಾರಕ್ಕೆ ಒತ್ತಾಯಿಸಿ ಗ್ಯಾಸ್ ವಿತರಕ ಕಚೇರಿ ಮುಂಭಾಗ ಸೆ:22ರಿಂದ ಅಹೋರಾತ್ರಿ ಧರಣಿಯನ್ನು ಶಾಂತಿಯುತವಾಗಿ, ಗ್ರಾಹಕರಿಗೆ ತೊಂದರೆ ನೀಡದಂತೆ ಕೈಗೊಂಡಿದ್ದರು. ನ್ಯೂಟೌನ್ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸಂದೀಪ್ ಸೆ.24ರಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ನಿಂದಿಸಿ, ದೌರ್ಜನ್ಯ ವೆಸಗಿ ಆ ಸ್ಥಳದಿಂದ ತೆರವುಗೊಳಿಸಿರುವುದು ಖಂಡನೀಯ. ಸಬ್‌ಇನ್ಸ್‌ಪೆಕ್ಟರ್ ಸಂದೀಪ್ ವಿರುದ್ಧ ವಿರುದ್ಧ ಕ್ರಮಕ್ಕೆ ದೂರು ನೀಡುವುದಾಗಿ ಹೇಳಿದರು.

ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡದ ಹೊರತು ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ ್ಲವೆಂದ ಶಾಸಕ ಅಪ್ಪಾಜಿ, ಏಜೆನ್ಸಿ ವಿರುದ್ಧ ಶಿಸ್ತು ಕ್ರಮ, ಸರಕಾರ ಜಾಗ ಒತ್ತುವರಿ ತೆರವು, ಅಕ್ರಮವಾಗಿ ನಿರ್ಮಿಸಿರುವ ಏಜೆನ್ಸಿಯ ಕಟ್ಟಡ ಒಡೆದು ಹಾಕಬೇಕು, ಸಿಲಿಂಡರ್ ಗೋದಾಮುಗೆ ಬೀಗ ಹಾಕಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಉಪವಿಭಾಗಾಧಿಕಾರಿ : ಪ್ರತಿಭಟನಾ ಸ್ಥಳಕ್ಕೆ ಶಿವಮೊಗ್ಗ ಉಪವಿಭಾಗಾಧಿಕಾರಿ ಕಷ್ಣಮೂರ್ತಿ, ಹೆಚ್ಚುವರಿ ರಕ್ಷಣಾಧಿಕಾರಿ ಬಿ.ದಯಾಳ್, ತಹಸೀಲ್ದಾರ್ ಡಿ.ಕೆ.ರಾಮಚಂದ್ರಪ್ಪ, ಡಿವೈಎಸ್‌ಪಿ ಸದಾನಂದ ಬಿ ನಾಯಕ್ ಹಾಗೂ ಆಹಾರ ಇಲಾಖಾಧಿಕಾರಿಗಳು ಭೇಟಿನೀಡಿ ಮನ ಒಲಿಸಲು ಯತ್ನಿಸಿದರೂ ಪ್ರತಿಭಟನೆ ಯಿಂದ ಹಿಂದೆ ಸರಿಯಲು ಶಾಸಕರು ನಿರಾಕರಿಸಿದರು. ಈ ಸಂದರ್ಭಉಪವಿಭಾಧಿಕಾರಿಗಳು, ಆಹಾರ ಇಲಾಖೆ ಅಧಿಕಾರಿಗಳು ಸ್ಥಗಿತಗೊಂಡಿರುವ ಸಿಲಿಂಡರ್ ವಿತರಣೆ ಕೈಗೊಳ್ಳಬೇಕು. ಸಂಬಂಧಿತ ದಾಖಲೆ ವಶಪಡಿಸಿಕೊಳ್ಳುವಂತೆ ತಹಸೀಲ್ದಾರ್‌ಗೆ ಸೂಚಿಸಿದ ಮೇರೆಗೆ ಬೀಗಮುದ್ರೆ ತೆರವುಗೊಳಿಸಿ ಅನಿಲ ವಿತರಿಸಲಾಯಿತು.

ಸಂಘಟನೆಗಳ ಬೆಂಬಲ: ಪ್ರತಿಭಟನೆ ಬೆಂಬಲಿಸಿ ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಬಸಪ್ಪ, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಂಜುನಾಥ್, ದಲಿತ ವಿದ್ಯಾರ್ಥಿಗಳ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿ ಪರಿಹಾರಕ್ಕೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ಯಾಸ್ ಅಗ್ನಿ ದುರಂತದಲ್ಲಿ ಗಾಯಗೊಂಡವರು ಸೇರಿದಂತೆ ಜಿ.ಪಂ ಸದಸ್ಯ ಎಸ್.ಕುಮಾರ್, ತಾ.ಪಂ.ಅಧ್ಯಕ್ಷ ದೇವೇಂದ್ರನಾಯ್ಕ್, ಸದಸ್ಯ ನಂಜುಂಡೇಗೌಡ, ನಗರಸಭಾ ಸದಸ್ಯರಾದ ರಾಮಕಷ್ಣ, ಅಜೀತ್, ಲೀಲಾವತಿ, ಆನಂದ, ಗುಣಶೇಖರ್, ಸುಧಾಮಣಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸುಕನ್ಯ, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್.ಚಂದ್ರಹಾಸ, ಮುಖಂಡರಾದ ಎ.ಟಿ.ರವಿ, ಲೋಕೇಶ್‌ರಾವ್, ವೆಂಕಟೇಶ್, ಧರ್ಮರಾಜ್, ಹುಚ್ಚಪ್ಪ, ಲಿಂಗರಾಮೇಗೌಡ, ಡಿ.ಟಿ.ಶ್ರೀಧರ್ ಮಹದೇವಣ್ಣ, ಸಾವಿತ್ರಮ್ಮ, ದಲಿತ ನೌಕರರ ಒಕ್ಕೂಟದ ಶಿವಬಸಪ್ಪ ಮತ್ತಿತರರು ಭಾಗವಹಿಸಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ