ಆ್ಯಪ್ನಗರ

ಚೆಕ್‌ಪೋಸ್ಟ್‌ನಲ್ಲಿ 2 ಕೋಟಿ ರೂ. ವಶಕ್ಕೆ

ಚೆಕ್‌ಪೋಸ್ಟ್‌ ಒಂದರಲ್ಲಿ ಕಾರು ತಪಾಸಣೆ ವೇಳೆ ಎರಡು ಕೋಟಿ ರೂ. ಪತ್ತೆಯಾಗಿದ್ದು, ಅದನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ.

Vijaya Karnataka 22 Mar 2019, 5:00 am
ಶಿವಮೊಗ್ಗ : ಚೆಕ್‌ಪೋಸ್ಟ್‌ ಒಂದರಲ್ಲಿ ಕಾರು ತಪಾಸಣೆ ವೇಳೆ ಎರಡು ಕೋಟಿ ರೂ. ಪತ್ತೆಯಾಗಿದ್ದು, ಅದನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ.
Vijaya Karnataka Web 2 crores captured
ಚೆಕ್‌ಪೋಸ್ಟ್‌ನಲ್ಲಿ 2 ಕೋಟಿ ರೂ. ವಶಕ್ಕೆ


ಸಾಗರ ತಾಲೂಕಿನ ಅಮಟೆಕೊಪ್ಪ ಬಳಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣೆ ಸಿಬ್ಬಂದಿ ಕಾರೊಂದನ್ನು ತಪಾಸಣೆಗೆ ಒಳಪಡಿಸಿದಾಗ ಎರಡು ಕೋಟಿ ರೂ. ಪತ್ತೆಯಾಗಿದೆ.

ಪ್ರಗತಿ ಗ್ರಾಮೀಣ ಬ್ಯಾಂಕ್‌ಗೆ ಸೇರಿದ್ದೆನ್ನಲಾದ ಹಣವನ್ನು ಬ್ಯಾಂಕ್‌ನ ಅಸಿಸ್ಟೆಂಟ್‌ ಮ್ಯಾನೇಜರ್‌ ಕಾರಿನಲ್ಲಿ ಸಾಗಿಸುತ್ತಿದ್ದರು. ಆದರೆ, ಪೂರಕ ದಾಖಲೆ ಇಲ್ಲದ ಕಾರಣದಿಂದಾಗಿ ಫ್ಲೈಯಿಂಗ್‌ ಸ್ಕ್ವಾಡ್‌ನವರು ಹಣ ಜಪ್ತಿ ಮಾಡಿಕೊಂಡಿದ್ದಾರೆ. ಸಾಗರ ಉಪವಿಭಾಗ ಅಧಿಕಾರಿ ದರ್ಶನ್‌, ಸಹಾಯಕ ಪೊಲೀಸ್‌ ಅಧೀಕ್ಷ ಕ ಯತೀಶ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ