ಆ್ಯಪ್ನಗರ

59 ಡೆಂಗೆ, 14 ಚಿಕೂನ್‌ ಗುನ್ಯಾ ಪ್ರಕರಣ ಪತ್ತೆ

ತಾಲೂಕಿನಲ್ಲಿ 59 ಡೆಂಗೆ ಹಾಗೂ 14 ಚಿಕೂನ್‌ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು, ಇಲಾಖೆಗಳು ಜನಜಾಗೃತಿ ಕಾರ‍್ಯ ಮಾಡುತ್ತಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮುನಿವೆಂಕಟರಾಜು ಹೇಳಿದರು.

Vijaya Karnataka 20 Jul 2019, 5:00 am
ಸಾಗರ : ತಾಲೂಕಿನಲ್ಲಿ 59 ಡೆಂಗೆ ಹಾಗೂ 14 ಚಿಕೂನ್‌ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು, ಇಲಾಖೆಗಳು ಜನಜಾಗೃತಿ ಕಾರ‍್ಯ ಮಾಡುತ್ತಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮುನಿವೆಂಕಟರಾಜು ಹೇಳಿದರು.
Vijaya Karnataka Web 59 dengue 14 chikunya gunya cases detected
59 ಡೆಂಗೆ, 14 ಚಿಕೂನ್‌ ಗುನ್ಯಾ ಪ್ರಕರಣ ಪತ್ತೆ


ಇಲ್ಲಿನ ಎಸ್‌.ಎನ್‌.ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಶುಕ್ರವಾರ ಡೆಂಗೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮಾಂತರದಲ್ಲಿ 48 ಹಾಗೂ ನಗರವ್ಯಾಪ್ತಿಯಲ್ಲಿ 18 ಡೆಂಗೆ ಪ್ರಕರಣಗಳು ಪತ್ತೆಯಾಗಿವೆ. 14 ಚಿಕೂನ್‌ಗುನ್ಯಾ ಪ್ರಕರಣಗಳಲ್ಲಿ 4 ನಗರವ್ಯಾಪ್ತಿ ಹಾಗೂ 10 ಗ್ರಾಮೀಣ ಪ್ರದೇಶದಲ್ಲಿ ಕಂಡು ಬಂದಿವೆ. ಎಸ್‌.ಎನ್‌.ನಗರ ಭಾಗದಲ್ಲಿ ಡೆಂಗೆ ಮತ್ತು ಚಿಕೂನ್‌ಗುನ್ಯಾ ಕಾಣಿಸಿಕೊಂಡಿರುವುದರಿಂದ ಆರೋಗ್ಯ, ಆಶಾ ಕಾರ್ಯಕರ್ತೆಯರು ಈ ಭಾಗದಲ್ಲಿ ಮನೆಮನೆಗೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ನಗರಸಭೆ ಪೌರಾಯುಕ್ತ ಎಸ್‌.ರಾಜು ಮಾತನಾಡಿ, ಈಗಾಗಲೆ ನಗರಸಭೆಯಿಂದ ಫಾಗಿಂಗ್‌, ಮೆಲಾಥಿನ್‌ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ . ಸಾರ್ವಜನಿಕರು ತಮ್ಮ ಮನೆ ಅಕ್ಕಪಕ್ಕವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಜತೆಗೆ ಬೇಡದ ವಸ್ತುಗಳನ್ನು ವಿಲೇ ಮಾಡಬೇಕು ಎಂದರು.

ಪರಿಸರ ಎಂಜಿನಿಯರ್‌ ಪ್ರಭಾಕರ್‌, ಹಿರಿಯ ಆರೋಗ್ಯ ನಿರೀಕ್ಷ ಕರಾದ ಶೈಲೇಶ್‌, ರಚನಾ, ಪ್ರಭಾಕರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ