ಆ್ಯಪ್ನಗರ

ತೀರ್ಥಹಳ್ಳಿ ತಾಲೂಕಲ್ಲಿ ಶೇ.84 ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ವಿದ್ಯಾರ್ಥಿಗಳು ಶೇ. 84.05 ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಬರೆದ 1686 ವಿದ್ಯಾರ್ಥಿಗಳ ಪೈಕಿ 1425 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕೋಣಂದೂರು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಎಚ್‌.ವಿ. ವೈಭವಿ 623 ಅಂಕ ಪಡೆದು ತಾಲೂಕಿಗೆ ಟಾಪರ್‌ ಆಗಿ ಹೊಮ್ಮಿದ್ದಾರೆ.

Vijaya Karnataka 1 May 2019, 5:00 am
ತೀರ್ಥಹಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ವಿದ್ಯಾರ್ಥಿಗಳು ಶೇ. 84.05 ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಬರೆದ 1686 ವಿದ್ಯಾರ್ಥಿಗಳ ಪೈಕಿ 1425 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕೋಣಂದೂರು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಎಚ್‌.ವಿ. ವೈಭವಿ 623 ಅಂಕ ಪಡೆದು ತಾಲೂಕಿಗೆ ಟಾಪರ್‌ ಆಗಿ ಹೊಮ್ಮಿದ್ದಾರೆ.
Vijaya Karnataka Web SMR-30TTH9


ಸರಕಾರಿ ಪ್ರೌಢಶಾಲೆಗಳಾದ ಕಡ್ತೂರು, ಕೊಂಡ್ಲೂರು, ತೀರ್ಥಹಳ್ಳಿ ಪಟ್ಟಣದ ವಾಗ್ದೇವಿ, ಸೇಂಟ್‌ ಮೇರೀಸ್‌, ಕೋಣಂದೂರು ನವಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗಳ ವಿದ್ರ್ಯಾಥಿಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ವೈಭವಿ ಸಾಧನೆ :
ಕೋಣಂದೂರು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಯ ವಿದ್ಯಾರ್ಥಿನಿ ಎಚ್‌.ವಿ.ವೈಭವಿ 623 ಅಂಕ ಪಡೆದು ಅತ್ಯುನ್ನತ ಸಾಧನೆ ತೋರಿದ್ದಾರೆ. ಕನ್ನಡ 125, ಇಂಗ್ಲಿಷ್‌ 100, ಹಿಂದಿ 100, ಗಣಿತ 100, ವಿಜ್ಞಾನ 99, ಸಮಾಜ ವಿಜ್ಞಾನ ವಿಷಯದಲ್ಲಿ 99 ಅಂಕಗಳಿಸಿದ್ದಾರೆ. ಇವರು ಗರ್ತಿಕೆರೆಯ ಎಚ್‌.ಎಸ್‌. ವೆಂಕಟಕೃಷ್ಣಯ್ಯ, ಪ್ರಭಾವತಿ ಹೆಗಡೆ ದಂಪತಿ ಪುತ್ರಿ. ಪಟ್ಟಣದ ಯು.ಆರ್‌. ಅನಂತಮೂರ್ತಿ ಪ್ರೌಢಶಾಲೆಯ ಶ್ರೀರಂಜಿನಿ ಆರ್‌.ಆಚಾರ‍್ಯ 605, ಸರಕಾರಿ ಬಾಲಕಿಯರ ಪ್ರೌಢಶಾಲೆಯ ಎಂ.ದೀಕ್ಷಾ 605 ಅಂಕಗಳಿಸಿದ್ದಾರೆ.

ವಿಶೇಷಚೇತನ ವಿದ್ಯಾರ್ಥಿ ಸಾಧನೆ :

ಬಿಳಾಲುಕೊಪ್ಪ ಸರಕಾರಿ ಪ್ರೌಢಶಾಲೆ ವಿಶೇಷಚೇತನ ವಿದ್ಯಾರ್ಥಿ ಅಂಕಿತ್‌ ಶೇ.65ರಷ್ಟು ಫಲಿತಾಂಶ ಪಡೆದು ಸಾಧನೆ ತೋರಿದ್ದಾನೆ. ಉಂಟೂರುಕಟ್ಟೆ ಕೈಮರ ಗ್ರಾಮದ ಶಬ್ದ ಕೇಳಿಸದ, ಮಾತು ಬಾರದ ಅಂಕಿತನ ಸಾಧನೆ ಸಾರ್ವಜನಿಕರ ಮೆಚ್ಚುಗೆ ಪಡೆದಿದೆ.

ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ, ಸಾಧನೆಗೆ ಪ್ರೇರಕರಾದ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್‌ ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ