ಆ್ಯಪ್ನಗರ

ಉತ್ತಮ ಶಿಕ್ಷಣದಿಂದ ಶ್ರೇಷ್ಠ ವ್ಯಕ್ತಿತ್ವ

ಶೈಕ್ಷ ಣಿಕ ಕ್ಷೇತ್ರದಲ್ಲಿ ಮಕ್ಕಳು ಉತ್ತಮ ಗುರಿಯೊಂದಿಗೆ ಶಿಕ್ಷ ಣ ಪಡೆದರೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ನಿವೃತ್ತ ಮುಖ್ಯಶಿಕ್ಷ ಕಿ ಎಚ್‌.ಎಸ್‌.ಪಾರ್ವತಮ್ಮ ಹೇಳಿದರು.

Vijaya Karnataka 1 Aug 2019, 5:00 am
ಸೊರಬ: ಶೈಕ್ಷ ಣಿಕ ಕ್ಷೇತ್ರದಲ್ಲಿ ಮಕ್ಕಳು ಉತ್ತಮ ಗುರಿಯೊಂದಿಗೆ ಶಿಕ್ಷ ಣ ಪಡೆದರೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ನಿವೃತ್ತ ಮುಖ್ಯಶಿಕ್ಷ ಕಿ ಎಚ್‌.ಎಸ್‌.ಪಾರ್ವತಮ್ಮ ಹೇಳಿದರು.
Vijaya Karnataka Web SMR-31SRBP1


ಬುಧವಾರ ಪಟ್ಟಣದ ಮಾದರಿ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷ ಕರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ಶಿಕ್ಷ ಕಿಯಾಗಿ ಕರ್ತವ್ಯಕ್ಕೆ ಸೇರಿ 38 ವರ್ಷ ಕಾಲ ಸಹಶಿಕ್ಷ ಕಿ, ಮುಖ್ಯಶಿಕ್ಷ ಕಿ, ಸಿಆರ್‌ಪಿಯಾಗಿ ಸಲ್ಲಿಸಿದ್ದೇನೆ. ಉತ್ತಮ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಮಕ್ಕಳು ತಂದೆ, ತಾಯಿ ಹಾಗೂ ಗುರುಗಳಿಗೆ ಗೌರವ ನೀಡುವುದರ ಜತೆಗೆ ಸಂಸ್ಕಾರವಂತರಾಗಿ ಶಿಕ್ಷ ಣ ಕಲಿತರೆ ಉತ್ತಮ ಮಾರ್ಗದರ್ಶಕರಾಗಬಹುದು ಎಂದರು.

ಸಿಆರ್‌ಪಿ ಸತ್ಯನಾರಾಯಣ ಮಾತನಾಡಿ, ಸಂಘ ಸಂಸ್ಥೆಯವರು ಪಾಲ್ಗೊಂಡು ಪಾರ್ವತಮ್ಮ ಅವರನ್ನು ಗೌರವಿಸಿರುವುದು ಅವರ ಪ್ರಾಮಾಣಿಕ ಕರ್ತವ್ಯಕ್ಕೆ ಸಂದ ಗೌರವ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ರೇವಣಕುಮಾರ್‌, ರೋಟರಿ ಅಧ್ಯಕ್ಷ ರಾಜು ಹಿರಿಯಾವಲಿ, ಪ.ಪಂ. ಸದಸ್ಯ ಈರೇಶ್‌ ಮೇಸ್ತ್ರಿ, ಡಿ.ಎಸ್‌.ಶಂಕರ್‌, ಬಸವಣ್ಯಪ್ಪ, ಕೆಂಚಪ್ಪ, ನಾಗರಾಜ ಗುತ್ತಿ, ಅಶೋಕ್‌, ಬಾಬುಭಂಡಾರಿ, ಮುಕ್ತಾಬಾಯಿ ಭಟ್‌, ಇಂದಿರಾ, ಸುನಂದಾ, ಕವಿತಾ, ರೇಷ್ಮಾ, ಪುಟ್ಟಸ್ವಾಮಿಗೌಡ, ನಾಗರಾಜ, ಶಿವಕುಮಾರ, ಪಲ್ಲವಿ, ಸುಮತಿ, ಯಶೋಮತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ