ಆ್ಯಪ್ನಗರ

‘ಸಣ್ಣ ಹೆಜ್ಜೆ ಸಾಧನೆಗೆ ಪ್ರೇರಣೆ‘

ಸಣ್ಣ ಪುಟ್ಟ ಹೆಜ್ಜೆಗಳಿಂದಲೇ ದೊಡ್ಡ ಸಾಧನೆ ಸಾಧ್ಯ. ಶ್ರೇಷ್ಠ ಯೋಚನೆಗಳನ್ನು ಮಾಡುವ ಮೂಲಕ ಮತ್ತೊಬ್ಬರಿಗಿಂತಲೂ ಭಿನ್ನವಾಗಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಹಿಳಾ ಉದ್ಯಮಿ ಶಿವಮೊಗ್ಗದ ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ ಹೇಳಿದರು.

Vijaya Karnataka 29 Jan 2019, 5:00 am
ಸಾಗರ: ಸಣ್ಣ ಪುಟ್ಟ ಹೆಜ್ಜೆಗಳಿಂದಲೇ ದೊಡ್ಡ ಸಾಧನೆ ಸಾಧ್ಯ. ಶ್ರೇಷ್ಠ ಯೋಚನೆಗಳನ್ನು ಮಾಡುವ ಮೂಲಕ ಮತ್ತೊಬ್ಬರಿಗಿಂತಲೂ ಭಿನ್ನವಾಗಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಹಿಳಾ ಉದ್ಯಮಿ ಶಿವಮೊಗ್ಗದ ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ ಹೇಳಿದರು.
Vijaya Karnataka Web SMR-28SGR3


ಇಲ್ಲಿನ ಶ್ರೀಮತಿ ಇಂದಿರಾಗಾಂಧಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಶುಕ್ರವಾರ ಏರ್ಪಡಿಸಿದ್ದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ ಸೈನೊರ-2019ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಕನಸುಗಳನ್ನು ಸಾಯಲು ಬಿಡಬಾರದು. ಸಮಸ್ಯೆ, ಸವಾಲುಗಳು ಜೀವನದ ಅವಿಭಾಜ್ಯ ಅಂಗ ಎಂದು ಪರಿಗಣಿಸಿದಾಗ ಅವುಗಳನ್ನು ಎದುರಿಸುವ ಶಕ್ತಿ ಮತ್ತು ಕಲೆ ರೂಢಿಸಿಕೊಳ್ಳಲು ಸಾಧ್ಯ. ಉತ್ತಮ ಸಂಬಂಧಗಳಿಂದ ಬದುಕಿನ ಮತ್ತು ವ್ಯವಹಾರದ ಯಶಸ್ಸು ಗಳಿಸಬಹುದು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಪ್ರಾಚಾರ‍್ಯ ಡಾ.ಅಶೋಕ ಡಿ.ರೇವಣಕರ್‌ ಮಾತನಾಡಿದರು. ಐಕ್ಯುಎಸಿ ಸಂಯೋಜಕ ಡಾ.ಒ.ಜಿ.ಬಸವನಗೌಡ, ಎಚ್‌.ಲೋಕೇಶಪ್ಪ ಮಹಾವೀರ ವೇದಿಕೆಯಲ್ಲಿದ್ದರು. ಬಿಂದು ಮತ್ತು ಸಂಗಡಿಗರು ಪ್ರಾರ್ಥಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಎಲ್‌.ರಾಜರಾಮ ಪ್ರಾಸ್ತಾವಿಕ ಮಾತನಾಡಿದರು. ಆಶ್ರಿತಾ ಸ್ವಾಗತಿಸಿ, ಎಸ್‌.ಜಿ.ಸ್ವಾತಿ ವಂದಿಸಿದರು. ಸಿಂಧು ನಿರೂಪಿಸಿದರು. ಕೌಶಿಕ ಕಾನಗೋಡು, ವಿಜೇಂದ್ರ ಪ್ರಭು, ರಮಾನಂದ ಕಾಮತ, ದಿನೇಶ, ಮಧು, ಸುಶಾಂತ, ಸುಚಿತ್ರಾ, ಸುಚೇತನ, ಸೌರಭ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ಸಂದರ್ಭ ವಿವಿಧ ಸ್ಪರ್ಧೆನಡೆಯಿತು. ಡಿ.ಉಷಾ ಅತ್ಯುತ್ತಮ ವ್ಯವಸ್ಥಾಪಕಿ ಪ್ರಶಸ್ತಿ ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ