ಆ್ಯಪ್ನಗರ

ಸಾಧಕರ ಸಾಧನೆ ಕ್ರೀಡೆಗೆ ಸ್ಫೂರ್ತಿ

ಅಂತಾರಾಷ್ಟ್ರೀಯ ಮಟ್ಟದಲ್ಲಿಗುರುತಿಸಿಕೊಳ್ಳಲು ಕ್ರೀಡೆಗೆ ಮೂಲ ಸವಲತ್ತು ಒದಗಿಸುವ ಅಗತ್ಯವಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಹೇಳಿದರು.

Vijaya Karnataka 19 Sep 2019, 5:00 am
ಸೊರಬ: ಅಂತಾರಾಷ್ಟ್ರೀಯ ಮಟ್ಟದಲ್ಲಿಗುರುತಿಸಿಕೊಳ್ಳಲು ಕ್ರೀಡೆಗೆ ಮೂಲ ಸವಲತ್ತು ಒದಗಿಸುವ ಅಗತ್ಯವಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಹೇಳಿದರು.
Vijaya Karnataka Web 241917SRBP5_46


ಪಟ್ಟಣದ ಬಂಗಾರಪ್ಪ ಕ್ರೀಡಾಂಗಣದಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳವಾರ ಹಮ್ಮಿಕೊಂಡ ತಾಲೂಕು ಮಟ್ಟದ 17ವರ್ಷದೊಳಗಿನ ಪ್ರೌಢಶಾಲೆ ಬಾಲಕ-ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳು ಆರೋಗ್ಯವಾಗಿರಲು ಪೋಷಕರು ಅವರಿಗೆ ದೈಹಿಕ ಕಸರತ್ತು ನಡೆಸುವ ಅಭ್ಯಾಸ ಮಾಡಿಸಬೇಕು. ಆಗ ಕ್ರೀಡೆಯಲ್ಲಿಸಾಧನೆ ಸಾಧ್ಯ. ಶಿಕ್ಷಕರು ಸಾಧಕ ಕ್ರೀಡಾಪಟುಗಳ ಜೀವನ ಪರಿಚಯಿಸಿದರೆ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುತ್ತದೆ ಎಂದರು. ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ

ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯ ವಿರೇಶ ಕೊಟಗಿ ಕ್ರೀಡಾ ಜ್ಯೋತಿ ಬೆಳಗಿದರು. ಜಿಪಂ ಸದಸ್ಯೆ ತಾರಾ ಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಸದಸ್ಯ ನಾಗರಾಜ ಚಿಕ್ಕಸವಿ, ಬಿಇಒ ಕೆ.ಮಂಜುನಾಥ, ತಾಲೂಕು ನೌಕರ ಸಂಘದ ಅಧ್ಯಕ್ಷ ಮಂಜುನಾಥ, ಶ್ರೀದೇವಿ, ನಿಂಗರಾಜ ಒಡೆಯರ್‌, ಯಂಕ್ಯಾನಾಯ್‌್ಕ, ಉಮೇಶ, ಶ್ರೀನಿವಾಸ, ಕವನಾ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ