ಆ್ಯಪ್ನಗರ

ಬ್ಯಾಂಕ್‌ ಮುಂದೆ ನಟ ಸಂತೋಷ್‌ ಧರಣಿ

ಸಾಲಕ್ಕಾಗಿ ನೀಡಿದ್ದ ಮನೆಯ ದಾಖಲೆ ಆಧಾರದ ಮೇಲೆ ಬೇರೋಬ್ಬರಿಗೆ ಹಣ ವರ್ಗಾವಣೆ ಮಾಡಿ ಸಾಲದ ಕಂತು ಕಟ್ಟುವಂತೆ ಪ್ರತಿ ತಿಂಗಳು ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿ ನಟ ಎಚ್‌.ಟಿ.ಸಂತೋಷ ಕುಮಾರ್‌ ಹಾಗೂ ಅವರ ತಾಯಿ ಇಲ್ಲಿನ ತುಂಗಾ ನಗರದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 11 May 2019, 5:00 am
ಶಿವಮೊಗ್ಗ : ಸಾಲಕ್ಕಾಗಿ ನೀಡಿದ್ದ ಮನೆಯ ದಾಖಲೆ ಆಧಾರದ ಮೇಲೆ ಬೇರೋಬ್ಬರಿಗೆ ಹಣ ವರ್ಗಾವಣೆ ಮಾಡಿ ಸಾಲದ ಕಂತು ಕಟ್ಟುವಂತೆ ಪ್ರತಿ ತಿಂಗಳು ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿ ನಟ ಎಚ್‌.ಟಿ.ಸಂತೋಷ ಕುಮಾರ್‌ ಹಾಗೂ ಅವರ ತಾಯಿ ಇಲ್ಲಿನ ತುಂಗಾ ನಗರದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web actor santhosh strike before bank
ಬ್ಯಾಂಕ್‌ ಮುಂದೆ ನಟ ಸಂತೋಷ್‌ ಧರಣಿ


ಕಳೆದ 2016ರಲ್ಲಿ ದಿನಸಿ ಅಂಗಡಿ ಅಭಿವೃದ್ಧಿಗಾಗಿ ತುಂಗಾ ನಗರದ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೆವು. ಇದಕ್ಕಾಗಿ ತಾಯಿ ಮತ್ತು ತಮ್ಮ ಹೆಸರಿನಲ್ಲಿರುವ ಎರಡು ಮನೆಗಳನ್ನು ಅಡವಿಟ್ಟಿದ್ದೆವು. ಆದರೆ, ಸಾಲದ ಹಣವನ್ನು ಬೇರೊಬ್ಬರ ಖಾತೆಗೆ ವರ್ಗಾಯಿಸಿದ್ದಾರೆ. ಜತೆಗೆ, ಸಾಲದ ಕಂತು ಕಟ್ಟುವಂತೆ ಪ್ರತಿ ತಿಂಗಳು ಒತ್ತಡ ಹೇರುತ್ತಿದ್ದಾರೆ ಎಂದು ಸಂತೋಷ್‌ ಆಪಾದಿಸಿದರು.

ಮಾನಸಿಕವಾಗಿ ನೊಂದು ಸಂತೋಷ್‌ ಅವರು ಬ್ಯಾಂಕ್‌ ಮ್ಯಾನೇಜರ್‌ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ವೇದಿಕೆಯು ಪ್ರಕರಣವನ್ನು ಪರಿಶೀಲಿಸಿ ಬ್ಯಾಂಕ್‌ ಲೋಪ ಎತ್ತಿಹಿಡಿದಿತ್ತು.

'ನಟನಿಗೆ ಸಾಲದ ಮೊತ್ತ, ಬಡ್ಡಿ ಸೇರಿ ಏಪ್ರಿಲ್‌ 18ರೊಳಗೆ ಹಣ ಪಾವತಿಸುವಂತೆ ಗ್ರಾಹಕರ ವೇದಿಕೆ ಆದೇಶ ನೀಡಿತ್ತು. ಇದಕ್ಕೂ ಕ್ಯಾರೆ ಎನ್ನದ ಸಿಂಡಿಕೇಟ್‌ ಆಡಳಿತ, ಹೈಕೊರ್ಟ್‌ ಮೆಟ್ಟಲೇರಲು ಸಿದ್ಧತೆ ನಡೆಸಿದೆ. ಆದರೆ, ನನ್ನದು ಮಧ್ಯಮ ವರ್ಗದ ಕುಟುಂಬ. ಕೋರ್ಟ್‌ಗೆ ಅಲೆದಾಡುವಷ್ಟು ಹಣಕಾಸು ನನ್ನ ಬಳಿ ಇಲ್ಲ. ಇದರಿಂದ ನನ್ನ ವ್ಯವಹಾರಕ್ಕೂ ಹೊಡೆತ ಬೀಳಲಿದೆ' ಎಂದು ಸಂತೋಷ್‌ ಅಲವತ್ತು ಕೊಂಡರು.

ಸಂತೋಷ್‌ ಅವರು 'ಪಂಟರು', 'ಮಲ್ಲಿಕಾರ್ಜುನ್‌ ಬಂಡೆ' ಸಿನಿಮಾದ ನಾಯಕ ನಟ. ಧಾರಾವಾಹಿಗಳಾದ ಕೃಷ್ಣ ರುಕ್ಮಿಣಿ, ಆಕಾಶದೀಪ, ಅಮ್ಮ ನಿನಗಾಗಿ, ಚುಕ್ಕಿ, ಭಾಗ್ಯವಂತರು, ಜೋಕಾಲಿ ಯಲ್ಲಿ ನಟಿಸಿದ್ದಾರೆ.

=========

ದಿನಸಿ ಅಂಗಡಿ ಅಭಿವೃದ್ಧಿಗಾಗಿ ಸಾಲ ಕೇಳಿಕೊಂಡು ಸಿಂಡಿಕೇಟ್‌ ಬ್ಯಾಂಕ್‌ಗೆ ಬಂದಿದ್ದೆ. ಮ್ಯಾನೇಜರ್‌ ಮೋಸ ಮಾಡಿದ್ದಾರೆ. ಈಗ ಸಾಲ ತೆಗೆದುಕೊಳ್ಳದೇ ಸಾಲ ಮರುಪಾವತಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್‌ ಖಾತೆ ಸಿಬಿಲ್‌ ಸ್ಕೋರ್‌ ಕಡಿಮೆ ಇರುವುದರಿಂದ ಯಾವ ಬ್ಯಾಂಕ್‌ನಲ್ಲಿಯೂ ಸಾಲ ಸಿಗುತ್ತಿಲ್ಲ. ಈ ರೀತಿ ಯಾರಿಗೂ ಆಗಬಾರದು. ಬ್ಯಾಂಕ್‌ ಮ್ಯಾನೇಜರ್‌ ಮಾಡಿರುವ ವಂಚನೆ ವಿರುದ್ಧ ನನಗೆ ನ್ಯಾಯ ಸಿಗಬೇಕು. ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇನೆ.

- ಸಂತೋಷ್‌ ಕುಮಾರ್‌, ಚಿತ್ರ ನಟ

=======

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ