ಆ್ಯಪ್ನಗರ

ಮಸಗಲ್ಲಿ ಕಲ್ಲುಕ್ವಾರಿಗೆ ಹೆಚ್ಚುವರಿ ಎಸ್ಪಿ ಭೇಟಿ

ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷ ಣಾಧಿಕಾರಿ ಪಿ.ಮುತ್ತುರಾಜ್‌ ಗುರುವಾರ ತಾಲೂಕಿನ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗಲ್ಲಿಗೆ ಭೇಟಿ ನೀಡಿದರು.

Vijaya Karnataka 13 Jul 2018, 5:00 am
ಹೊಸನಗರ: ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷ ಣಾಧಿಕಾರಿ ಪಿ.ಮುತ್ತುರಾಜ್‌ ಗುರುವಾರ ತಾಲೂಕಿನ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗಲ್ಲಿಗೆ ಭೇಟಿ ನೀಡಿದರು.
Vijaya Karnataka Web additional sp visits kallakwari in masagalli
ಮಸಗಲ್ಲಿ ಕಲ್ಲುಕ್ವಾರಿಗೆ ಹೆಚ್ಚುವರಿ ಎಸ್ಪಿ ಭೇಟಿ


ಮಸಗಲ್ಲಿ ಸರ್ವೆ ನಂ. 16ರಲ್ಲಿ ಪರವಾನಗಿ ಇಲ್ಲದಿದ್ದರೂ ನಾಲ್ಕೈದು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇತ್ತೀಚೆಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಎಎಸ್‌ಪಿ ಸ್ಥಳಕ್ಕೆ ದಿಢೀರ್‌ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಈ ಸಂಬಂಧ ಸೂಕ್ತ ವರದಿ ನೀಡುವಂತೆ ತಹಸೀಲ್ದಾರ್‌ಗೆ ಅವರು ಸೂಚಿಸಿದರು.

ಸ್ಥಳೀಯರ ಮನವಿ: 2 ದಶಕಗಳಿಂದ ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಕಲ್ಲು ಗಣಿಗಾರಿಕೆಯನ್ನೇ ಅವಲಂಬಿಸಿವೆ. ಕಲ್ಲು ಗಣಿಗಾರಿಕೆ ನಿಲ್ಲಿಸಿದಲ್ಲಿ ಈ ಕುಟುಂಬಗಳು ಬೀದಿಗೆ ಬರಲಿವೆ. ದಯಮಾಡಿ ಕಲ್ಲು ಕ್ವಾರಿ ನಡೆಸಲು ಅನುಮತಿ ನೀಡುವಂತೆ ಸ್ಥಳೀಯರು ಹೆಚ್ಚುವರಿ ಎಸ್ಪಿಗೆ ಮನವಿ ಮಾಡಿದರು.

ಈ ವೇಳೆ ತಹಸೀಲ್ದಾರ್‌ ಚಂದ್ರಶೇಖರ ನಾಯ್ಕ್‌, ಪ್ರಭಾರ ರೇಣುಕಪ್ಪ, ಪಿಡಿಒ ಅಂಬಿಕಾ, ವೃತ್ತ ನಿರೀಕ್ಷ ಕ ಮಂಜುನಾಥ, ಪಿಎಸ್‌ಐ ಅಶ್ವಿನಿಕುಮಾರ್‌ ಮತ್ತಿತರರು ಇದ್ದರು.

ಚಿತ್ರ: 12ಎಚ್‌ಒಎಸ್‌ಪಿ1:

ಹೊಸನಗರ ತಾಲೂಕು ಮಸಗಲ್ಲಿ ಕಲ್ಲುಕ್ವಾರಿಗೆ ಹೆಚ್ಚುವರಿ ಎಸ್ಪಿ ಪಿ.ಮುತ್ತುರಾಜ್‌ ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ