ಆ್ಯಪ್ನಗರ

ಕಾಯಿಲೆ ಉಲ್ಬಣ ಹಿನ್ನೆಲೆ ಕಟ್ಟೆಚ್ಚರ

ಕ್ಯಾಸನೂರು ಅರಣ್ಯ ಕಾಯಿಲೆ ಉಲ್ಬಣ ಹಿನ್ನೆಲೆಯಲ್ಲಿಸಾಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಜ್ವರ ಪ್ರಕರಣ ಕಂಡುಬಂದರೆ ತಕ್ಷಣ ಅಂತಹವರ ರಕ್ತದ ಮಾದರಿ ಪಡೆದು ಪರೀಕ್ಷೆ ಮಾಡಲಾಗುತ್ತಿದೆ.

Vijaya Karnataka 14 Jan 2020, 5:00 am
ಶಿವಮೊಗ್ಗ: ಕ್ಯಾಸನೂರು ಅರಣ್ಯ ಕಾಯಿಲೆ ಉಲ್ಬಣ ಹಿನ್ನೆಲೆಯಲ್ಲಿಸಾಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಜ್ವರ ಪ್ರಕರಣ ಕಂಡುಬಂದರೆ ತಕ್ಷಣ ಅಂತಹವರ ರಕ್ತದ ಮಾದರಿ ಪಡೆದು ಪರೀಕ್ಷೆ ಮಾಡಲಾಗುತ್ತಿದೆ.
Vijaya Karnataka Web alertness due to high fever
ಕಾಯಿಲೆ ಉಲ್ಬಣ ಹಿನ್ನೆಲೆ ಕಟ್ಟೆಚ್ಚರ


ಜನವರಿ 1ರಿಂದ 13ರ ವರೆಗೆ 250ಕ್ಕೂ ಅಧಿಕ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ತೀರ್ಥಹಳ್ಳಿ ಮತ್ತು ಸಾಗರದಿಂದ ಅತಿ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಪ್ರತಿ ನಿತ್ಯ ರಕ್ತದ ಮಾದರಿಗಳು ನಾನಾ ಕಡೆಯಿಂದ ಪರಿಮಾಣು ಕ್ರಿಮಿ ಪರಿಶೋಧನಾಲಯ(ವಿಡಿಎಲ್‌)ಕ್ಕೆ ಬರುತ್ತಿದ್ದು, ಒಂದೇ ದಿನದಲ್ಲಿವರದಿ ನೀಡಲಾಗುತ್ತಿದೆ. ಜತೆಗೆ, ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ರಕ್ತದ ಮಾದರಿಯನ್ನೂ ವಿಡಿಎಲ್‌ಗೆ ಕಳುಹಿಸಲಾಗುತ್ತಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳೂ ಜಿಲ್ಲೆಯ ಯಾವ ಪ್ರದೇಶಗಳಲ್ಲಿಮಂಗನ ಕಾಯಿಲೆ ಕಂಡುಬಂದಿದೆಯೋ ಅಂತಹ ಕಡೆಗಳಲ್ಲಿನಿರಂತರ ಭೇಟಿ ನೀಡಿ, ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ವಹಿಸಬೇಕಾದ ಮುಂಜಾಗರೂಕತೆ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ.

===

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ