ಆ್ಯಪ್ನಗರ

ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಿದ ಅಂಬೇಡ್ಕರ್‌: ಸ್ವಾಮೀಜಿ

ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ರಚಿಸುವ ಮೂಲಕ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಿದ ಅಂಬೇಡ್ಕರ್‌ ತಮ್ಮ ವ್ಯಕ್ತಿತ್ವದಿಂದ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀಷಡಕ್ಷ ರಿಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Vijaya Karnataka 31 May 2019, 5:00 am
ಸೊರಬ: ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ರಚಿಸುವ ಮೂಲಕ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಿದ ಅಂಬೇಡ್ಕರ್‌ ತಮ್ಮ ವ್ಯಕ್ತಿತ್ವದಿಂದ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀಷಡಕ್ಷ ರಿಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
Vijaya Karnataka Web SMR-30SRBP1


ತಾಲೂಕಿನ ಉಳವಿಯ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಇತ್ತೀಚೆಗೆ ಏರ್ಪಡಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 128ನೇ ಜನ್ಮದಿನಾಚರಣೆ ಹಾಗೂ 886ನೇ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಶೋಷಿತ ವರ್ಗವನ್ನು ಮೇಲಕ್ಕೆತ್ತಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ನೆನೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದ್ದು, ಎಲ್ಲ ವರ್ಗದವರು ಅಂಬೇಡ್ಕರ್‌ ಜಯಂತಿ ಆಚರಿಸುವಂತಾಗಬೇಕೆಂದರು.

ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಕಂದಾಚಾರ, ಮೂಢನಂಬಿಕೆ ತೊಡೆದು ಹಾಕಲು ಶ್ರಮಿಸಿದ್ದಲ್ಲದೇ, ಮಾನವೀಯತೆ ಎತ್ತಿ ಹಿಡಿದ ವಿಶ್ವದ ಮಹಾನ್‌ ಗುರು. ಇಂತಹ ಮಹನೀಯರ ಆದರ್ಶವನ್ನು ಎಲ್ಲರೂ ಪಾಲಿಸಬೇಕೆಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸತ್ಯ ಭದ್ರಾವತಿ ಮಾತನಾಡಿ, ಎಲ್ಲ ರಾಜಕೀಯ ಪಕ್ಷ ಗಳು ಸ್ವಾರ್ಥ ಸಾಧನೆ ಬದಿಗೊತ್ತಿ ದಲಿತರು ಮತ್ತು ಶೋಷಿತರನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕಿದೆ ಎಂದರು. ಅಧ್ಯಕ್ಷ ತೆ ವಹಿಸಿದ್ದ ತಾಲೂಕು ಸಂಚಾಲಕ ಮಹೇಶ್‌ ಶಕುನವಳ್ಳಿ ಮಾತನಾಡಿದರು. ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ ಸೊರಬ, ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾ.ಸಂ.ಸಂಚಾಲಕ ಪ್ರಕಾಶ್‌ ಮಲ್ಲಾಪುರ, ಬಂಗಾರಪ್ಪ ಬಿಟ್ಟಕ್ಕಿ, ರುದ್ರಪ್ಪ ಭೈರೇಕೊಪ್ಪ, ವಳ್ಳಿಯಮ್ಮ, ಗ್ರಾಪಂ ಸದಸ್ಯೆ ಮಂಜಪ್ಪ, ನಾಗರಾಜ ಹುರುಳಿಕೊಪ್ಪ, ನಾಗಪ್ಪ ಮಾಸ್ತರ್‌, ಪರಮೇಶ್ವರ, ಸಂಜೀವ ಪಿ.ಟಿ, ಪುಟ್ಟಸ್ವಾಮಿ, ರಾಮಣ್ಣ, ನಾಗರಾಜ ಕಾಸರಗುಪ್ಪೆ ಮತ್ತಿತರರು ಇದ್ದರು. ಈ ಸಂದರ್ಭ ಎಣ್ಣೆಕೊಪ್ಪದ ವಿಶೇಷಚೇತನ ಮಹಿಳೆ ಲತಾ ಅವರಿಗೆ ಸಮಿತಿ ವತಿಯಿಂದ ಹೊಲಿಗೆ ಯಂತ್ರ ಕೊಡುಗೆಯಾಗಿ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ