ಆ್ಯಪ್ನಗರ

ಕರ್ನಾಟಕದಲ್ಲಿ ಫೊರೆನ್ಸಿಕ್, ರಕ್ಷಾ ವಿವಿ ಕಾಲೇಜು ಆರಂಭಿಸಿ: ಅಮಿತ್‌ ಶಾ ಸೂಚನೆ

ಸಿಆರ್‌ಪಿಎಫ್ ವತಿಯಿಂದ ನಂದಿಯ ಪ್ರತಿಮೆಯನ್ನು ನೀಡಿ ಅಮಿತ್ ಶಾ ಅವರನ್ನು ಗೌರವಿಸಲಾಯಿತು. ಅಲ್ಲದೆ ಅಮಿತ್ ಶಾ ಅವರು ಸಹ ಭದ್ರಾವತಿಯ ಆರ್‌ಎಎಫ್ ಘಟಕಕ್ಕೆ ನಂದಿ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿದರು.

Vijaya Karnataka Web 16 Jan 2021, 11:06 pm
ಶಿವಮೊಗ್ಗ: ರಕ್ಷಣೆ ಮತ್ತು ಪೊಲೀಸ್ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಗಳ ಸಂಯೋಜಿತ ಕಾಲೇಜುಗಳನ್ನು ಕರ್ನಾಟಕದಲ್ಲಿ ಆರಂಭಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದರು.
Vijaya Karnataka Web ಅಮಿತ್‌ ಶಾ
ಅಮಿತ್‌ ಶಾ


ಭದ್ರಾವತಿಯ ಬುಳ್ಳಾಪುರ (ಮಿಲ್ಟ್ರಿಕ್ಯಾಂಪ್)ದಲ್ಲಿ ಸಿಆರ್‌ಪಿಎಫ್‌ನ ಅಂಗ ಸಂಸ್ಥೆಯಾದ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್)ನ 97ನೇ ಬೆಟಾಲಿಯನ್‌ಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿಶ್ವದಲ್ಲೇ ಮೊದಲ ಬಾರಿಗೆ ದಿಲ್ಲಿಯಲ್ಲಿ ರಾಷ್ಟೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಈ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಕರ್ನಾಟಕದಲ್ಲಿ ಸಂಯೋಜಿತ ಕಾಲೇಜುಗಳನ್ನು ಆರಂಭಿಸುವುದಾದಲ್ಲಿ ಗೃಹ ಇಲಾಖೆಯಿಂದ ಎಲ್ಲ ರೀತಿಯ ನೆರವು ಒದಗಿಸಲಾಗುವುದು. ಇದು ನಾಡಿನ ಜನತೆ ದೇಶದ ರಕ್ಷಣೆ ಮತ್ತು ಭದ್ರತಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದರು.

ಅತ್ಯಾಧುನಿಕ ತರಬೇತಿ

ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಕ್ಷಿಪ್ರ ಕಾರ್ಯ ಪಡೆಯಲ್ಲಿ 3.50 ಲಕ್ಷ ಯೋಧರಿದ್ದು ದೇಶದೊಳಗೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಕೇವಲ ಅಶಾಂತಿ ಸಂದರ್ಭದಲ್ಲಿ ಅಲ್ಲದೆ ಅತಿವೃಷ್ಟಿ ಮತ್ತು ಇತರೆ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಜನತೆಯ ಜೀವ ರಕ್ಷಣೆ ಮಾಡುವ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ಜನತೆ ಸಡಗರ ಮತ್ತು ಸಂಭ್ರಮದಿಂದ ಗಣೇಶ ಚತುರ್ಥಿ, ದೀಪಾವಳಿ, ಹೋಳಿ ಹಬ್ಬ ಆಚರಿಸುತ್ತಿದ್ದರೆ ಇವರು ಮನೆಯಿಂದ ಹೊರಗಿದ್ದು ಜನರ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ದೇಶದೊಳಗಿನ ಜನರ ಸುರಕ್ಷತೆಗಾಗಿ ತಮ್ಮ ಜೀವವನ್ನೇ ಫಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಪೊಲೀಸ್ ಇಲಾಖೆ ಆಧುನೀಕರಣಕ್ಕೆ 8 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ವಿಶ್ವ ದರ್ಜೆಯ ಅತ್ಯಾಧುನಿಕ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಅಮಿತ್‌ ಶಾ ತಿಳಿಸಿದರು.

ಲ್ಯಾಬ್ ಹೆಚ್ಚಳ

ಇವರ ಸೇವೆಯಿಂದಾಗಿ ಜನರಲ್ಲಿ ಇವರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಸರಕಾರ ತನ್ನ ನೀತಿಯನ್ನು ಬದಲಿಸಿಕೊಂಡಿದೆ. ಅವರ ಆತ್ಮ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅವರು ಹುತಾತ್ಮರಾದ ಸಂದರ್ಭದಲ್ಲಿ ಅಕ್ಷಯಕುಮಾರ್ ಫೌಂಡೇಷನ್ ಸಹಯೋಗದಲ್ಲಿ 50 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುತ್ತಿದೆ. ಸಿಆರ್‌ಪಿಎಫ್‌ಗೆ ನೀಡಲಾಗುವ ಅನುದಾನವನ್ನು ಕಳೆದ ವರ್ಷಕ್ಕಿಂತ ಶೇ.೮ರಷ್ಟು ಹೆಚ್ಚಳ ಮಾಡಲಾಗಿದೆ ಎಂದರು.

ವಿಶ್ವದೆಲ್ಲೆಡೆಯಂತೆ ಭಾರತದಲ್ಲೂ ಕೊರೊನಾ ದಾಳಿ ನಡೆದಾಗ ಇಡೀ ದೇಶದಲ್ಲಿ ಕೊರೊನಾ ಪರೀಕ್ಷೆ ನಡೆಸುವಂತಹ ಕೇವಲ ಒಂದು ಪ್ರಯೋಗಾಲಯ ಇತ್ತು. ಇದರ ಬಗ್ಗೆ ಗೇಲಿ ಮಾತುಗಳು ಕೇಳಿಬಂದಿದ್ದವು. ಅದರೆ, ಈಗ 200ಕ್ಕೂ ಅDiಕ ಪ್ರಯೋಗಾಲಯಗಳಿವೆ. ಶ್ರೀಮಂತ ದೇಶಗಳು ಕೊರೊನಾ ನಿಯಂತ್ರಣಕ್ಕೆ ತಿಣುಕಾಡುವಾಗ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಕೊರೊನಾವನ್ನು ಹತೋಟಿಯಲ್ಲಿಡಲಾಯಿತು. ಇದಕ್ಕೆ ದೇಶದ ಜನತೆ ನೀಡಿದ ಸಹಕಾರ ಕಾರಣವಾಯಿತು. ಈಗ ಲಸಿಕೆ ಅಭಿವೃದ್ಧಿಪಡಿಸಿದ್ದು ದೇಶದೆಲ್ಲೆಡೆ ನೀಡಲಾಗುತ್ತಿದೆ ಎಂದರು.

ಇದಕ್ಕೂ ಮೊದಲು ಅಮಿತ್ ಶಾ ಅವರು ಕ್ಷಿಪ್ರ ಕಾರ್ಯ ಪಡೆಗೆ ಭೂಮಿ ಪೂಜೆ ನೆರವೇರಿಸಿ ಶಿಲಾನ್ಯಾಸ ಮಾಡಿದರು.

ಸಿಆರ್‌ಪಿಎಫ್ ವತಿಯಿಂದ ನಂದಿಯ ಪ್ರತಿಮೆಯನ್ನು ನೀಡಿ ಅಮಿತ್ ಶಾ ಅವರನ್ನು ಗೌರವಿಸಲಾಯಿತು. ಅಲ್ಲದೆ ಅಮಿತ್ ಶಾಸಹ ಭದ್ರಾವತಿಯ ಆರ್‌ಎಎಫ್ ಘಟಕಕ್ಕೆ ನಂದಿ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ