ಆ್ಯಪ್ನಗರ

‘ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗಬೇಕು’

ರೈತರ ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗಬೇಕು. ಆಗ ಮಾತ್ರ ರೈತರು ಆರ್ಥಿಕ ಅಭಿವೃದ್ಧಿ ಹೊಂದಿ ಸ್ವಾವಲಂಬನೆಯ ಬದುಕು ನಡೆಸಲು ಸಾಧ್ಯ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೊಸನಗರದ ಕಾರ‍್ಯದರ್ಶಿ ಎಂ.ವಿ. ಶೈಲಜಾ ಹೇಳಿದರು.

ವಿಕ ಸುದ್ದಿಲೋಕ 3 Apr 2017, 9:00 am

ರಿಪ್ಪನ್‌ಪೇಟೆ: ರೈತರ ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗಬೇಕು. ಆಗ ಮಾತ್ರ ರೈತರು ಆರ್ಥಿಕ ಅಭಿವೃದ್ಧಿ ಹೊಂದಿ ಸ್ವಾವಲಂಬನೆಯ ಬದುಕು ನಡೆಸಲು ಸಾಧ್ಯ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೊಸನಗರದ ಕಾರ‍್ಯದರ್ಶಿ ಎಂ.ವಿ. ಶೈಲಜಾ ಹೇಳಿದರು.

ಪಟ್ಟಣ ಸಮೀಪದ ತಳಲೆ ಗ್ರಾಮದ ಗೋಣಿಕೆರೆಯ ಕೀರ್ತಿ ಎಸ್ಟೇಟ್‌ನಲ್ಲಿ ಭಾನುವಾರ ಹೊಸಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮಾರುಕಟ್ಟೆ ಭಾಗೀದಾರರ ಶಿಕ್ಷ ಣ ಯೋಜನೆಯಡಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಸರಕಾರವು ಕೃಷಿ ಇಲಾಖೆ ವತಿಯಿಂದ ಆನ್‌ಲೈನ್‌ ಮಾರಾಟದ ವ್ಯವಸ್ಥೆ ಮಾಡಿದೆ. ಇದರಿಂದ ರೈತರ ಬೆಳೆಗೆ ಉತ್ತಮ ಸ್ಪರ್ಧಾತ್ಮಕ ಧಾರಣೆ ದೊರೆಯಲಿದ್ದು, ರೈತರು ತಮ್ಮ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಮಾರಿದರೆ ಅಧಿಕ ಬೆಲೆ ದೊರೆಯುವುದರ ಜತೆಗೆ ಆರ್ಥಿಕ ಲಾಭವುಂಟಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀ.ನಾ. ಶ್ರೀನಿವಾಸ್‌ ಮಾತನಾಡಿ, ದೇಶದಲ್ಲಿನ ಬಹುಸಂಖ್ಯಾತರ ಉದ್ಯೋಗ ಕೃಷಿ. ಆದರೆ ಕೃಷಿಕನಿಗೆ ಮಾತ್ರ ನೆಲೆ ಮತ್ತು ಬೆಲೆ ಇಲ್ಲದಂತಾಗಿದೆ ಎಂದರು.

ಎಪಿಎಂಸಿ ಸದಸ್ಯ ಎಂ.ಬಿ.ಲಕ್ಷ ್ಮಣಗೌಡ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಈಶ್ವರಪ್ಪಗೌಡ, ಅಶೋಕ್‌, ಲೋಕಪ್ಪಗೌಡ, ಲಕ್ಷ್ಮಿ ನಾರಾಯಣ, ರಾಮಚಂದ್ರ, ಎಂ.ಎಂ.ಪರಮೇಶ್‌ ಇತರರು ಭಾಗವಹಿಸಿದ್ದರು.

--------------

ಕೇಂದ್ರ ಸರಕಾರ ಸ್ವಾಮಿನಾಥನ್‌ ಆಯೋಗ ನೀಡಿರುವ ವರದಿ ಜಾರಿಗೊಳಿಸುವ ಮೂಲಕ ರೈತರ ಹಿತರಕ್ಷ ಣೆಗೆ ಮುಂದಾಗಬೇಕು. ಆಗ ರೈತರ ಆತ್ಮಹತ್ಯೆಯನ್ನು ತಡೆಯಬಹುದು. ಯಾವುದೇ ಸರಕಾರವಾಗಲಿ ರೈತರಿಗೆ ಸರಿಯಾದ ಸವಲತ್ತು ನೀಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.

ತೀ.ನಾ. ಶ್ರೀನಿವಾಸ್‌

Vijaya Karnataka Web amp39 amp39
‘ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗಬೇಕು’

--------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ