ಆ್ಯಪ್ನಗರ

ಚಕ್ರಾ ಅರಣ್ಯ ತರಬೇತಿ ಕೇಂದ್ರಕ್ಕೆ ಎಪಿಸಿಸಿಎಫ್‌ ಭೇಟಿ

ತಾಲೂಕಿನ ಚಕ್ರ ಅರಣ್ಯ ತರಬೇತಿ ಕೇಂದ್ರಕ್ಕೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ರಾಧಾದೇವಿ ಶನಿವಾರ ಭೇಟಿ ನೀಡಿದರು.

Vijaya Karnataka 17 Jan 2019, 5:00 am
ಹೊಸನಗರ: ತಾಲೂಕಿನ ಚಕ್ರ ಅರಣ್ಯ ತರಬೇತಿ ಕೇಂದ್ರಕ್ಕೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ರಾಧಾದೇವಿ ಶನಿವಾರ ಭೇಟಿ ನೀಡಿದರು.
Vijaya Karnataka Web apccf visited to chakra forest training center
ಚಕ್ರಾ ಅರಣ್ಯ ತರಬೇತಿ ಕೇಂದ್ರಕ್ಕೆ ಎಪಿಸಿಸಿಎಫ್‌ ಭೇಟಿ

ಈ ವೇಳೆ ಕೇಂದ್ರದ ಎಸಿಎಫ್‌ ಐ.ಎಂ. ನಾಗರಾಜ್‌, ತರಬೇತಿ ಕೇಂದ್ರದಲ್ಲಿ ಮೂಲಸೌಕರ‍್ಯ ವ್ಯವಸ್ಥೆ ಅಗತ್ಯವಿರುವ ಕುರಿತು ಗಮನ ಸೆಳೆದರು.

ಸಿಬ್ಬಂದಿ ಕೊರತೆ, ವೇತನ ಸಮಸ್ಯೆ, ನೀರು, ಆರೋಗ್ಯ ವ್ಯವಸ್ಥೆ ಹಾಗೂ ಗ್ರಂಥಾಲಯ, ಗಣಕಯಂತ್ರದ ಕೊಠಡಿ ಅಭಿವೃದ್ಧಿ ಆಗದಿರುವ ಕುರಿತು ಮಾಹಿತಿ ನೀಡಿದರು. ಅಲ್ಲದೇ ತರಬೇತಿ ಹೊಂದಲು ಬರುವ ಶಿಬಿರಾರ್ಥಿಗಳಿಗೆ ದೈಹಿಕ ಕಸರತ್ತಿಗೆ ಅಗತ್ಯವಾದ ಆಟದ ಮೈದಾನದ ಅವ್ಯವಸ್ಥೆ ಕುರಿತು ಬೆಳಕು ಚೆಲ್ಲಿದರು. ಇದಕ್ಕೆ ಸ್ಪಂದಿಸಿದ ರಾಧಾದೇವಿ, ತುರ್ತಾಗಿ ಬೇಕಾಗಿರುವ ಕಂಪ್ಯೂಟರ್‌, ವಾಹನ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
ಮೈದಾನ ಕಾಮಗಾರಿ ಕುರಿತು ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸಿ, ಕಾಮಗಾರಿ ಪ್ರಾರಂಭಕ್ಕೆ ಸೂಚನೆ ನೀಡಿದರು. ಇನ್ನುಳಿದಂತೆ ಗ್ರಂಥಾಲಯ, ನೀರು, ವಿದ್ಯುತ್‌ ಸಮಸ್ಯೆಗೆ ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಿಬ್ಬಂದಿ ವೇತನ ಸಮಸ್ಯೆ ಕುರಿತು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಅರಣ್ಯ ವೀಕ್ಷ ಕರ ಕವಾಯಿತು, ದೈಹಿಕ ಕಸರತ್ತು, ಪ್ರತಿಭೆಯನ್ನು ವೀಕ್ಷಿಸಿದ ಅವರು ಅಭ್ಯರ್ಥಿಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು. ಈ ವೇಳೆ ವಲಯ ಅರಣ್ಯಾಧಿಕಾರಿಗಳಾದ ಸುಧಾಕರ, ಆದರ್ಶ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ