ಆ್ಯಪ್ನಗರ

ಶಾಲೆ ಬಂದ್‌ಗೆ ಅನುಮತಿ ಕೋರಿ ಮನವಿ

ರಾಜ್ಯ ಮತ್ತು ಜಿಲ್ಲಾ ಸಂಘದ ಸೂಚನೆ ಮೇರೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜು.9ರಂದು ಹಮ್ಮಿಕೊಂಡಿರುವ ಸರಕಾರಿ ಶಾಲೆಗಳ ಬಂದ್‌ಗೆ ಸಂಬಂಧಪಟ್ಟಂತೆ ಸಾಗರ ತಾಲೂಕಿನ ಶಾಲೆಗಳನ್ನು ಬಂದ್‌ ಮಾಡಲು ಅನುಮತಿ ನೀಡುವಂತೆ ಕೋರಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದಿಂದ ಕ್ಷೇತ್ರ ಶಿಕ್ಷ ಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 8 Jul 2019, 5:00 am
ಸಾಗರ : ರಾಜ್ಯ ಮತ್ತು ಜಿಲ್ಲಾ ಸಂಘದ ಸೂಚನೆ ಮೇರೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜು.9ರಂದು ಹಮ್ಮಿಕೊಂಡಿರುವ ಸರಕಾರಿ ಶಾಲೆಗಳ ಬಂದ್‌ಗೆ ಸಂಬಂಧಪಟ್ಟಂತೆ ಸಾಗರ ತಾಲೂಕಿನ ಶಾಲೆಗಳನ್ನು ಬಂದ್‌ ಮಾಡಲು ಅನುಮತಿ ನೀಡುವಂತೆ ಕೋರಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದಿಂದ ಕ್ಷೇತ್ರ ಶಿಕ್ಷ ಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web SMR-06sgr5


ಪ್ರತಿಭಟನೆಯಲ್ಲಿ ಸಾಗರ ತಾಲೂಕಿನ ಎಲ್ಲ ಶಿಕ್ಷ ಕರು ಪಾಲ್ಗೊಳ್ಳಲು ತೆರಳುತ್ತಿರುವುದರಿಂದ ಆ ದಿನ ಸರಕಾರಿ ಶಾಲೆ ನಡೆಸಲು ಸಾಧ್ಯವಾಗುವುದಿಲ್ಲ. ಜು. 9ರಂದು ಶಾಲೆ ರಜೆ ಮಾಡಿದ್ದನ್ನು ಮತ್ತೊಂದು ದಿನ ಶಾಲೆ ನಡೆಸುವ ಮೂಲಕ ಸರಿದೂಗಿಸಲಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಸಂಘದ ಅಧ್ಯಕ್ಷ ಎಂ.ಎಸ್‌.ತಿಮ್ಮಪ್ಪ, ಕಾರ್ಯದರ್ಶಿ ಡಿ.ಕೆ.ಮೋಳೆ, ಬಡ್ತಿ ಮುಖ್ಯ ಶಿಕ್ಷ ಕರ ಸಂಘದ ಅಧ್ಯಕ್ಷ ವಿ.ಟಿ.ಸ್ವಾಮಿ, ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಡಿ.ಗಣಪತಪ್ಪ, ಮಾಲತೇಶ್‌, ಪ್ರಮುಖರಾದ ಓ.ಕೆ.ಶಿವಪ್ಪ, ಪಾರ್ವತಿ, ಬೂದ್ಯಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ