ಆ್ಯಪ್ನಗರ

24ಕ್ಕೆ ಶ್ರೀಮದ್ಭಗವದ್ಗೀತಾ ನಿತ್ಯ ಪಾರಾಯಣ ಮಹಾಯಜ್ಞ

ಗೀತಾಮಿತ್ರ ಅಧ್ಯಾತ್ಮಿಕ ಮಾಸಪತ್ರಿಕೆಯಿಂದ ನ.24ರಂದು ಲಗನ ಮಂದಿರದಲ್ಲಿಶ್ರೀಮದ್ಭಗವದ್ಗೀತಾ ನಿತ್ಯ ಪಾರಾಯಣ ಮಹಾಯಜ್ಞ ಶ್ರೀ ಕೃಷ್ಣಾರ್ಪಣ ಜರುಗಲಿದೆ.

Vijaya Karnataka 21 Nov 2019, 5:00 am
ಶಿವಮೊಗ್ಗ: ಗೀತಾಮಿತ್ರ ಅಧ್ಯಾತ್ಮಿಕ ಮಾಸಪತ್ರಿಕೆಯಿಂದ ನ.24ರಂದು ಲಗನ ಮಂದಿರದಲ್ಲಿಶ್ರೀಮದ್ಭಗವದ್ಗೀತಾ ನಿತ್ಯ ಪಾರಾಯಣ ಮಹಾಯಜ್ಞ ಶ್ರೀ ಕೃಷ್ಣಾರ್ಪಣ ಜರುಗಲಿದೆ.
Vijaya Karnataka Web at 24 srimadbhagavadgita is the nithya parana mahayagya
24ಕ್ಕೆ ಶ್ರೀಮದ್ಭಗವದ್ಗೀತಾ ನಿತ್ಯ ಪಾರಾಯಣ ಮಹಾಯಜ್ಞ


ಲೋಕ ಕಲ್ಯಾಣಾರ್ಥ ಹಾಗೂ ವಿಶ್ವ ಶಾಂತಿಗಾಗಿ ಈ ಮಹಾಯಜ್ಞ ನಡೆಯಲಿದ್ದು, ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಗೀತಾಮಿತ್ರ ಅಧ್ಯಾತ್ಮಿಕ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಶಾರದಾ ಗೋಪಾಲ್‌ ಬುಧವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

ಅಂದು ಬೆಳಗ್ಗೆ 6ರಿಂದ ಶ್ರೀ ಕೃಷ್ಣಾರ್ಪಣ ಆರಂಭಗೊಳ್ಳಲಿದ್ದು, ದಾವಣಗೆರೆಯ ಜಡೆಸಿದ್ದ ಶಿವಯೋಗೇಶ್ವರ ಮಠದ ವೇ.ಬ್ರ.ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರು ಉದ್ಘಾಟಿಸಲಿದ್ದಾರೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಕುಬೇರನ್‌ ಸಿಲ್‌್ಕ$್ಸ ಮಾಲೀಕ ಕೋಮರ್ಲ ವೆÜಂಕಟೇಶ್‌, ಸಮಾಜ ಸೇವಾ ಪ್ರಶಸ್ತಿ ಪುರಸ್ಕೃತ ಅಜ್ಜಂಪುರದ ಸತ್ಯನಾರಾಯಣ ಶ್ರೇಷ್ಠಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿಪ್ರಮುಖರಾದ ಸರೋಜಾ ಗೋವಿಂದರಾಜ್‌, ವೈ.ಗೋಪಾಲಕೃಷ್ಣ ಗುಪ್ತ, ಗೋವಿಂದರಾಜ್‌ ಗುಪ್ತ, ಟಿ.ಆರ್‌.ಅಶ್ವತ್‌್ಥ ನಾರಾಯಣ ಶೆಟ್ಟಿ, ನಾಗರಾಜ್‌ ಶೆಟ್ಟಿ, ಶ್ರೀನಿವಾಸ್‌, ಶ್ರೀನಾಥ್‌ ಮತ್ತಿತರರು ಹಾಜರಿದ್ದರು.
---------

24ರಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಶ್ರೀ ಕೃಷ್ಣ ಕಲ್ಯಾಣೋತ್ಸವದಲ್ಲಿಕಲ್ಲಗಂಗೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾನಂದ ಸರಸ್ವತಿ ಸಾನ್ನಿಧ್ಯವಹಿಸುವರು. ಆರ್ಯವೈಶ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಿ.ಎಸ್‌.ಅರುಣ್‌, ಶ್ರೀ ರಾಮಮಂದಿರದ ಸತೀಶ್‌ ಭಟ್ಟ ಪಾಲ್ಗೊಳ್ಳಲಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಭಾಗವಹಿಸುವರು.

-ಶಾರದಾ ಗೋಪಾಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ