ಆ್ಯಪ್ನಗರ

ಒಕ್ಕೂಟದಿಂದ ಅಡಕೆ ಬೆಳೆ ರಕ್ಷ ಣೆಗೆ ಪ್ರಯತ್ನ

ಸಹಕಾರ ಸಂಘಗಳ ಒಕ್ಕೂಟದಿಂದ ಅಡಕೆ ಬೆಳೆ ರಕ್ಷ ಣೆಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ ಎಂದು ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎನ್‌.ಸುಬ್ರಹ್ಮಣ್ಯ ಹೇಳಿದರು.

Vijaya Karnataka 11 Aug 2019, 5:00 am
ಭದ್ರಾವತಿ: ಸಹಕಾರ ಸಂಘಗಳ ಒಕ್ಕೂಟದಿಂದ ಅಡಕೆ ಬೆಳೆ ರಕ್ಷ ಣೆಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ ಎಂದು ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎನ್‌.ಸುಬ್ರಹ್ಮಣ್ಯ ಹೇಳಿದರು.
Vijaya Karnataka Web SMR-10BDVT2


ಅವರು ಶನಿವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ಮಾಮ್ಕೋಸ್‌ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಷೇರುದಾರರ ಸಭೆ ಉದ್ಘಾಟಿಸಿ ಮಾತನಾಡಿದರು.

ಅಡಕೆ ಹಾನಿಕಾರಿ ಅಲ್ಲ ಎಂಬ ಅಂಶವನ್ನು ಸಂಶೋಧನೆ ಹಾಗೂ ಇತರೆ ಶಿಬಿರ ಮೂಲಕ ಮನವರಿಕೆ ಮಾಡುವ ಕೆಲಸ ಮಾಡಲಾಗಿದೆ. ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅಡಕೆ ಕುರಿತಾಗಿ ಹೇಳಿರುವ ಮಾತಿಗೆ ಪ್ರತಿಯಾಗಿ ರಾಜ್ಯದ ಸಂಸದರು ತಕ್ಕ ಉತ್ತರ ನೀಡಿದ್ದಾರೆ. ಈ ಹೇಳಿಕೆ ನಂತರ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಸಚಿವರು ಸೇರಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಅಡಕೆ ಹಾನಿಕಾರಕ ಅಲ್ಲ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.

ಮಲೆನಾಡು ಪ್ರದೇಶಗಳಲ್ಲಿ ತಲತಲಾಂತರಗಳಿಂದ ಅಡಕೆ ಸೇವಿಸುತ್ತಿರುವ ಜನರನ್ನು ಭೇಟಿ ಮಾಡಿ ಅವರೊಂದಿಗೆ ಸಮಾಲೋಚನೆ ಹಾಗೂ ಅವರ ಆರೋಗ್ಯ ತಪಾಸಣೆ ಮಾಡಿದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವ ಪ್ರಯತ್ನ ಮಾಡಿದ್ದೇವೆ. ಅಡಕೆ ಮಾರಾಟ ಮೇಲೆ ಶೇ.5 ಜಿಎಸ್‌ಟಿ ಹಾಗೂ ಎಪಿಎಂಸಿ ತೆರಿಗೆ ಶೇ.2 ಹಾಕುವ ಕಾರಣದಿಂದ ಮಾರಾಟಗಾರರ ಮೇಲಿನ ಹೊರೆ ಹೆಚ್ಚುತ್ತಿದೆ. ಅದ್ದರಿಂದ ಏಕ ತೆರಿಗೆ ಪದ್ಧತಿ ಜಾರಿಗೆ ಮನವಿ ಮಾಡಲಾಗಿದೆ. ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳ ತೆರಿಗೆ ರದ್ದು ಸಾಧ್ಯವಿಲ್ಲ. ಜಿಎಸ್ಟಿ ಮೇಲಿನ ತೆರಿಗೆಯಲ್ಲಿ ಕಡಿತ ಮಾಡುವಂತೆ ಮನವಿ ಮಾಡಿದ್ದು ಮುಂದಿನ ಜಿಎಸ್ಟಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು ಎಂಬ ವಿಶ್ವಾಸ ಇದೆ.ಹೊರ ರಾಷ್ಟ್ರಗಳಾದ ಬಾಂಗ್ಲಾ, ನೇಪಾಳ, ಬರ್ಮಾದ ಅಡಕೆ ಅಮದು ಸ್ಥಗಿತಕ್ಕೆ ತೀರ್ಮಾನಿಸಲಾಗಿದೆ ಎಂದರು.

ಮಾಮ್ಕೋಸ್‌ ಸಹಕಾರ ಸಂಘದ ಗೋದಾಮಿನ ಚಾವಣಿ ಕೆಲಸ ಪೂರೈಸಿದ್ದು, ಸುಮಾರು ರೂ. 20 ಕೋಟಿಯಲ್ಲಿ ಗೋದಾಮು ನಿರ್ಮಾಣ ಕಾಮಗಾರಿ ನಡೆಸಿದ್ದೇವೆ. ಆನ್‌ಲೈನ್‌ ಟ್ರೇಡಿಂಗ್‌ ಕೆಲಸ ಪೂರ್ಣವಾಗಿದೆ ಎಂದರು. ಇದೇ ಸಂದರ್ಭ ಪ್ರಶ್ನೋತ್ತರ ನಡೆಸಲಾಯಿತು. ವಿಜಯಲಕ್ಷ್ಮೀ ಪ್ರಾರ್ಥಿಸಿ, ವಿರುಪಾಕ್ಷ ಪ್ಪ ಸ್ವಾಗತಿಸಿ, ಆರ್‌. ದೇವಾನಂದ್‌ ವಂದಿಸಿ, ಟಿ.ಆರ್‌.ಭೀಮರಾವ್‌ ನಿರೂಪಿಸಿದರು. ಸಭೆಯಲ್ಲಿ ನಿರ್ದೇಶಕರಾದ ಜೆ.ವಿರೂಪಾಕ್ಷ ಪ್ಪ, ಯು.ಎಚ್‌.ರಾಮಪ್ಪ, ರಾಘಣ್ಣ, ಬಡಿಯಣ್ಣ, ಶಶಿಧರ, ಸೋಮಶೇಖರ್‌, ಸುರೇಶಚಂದ್ರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ