ಆ್ಯಪ್ನಗರ

ಹಳ್ಳಿಗಳಲ್ಲಿರಕ್ತದಾನದ ಜಾಗೃತಿ ಮೂಡಿಸಿ

ಮನುಷ್ಯನ ಕಾಯಕದಲ್ಲಿ ರಕ್ತದಾನ ಮಹತ್ವದ ಕಾರ್ಯವಾಗಿದ್ದು, ಗ್ರಾಮೀಣ ಭಾಗದ ಜನರಲ್ಲಿರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳಾಗಬೇಕು ಎಂದು ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ ಹೇಳಿದರು.

Vijaya Karnataka 26 Sep 2019, 5:00 am
ಸೊರಬ: ಮನುಷ್ಯನ ಕಾಯಕದಲ್ಲಿ ರಕ್ತದಾನ ಮಹತ್ವದ ಕಾರ್ಯವಾಗಿದ್ದು, ಗ್ರಾಮೀಣ ಭಾಗದ ಜನರಲ್ಲಿರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳಾಗಬೇಕು ಎಂದು ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ ಹೇಳಿದರು.
Vijaya Karnataka Web awareness of donation in villages
ಹಳ್ಳಿಗಳಲ್ಲಿರಕ್ತದಾನದ ಜಾಗೃತಿ ಮೂಡಿಸಿ


ತಾಲೂಕಿನ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿತಾಲೂಕು ಆರೋಗ್ಯ ಕೇಂದ್ರ, ಜಿ.ಪಂ, ಉಳವಿ, ದೂಗೂರು, ನಿಸರಾಣಿ, ಶಿಗ್ಗಾ, ಹೆಗ್ಗೋಡು, ಇಂಡುವಳ್ಳಿ, ಚಿಟ್ಟೂರು, ಮಾವಲಿ, ಬಿಳವಾಣಿ ಗ್ರಾ.ಪಂ.ಗಳು ಮತ್ತು ಯುವಕ ಹಾಗೂ ಸ್ತ್ರೀ ಶಕ್ತಿ ಸಂಘ, ಸಂಸ್ಥೆಗಳ ಸಹಯೋಗದಲ್ಲಿಮಂಗಳವಾರ ಹಮ್ಮಿಕೊಂಡಿದ್ದ ಬೃಹತ್‌ ಸ್ವಯಂ ಪ್ರೇರಿತ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಕ್ತಿಯ ದೇಹಕ್ಕೆ ರಕ್ತದ ಅವಶ್ಯಕತೆ ಉಂಟಾಗಿ ಜೀವನ್ಮರಣದ ಸಮಸ್ಯೆ ಬಂದಾಗ ಅಂತಹವರ ಪ್ರಾಣ ಉಳಿಸಲು ರಕ್ತದಾನ ಮಹತ್ವದ್ದಾಗಿದೆ. ಗ್ರಾಮೀಣ ಯುವ ಜನತೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಜತೆಗೆ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಅರುಣ್‌ಕುಮಾರ್‌ ಮಾತನಾಡಿ, ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ. ಹೊಸರಕ್ತದ ಉತ್ಪತ್ತಿಯಿಂದ ಕಾರ್ಯತತ್ಪರತೆ ಹಾಗೂ ಜ್ಞಾಪಕ ಶಕ್ತಿ ವೃದ್ಧಿಯಾಗುವ ಜತೆಗೆ ರಕ್ತದಲ್ಲಿಕೊಬ್ಬಿನಾಂಶ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದರು.

ದೂಗೂರು ಗ್ರಾ.ಪಂ. ಅಧ್ಯಕ್ಷ ನಿಸಾರ್‌ ಅಹ್ಮದ್‌ ಅಧ್ಯಕ್ಷತೆ ವಹಿಸಿದ್ದರು. ಉಳವಿ ಗ್ರಾ.ಪಂ. ಸದಸ್ಯರಾದ ಪೈಯಾಜ್‌ ಅಹ್ಮದ್‌, ಭೈರಪ್ಪ ಮೈಸಾಮಿ, ಪ್ರಭು, ರಾಮಚಂದ್ರ, ಪುಟ್ಟಪ್ಪ, ಪಿಡಿಒ ರವಿಚಂದ್ರ, ಶಿವಮೊಗ್ಗ ರಕ್ತ ನಿಧಿ ಘಟಕದ ಡಾ.ಶ್ರೀನಿಧಿ, ಡಾ.ಮಹಾದೇವ ಪವರ್‌, ಚಂದ್ರಾನಾಯ್‌್ಕ, ಅರುಂಧತಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಹರೀಶ್‌, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ