ಆ್ಯಪ್ನಗರ

ಪಟಾಕಿ ಕಸ ಗುಡಿಸಿದ ಭಜರಂಗದಳ ಕಾರ‍್ಯಕರ್ತರು

ಲೋಕಸಭೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ನಗರದ ಬಹುತೇಕ ವೃತ್ತಗಳಲ್ಲಿ ಶುಕ್ರವಾರ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ ಸಂದರ್ಭ ರಾಶಿ ಬಿದ್ದ ಕಸವನ್ನು ಕಾರ‍್ಯಕರ್ತರು ಗುಡಿಸಿ ಸ್ವಚ್ಛ ಮಾಡಿದರು.

Vijaya Karnataka 25 May 2019, 5:00 am
ಸಾಗರ: ಲೋಕಸಭೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ನಗರದ ಬಹುತೇಕ ವೃತ್ತಗಳಲ್ಲಿ ಶುಕ್ರವಾರ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ ಸಂದರ್ಭ ರಾಶಿ ಬಿದ್ದ ಕಸವನ್ನು ಕಾರ‍್ಯಕರ್ತರು ಗುಡಿಸಿ ಸ್ವಚ್ಛ ಮಾಡಿದರು.
Vijaya Karnataka Web SMR-24sgr9


ಭಜರಂಗ ದಳದ ಕಾರ‍್ಯಕರ್ತರು, ಪ್ರಮುಖರಾದ ಐ.ವಿ.ಹೆಗಡೆ ಮತ್ತಿತರರು ನಗರದ ಶ್ರೀಮಹಾಗಣಪತಿ ದೇವಸ್ಥಾನ ಹಾಗೂ ಬಿ.ಎಚ್‌. ರಸ್ತೆಯಲ್ಲಿ ಸಿಡಿಸಿದ ಪಟಾಕಿ ಕಸವನ್ನು ಸ್ವಚ್ಛಗೊಳಿಸಿದರು.

ಈ ಕುರಿತು ಪತ್ರಿಕೆಯೊಂದಿಗೆ ಗಣಪತಿ ಕೆರೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಐ.ವಿ.ಹೆಗಡೆ ಮಾತನಾಡಿ, ಸಂಭ್ರಮಾಚರಣೆಯಲ್ಲಿ ಯಾವ ತಪ್ಪೂ ಇಲ್ಲ. ಆದರೆ, ಪ್ರಧಾನಿಗೆ ಗೌರವ ಸಲ್ಲಿಸಲು ಅವರ ಮಾತಿನಂತೆ ನಡೆದುಕೊಳ್ಳುವುದು ಬಹಳ ಮುಖ್ಯ. ಅವರು ಸ್ವಚ್ಛ ಭಾರತ್‌ ಘೋಷಣೆ ಮಾಡಿದ್ದನ್ನು ಸಾಕಾರಗೊಳಿಸಬೇಕಾದುದು ಕಾರ್ಯಕರ್ತರ ಕರ್ತವ್ಯ. ಇಂದು ಬಸ್‌ ನಿಲ್ದಾಣ, ವಿವಿಧ ವಾಣಿಜ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಮತ್ತಿತರ ಕಸದ ಸಾಮ್ರಾಜ್ಯವೇ ಕಾಣಿಸಿದೆ. ನಮಗೆ ಸ್ವಚ್ಛ ಭಾರತ ಕೇವಲ ಫೋಟೋ ಸೆಶನ್‌ ಅಷ್ಟೇ ಆಗಿದ್ದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಐದು ವರ್ಷಗಳ ಹಿಂದೆ ಪ್ರಧಾನಿಯಾಗಿ ಪ್ರಪ್ರಥಮವಾಗಿ ಅಧಿಕಾರ ವಹಿಸಿಕೊಂಡ ತಕ್ಷ ಣ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಘೋಷಣೆ ಮಾಡಿದರು. ಗುರುವಾರ ಮತ್ತೊಮ್ಮೆ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಮೋಘ ಬಹುಮತ ಪಡೆದಾಗ ಎಲ್ಲ ಕಡೆಗಳಲ್ಲಿ ಪಟಾಕಿ ಸಿಡಿಸಲಾಯಿತು. ಆನಂತರ ಪಟಾಕಿಯ ಕಸವನ್ನು ತೆಗೆದು ಸ್ವಚ್ಛಗೊಳಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿಲ್ಲ. ದೇಶದ ನೇತಾರನ ಯಾವ ಆದರ್ಶವನ್ನು ಪಾಲಿಸಿದಂತಾಯಿತು ಎಂದು ಅವರು ಕಟುವಾಗಿ ಪ್ರಶ್ನಿಸಿದರು.

ಲಲಿತಾ ಅನಿಲ್‌, ಸಂತೋಷ್‌ , ಕೋಮಲ್‌ ರಾಘವೇಂದ್ರ , ಮಹೇಶ್‌ ಮುಂತಾದವರು ಕಸ ಗುಡಿಸಿ ರಸ್ತೆ ಸ್ವಚ್ಛಗೊಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ