ಆ್ಯಪ್ನಗರ

‘ಪ್ರಯತ್ನದಿಂದ ಉಳಿದ ಬಂಗಾರಮ್ಮನ ಕೆರೆ’

ಸ್ಥಳೀಯರ ಸಹಭಾಗಿತ್ವದಿಂದ ಸಾಮಾಜಿಕ ಕಾರ‍್ಯ ಯಶಸ್ವಿಯಾಗುತ್ತದೆ ಎಂದು ಮಂಗಳೂರು ಕರ್ನಾಟಕ ಬ್ಯಾಂಕ್‌ ಪ್ರಧಾನ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌. ಮಹಾಬಲೇಶ್ವರ ಹೇಳಿದರು.

Vijaya Karnataka 6 May 2019, 5:00 am
ಸಾಗರ : ಸ್ಥಳೀಯರ ಸಹಭಾಗಿತ್ವದಿಂದ ಸಾಮಾಜಿಕ ಕಾರ‍್ಯ ಯಶಸ್ವಿಯಾಗುತ್ತದೆ ಎಂದು ಮಂಗಳೂರು ಕರ್ನಾಟಕ ಬ್ಯಾಂಕ್‌ ಪ್ರಧಾನ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌. ಮಹಾಬಲೇಶ್ವರ ಹೇಳಿದರು.
Vijaya Karnataka Web SMR-05sgr5


ತಾಲೂಕಿನ ಚಿಪ್ಪಳಿ-ಲಿಂಗದಹಳ್ಳಿಯಲ್ಲಿ ಭಾನುವಾರ ತಾಲೂಕು ಜೀವಜಲ ಕಾರ್ಯಪಡೆ ಮತ್ತು ಸ್ವಾನ್‌ ಎಂಡ್‌ ಮ್ಯಾನ್‌ ಸಂಸ್ಥೆ ವತಿಯಿಂದ ದಾನಿಗಳ ಸಹಕಾರದಿಂದ ಪುನರುಜ್ಜೀವನಗೊಂಡ ಬಂಗಾರಮ್ಮನ ಕೆರೆಗೆ ಕರ್ನಾಟಕ ಬ್ಯಾಂಕ್‌ ವತಿಯಿಂದ ನೀಡಲಾಗಿದ್ದ 5 ಲಕ್ಷ ರೂ. ದೇಣಿಗೆಯ ನಾಮಫಲಕ ಅನಾವರಣ ಮಾಡಿ, ಕೆರೆಹಬ್ಬಕ್ಕೆ ಚಾಲನೆ ನೀಡಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯನ್ನು ಬಂಗಾರಮ್ಮನ ಕೆರೆಯ ಪುನರುಜ್ಜೀವನ ಕಾರ‍್ಯ ಸಾಬೀತುಮಾಡಿದೆ. ಜಲಮೂಲ ಸಂರಕ್ಷ ಣೆಯ ಕಾರ‍್ಯ ಪವಾಡಸದೃಶ್ಯವಾಗಿ ಆಗಿದೆ. ಆನೆಸೊಂಡಿಲು ಕೆರೆ ಹೂಳೆತ್ತುವ ಕೆಲಸಕ್ಕೂ ಬ್ಯಾಂಕ್‌ ಸಹಕಾರ ನೀಡಲಿದೆ. ವಿದ್ಯುದ್ದೀಪ ಇಲ್ಲದ ಗ್ರಾಮೀಣ ಬಡ ವಿದ್ಯಾರ್ಥಿಗಳ ಮನೆಗಳಿಗೆ ಸೋಲಾರ್‌ ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆ ಇದೆ. ಅಗತ್ಯವಿದ್ದವರು ಬ್ಯಾಂಕ್‌ ಶಾಖಾ ವ್ಯವಸ್ಥಾಪಕರನ್ನು ಭೇಟಿ ಮಾಡಿ ಸೌಲಭ್ಯ ಪಡೆಯಲು ಸಾಧ್ಯವಿದೆ ಎಂದರು.

ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ನೀರಿನ ಮೌಲ್ಯ ಮರೆತಿದ್ದೇವೆ. 30 ಸಾವಿರ ಕೆರೆಗಳಿದ್ದ ದಾಖಲೆ ಇಕ್ಕೇರಿ ಇತಿಹಾಸದಲ್ಲಿದೆ. ಅವುಗಳಲ್ಲಿ 328ನೇ ಕೆರೆ ಸದರಿ ಬಂಗಾರಮ್ಮನ ಕೆರೆ ಎಂಬ ದಾಖಲಾತಿ ಇದೆ. ನಮ್ಮ ಊರಿನ ಕೆರೆ ಎಂಬ ಅಭಿಮಾನದಿಂದ ಜಲಸಂರಕ್ಷ ಣೆ ಮನೋಭಾವ ಬೆಳೆಯಬೇಕೆಂದರು.

ಸ್ವಾನ್‌ ಎಂಡ್‌ ಮ್ಯಾನ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್‌ ಚಿಪ್ಳಿ ಮಾತನಾಡಿ, ಕರ್ನಾಟಕ ಬ್ಯಾಂಕ್‌ ಮತ್ತು ದಾನಿಗಳ ಸಹಕಾರದಿಂದ 11 ಸಾವಿರ ಕ್ಯೂಬಿಕ್‌ ಮೀಟರ್‌ ಹೂಳು ಮೇಲೆತ್ತಲಾಗಿದೆ. ಕೆರೆ ಸುತ್ತಲೂ ರಿವಿಟ್‌ಮೆಂಟ್‌ ಕಟ್ಟಲು 22 ಲಕ್ಷ ರೂ. ಅಗತ್ಯವಿದ್ದು, ದಾನಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆÜ ಎಂದರು. ಇದೇ ಸಂದರ್ಭ ಕೆರೆ ಹೂಳೆತ್ತಲು ಸಹಕಾರ ನೀಡಿದ ಶ್ರಮಜೀವಿಗಳಾದ ಸುರೇಶ್‌ ಮಡಿವಾಳ, ಸುರೇಶ್‌ ಗೌಡ, ಗುರುರಾಜ, ರವಿಕುಮಾರ್‌, ಹಿಟಾಚಿ ರಮೇಶ್‌ ಮತ್ತು ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ತೆ ವಹಿಸಿದ್ದ ಸ್ವಾನ್‌ ಎಂಡ್‌ ಮ್ಯಾನ್‌ ಸಂಸ್ಥೆಯ ಅಧ್ಯಕ್ಷ ಟಿ.ವಿ. ಪಾಂಡುರಂಗ ಮಾತನಾಡಿದರು. ಕರ್ನಾಟಕ ಬ್ಯಾಂಕ್‌ನ ರಾಜಕುಮಾರ್‌, ಗ್ರಾಮದ ಹಿರಿಯರಾದ ಎಲ್‌.ಎಚ್‌. ರಾಮಪ್ಪ , ಬ್ಯಾಂಕ್‌ ಅಧಿಕಾರಿಗಳಾದ ರಂಗನಾಥ,

ರವಿಕುಮಾರ, ಹಯವದನ ಉಪಾಧ್ಯಾಯ, ರಾಘವೇಂದ್ರ , ಗ್ರಾಮಸ್ಥರು, ಆಸುಪಾಸಿನ ಪರಿಸರಾಸಕ್ತರು ಇದ್ದರು. ಸ್ಫೂರ್ತಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಆಯಿಷಾ ಬಾನು ಸ್ವಾಗತಿಸಿದರು. ಗುರುನಂದನ್‌ ಹೊಸೂರು ವಂದಿಸಿದರು. ಎಲ್‌.ವಿ. ಅಕ್ಷ ರ ನಿರೂಪಿಸಿದರು. ನಂತರ ಆಸಕ್ತರು ಕೆರೆಯಲ್ಲಿ ಈಜಿ ಸಂಭ್ರಮಿಸಿದರು. (5ಎಸ್‌ಜಿಆರ್‌5)ಚಿಪ್ಪಳಿ-ಲಿಂಗದಹಳ್ಳಿಯಲ್ಲಿ ಭಾನುವಾರ ಬಂಗಾರಮ್ಮನ ಕೆರೆ ಹಬ್ಬದ ಸಂದರ್ಭ ಹೂಳೆತ್ತಲು ಸಹಕಾರ ನೀಡಿದ ಶ್ರಮಜೀವಿಗಳಾದ ಸುರೇಶ್‌ ಗೌಡ, ಗುರುರಾಜ, ರವಿಕುಮಾರ್‌, ಹಿಟಾಚಿ ರಮೇಶ್‌ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ