ಆ್ಯಪ್ನಗರ

‘ಕಿರುಕುಳ ತಪ್ಪಿಸಲು ಬ್ಯಾಂಕ್‌ ಮಾದರಿ’

ನಗರಸಭೆಯಲ್ಲಿ ಖಾತೆ ಇತರೆ ದಾಖಲಾತಿಗಳಿಗೆ ದಲ್ಲಾಳಿ ಮತ್ತಿತರರಿಂದ ಆಗುತ್ತಿದ್ದ ಕಿರುಕುಳ ತಪ್ಪಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಇ-ಆಸ್ತಿ ದಾಖಲಾತಿ ಸ್ವೀಕರಿಸುವ ಮತ್ತು ನೀರಿನ ಕರ ಪಾವತಿಸುವ ಬ್ಯಾಂಕ್‌ ಮಾದರಿ ಕೌಂಟರ್‌ ತೆರೆಯಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿ ಪ್ರಕಾಶ್‌ ಹೇಳಿದರು.

Vijaya Karnataka 16 Jul 2019, 5:00 am
ಭದ್ರಾವತಿ: ನಗರಸಭೆಯಲ್ಲಿ ಖಾತೆ ಇತರೆ ದಾಖಲಾತಿಗಳಿಗೆ ದಲ್ಲಾಳಿ ಮತ್ತಿತರರಿಂದ ಆಗುತ್ತಿದ್ದ ಕಿರುಕುಳ ತಪ್ಪಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಇ-ಆಸ್ತಿ ದಾಖಲಾತಿ ಸ್ವೀಕರಿಸುವ ಮತ್ತು ನೀರಿನ ಕರ ಪಾವತಿಸುವ ಬ್ಯಾಂಕ್‌ ಮಾದರಿ ಕೌಂಟರ್‌ ತೆರೆಯಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿ ಪ್ರಕಾಶ್‌ ಹೇಳಿದರು.
Vijaya Karnataka Web SMR-15BDVT2


ಅವರು ಸೋಮವಾರ ನಗರಸಭೆ ಆವರಣದಲ್ಲಿ ಇ-ಆಸ್ತಿ ಮತ್ತು ನೀರಿನ ಕರ ಸ್ವೀಕರಿಸುವ ಕೌಂಟರ್‌ ಉದ್ಘಾಟಿಸಿ ನಂತರ ಸಿದ್ಧಪಡಿಸಿದ್ದ ಶಾಖಾ ಕೊಠಡಿ ವೀಕ್ಷಿಸಿ ಮಾತನಾಡಿದರು.

ಇ-ಆಸ್ತಿ ತೆರಿಗೆ ಪಾವತಿ ಮತ್ತು ಇಂಟರ್‌ನೆಟ್‌ ವ್ಯವಸ್ಥೆಯಿಂದ ಜನರಿಗೆ ಪಾರದರ್ಶಕ ಆಡಳಿತ ನೀಡಿದಂತಾಗುತ್ತದೆ. ಅರ್ಜಿದಾರರಿಗೆ ಸತಾವಣೆ ಮಾಡದೆ ದಾಖಲಾತಿ ದೊರೆಯುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಜನರು ಅರ್ಜಿ ನೀಡಿದ ತಕ್ಷ ಣ ಸ್ಕ್ಯಾ‌ನ್‌ ಆಗಿ ಸಂಬಂದಿತ ಶಾಖೆಗೆ ತಲುಪಬೇಕಾದ ದಾಖಲಾತಿ ಲಭಿಸುತ್ತದೆ. ಹಣ ಸುಲಿಗೆ ಮಾಡುವವರ ವಿರುದ್ದ ಹಾಗೂ ಅರ್ಜಿದಾರರಿಗೆ ಓಡಾಡಿಸುವುದರ ವಿರುದ್ಧ ಸಿದ್ಧಗೊಂಡ ವ್ಯವಸ್ಥೆ. ಇದರ ಸದುಪಯೋಗ ಪಡೆಯಬೇಕೆಂದರು.

ಪೌರಾಯುಕ್ತ ಮನೋಹರ್‌ ಮಾತನಾಡಿ, ಅರ್ಜಿದಾರರ ಪರದಾಟ, ದಲ್ಲಾಳಿಗಳ ಕಾಟ ತಪ್ಪಿಸಲು ಕ್ಯಾಶ್‌ ಲೆಸ್‌ ಹಾಗೂ ಕಾಗದ ರಹಿತ ವ್ಯವಸ್ಥೆ ಮಾಡಬೇಕೆಂದು ಚಿಂತಿಸಿ ಕೇವಲ ಏಳು ದಿನದಲ್ಲಿ ದಾಖಲೆ ಲಭಿಸುವಂತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ಪಾರದರ್ಶಕ ವ್ಯವಸ್ಥೆ ಸದುಪಯೋಗಕ್ಕೆ ಮುಂದಾಗಬೇಕೆಂದರು. ಇಂತಹ ವ್ಯವಸ್ಥೆಗೆ ಶಾಸಕ ಬಿ.ಕೆ.ಸಂಗಮೇಶ್ವರ್‌ ಸಹಕಾರ ನೀಡಿರುವುದಕ್ಕೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಕಂದಾಯಾಧಿಕಾರಿ ರಾಜ್‌ಕುಮಾರ್‌ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಅಕೌಂಟೆಂಟ್‌ ಮಹಮ್ಮದ್‌ ಅಲಿ, ಪರಿಸರ ಎಂಜಿನಿಯರ್‌ ರುದ್ರೇಗೌಡ, ವಿವಿಧ ವಿಭಾಗ ಮುಖ್ಯಸ್ಥರು ಸೇರಿದಂತೆ ಸಿಬ್ಬಂದಿ ಹಾಗೂ ತೆರಿಗೆದಾರರ ಸಂಘದ ಅಧ್ಯಕ್ಷ ಎಲ್‌.ವಿ.ರುದ್ರಪ್ಪ, ಜವರಯ್ಯ, ಆರ್‌.ವೇಣುಗೋಪಾಲ್‌ ಇತರರು ಇದ್ದರು. ಇದೇ ಸಂದರ್ಭ ಉಪವಿಭಾಗಾಧಿಕಾರಿಗಳು ಕಟ್ಟಡ ಮಾಲೀಕ ಶಿವಮೂರ್ತಿಗೆ ಇ-ಆಸ್ತಿ ದಾಖಲಾತಿ ವಿತರಿಸಿ ಚಾಲನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ