ಆ್ಯಪ್ನಗರ

‘ಬಂಟ ಸಮುದಾಯಕ್ಕೆ ಎತ್ತರದ ಸ್ಥಾನ’

ತುಳುನಾಡು ಇತಿಹಾಸದಲ್ಲಿ ಬಂಟ ಸಮುದಾಯಕ್ಕೆ ಎತ್ತರದ ಸ್ಥಾನವಿದೆ. ಬಂಟ ಸಮುದಾಯದ ಪ್ರೀತಿ, ವಿಶ್ವಾಸದ ಹನಿ ಸಮಾಜದಲ್ಲಿ ನದಿ ಆಗಿ ಹರಿಯಲಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಮಿ ಹೊರನಾಡು ಕನ್ನಡಿಗ ಉದ್ಯಮಿ ಸರ್ವೋತ್ತಮ ಶೆಟ್ಟಿ ಅಭಿಪ್ರಾಯಪಟ್ಟರು.

Vijaya Karnataka 15 Apr 2018, 5:00 am
ತೀರ್ಥಹಳ್ಳಿ : ತುಳುನಾಡು ಇತಿಹಾಸದಲ್ಲಿ ಬಂಟ ಸಮುದಾಯಕ್ಕೆ ಎತ್ತರದ ಸ್ಥಾನವಿದೆ. ಬಂಟ ಸಮುದಾಯದ ಪ್ರೀತಿ, ವಿಶ್ವಾಸದ ಹನಿ ಸಮಾಜದಲ್ಲಿ ನದಿ ಆಗಿ ಹರಿಯಲಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಮಿ ಹೊರನಾಡು ಕನ್ನಡಿಗ ಉದ್ಯಮಿ ಸರ್ವೋತ್ತಮ ಶೆಟ್ಟಿ ಅಭಿಪ್ರಾಯಪಟ್ಟರು.
Vijaya Karnataka Web banta community in high position
‘ಬಂಟ ಸಮುದಾಯಕ್ಕೆ ಎತ್ತರದ ಸ್ಥಾನ’


ಪಟ್ಟಣದ ಬಂಟರಭವನದಲ್ಲಿ ಸೌರಮಾನ ಯುಗಾದಿ ಅಂಗವಾಗಿ ತಾಲೂಕು ಬಂಟರ ಸಂಘ ಶನಿವಾರ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಾರ್ಶನಿಕ ಕವಿ ಕುವೆಂಪು ನೀಡಿದ ವಿಶ್ವಮಾನವ ಸಂದೇಶ ಪ್ರಸ್ತುತವಾಗಿದೆ. ಎಲ್ಲರನ್ನು ಒಳಗೊಂಡ ಸಮಾಜ ನೆಮ್ಮದಿ ನೀಡಲಿದೆ. ಎಲ್ಲರೊಂದಿಗೂ ಒಗ್ಗೂಡುವ ಬಂಟ ಸಮುದಾಯ ಕತ್ತಲೆ ಭೇದಿಸಿ ಹೊರಬರುವ ಸಾಮರ್ಥ್ಯ‌ ಹೊಂದಿದೆ ಎಂದರು.

ಈ ಸಂದರ್ಭ ವಿಶೇಷಚೇತನ ಗಾರ್ಡರಗದ್ದೆ ರಾಘವೇಂದ್ರ ಅವರ ಮನೆ ನಿರ್ಮಾಣಕ್ಕೆ ತಾಲೂಕು ಬಂಟರ ಸಂಘ, ಉದ್ಯಮಿಗಳಾದ ಸರ್ವೋತ್ತಮಶೆಟ್ಟಿ, ಸುಂದರ್‌ಶೆಟ್ಟಿ ತಲಾ 10 ಸಾವಿರ ರೂ. ದೇಣಿಗೆ ನೀಡಿದರು. ಉದ್ಯಮಿಗಳಾದ ಬಾಳಗಾರು ಶ್ರೀಧರ್‌ಶೆಟ್ಟಿ, ಸುಂದರಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ ತೂದೂರು ಸುಂದರಶೆಟ್ಟಿ , ತಾಲೂಕು ಬಂಟರ ಸಂಘದ ಅಧ್ಯಕ್ಷ ಪ್ರಭಾಕರಹೆಗ್ಡೆ ಮಾತನಾಡಿದರು. ವಿಠಲಶೆಟ್ಟಿ, ಅಡ್ಡಮನೆ ಮಂಜುನಾಥಶೆಟ್ಟಿ, ತನುಜಾಶೆಟ್ಟಿ, ಗೀತಾಶೆಟ್ಟಿ ಇದ್ದರು. ರಾಘವೇಂದ್ರಶೆಟ್ಟಿ ಸ್ವಾಗತಿಸಿ, ಡಿ.ಎಸ್‌. ವಿಶ್ವನಾಥಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಭಾಸ್ಕರ್‌ಶೆಟ್ಟಿ , ಜಯರಾಮ್‌ ಶೆಟ್ಟಿ ನಿರೂಪಿಸಿದರು.


ಬಂಟ ಸಮುದಾಯದಲ್ಲಿ ವಿವಾಹ ಕಾರ‍್ಯಕ್ರಮ ದುಬಾರಿ ಆಗಿದೆ. 21ನೇ ಶತಮಾನದಲ್ಲೂ ವರದಕ್ಷಿಣೆ ಬಂಟ ಸಮುದಾಯದಲ್ಲಿ ಪಿಡುಗಾಗಿದೆ. ವಿವಾಹ ದುಂದುವೆಚ್ಚ ತಡೆಯಲು ಸಮುದಾಯದಲ್ಲಿ ಜಾಗೃತಿ ಮೂಡಬೇಕು.

- ಸರ್ವೋತ್ತಮಶೆಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ