ಆ್ಯಪ್ನಗರ

ಭದ್ರಾವತಿಗೆ ಚಿರತೆ ಬಂತು ಚಿರತೆ!

ನಗರಸಭೆ ವ್ಯಾಪ್ತಿಯ ಜಟ್‌ ಪಟ್‌ ನಗರದ ಸಾಲಿಡ್‌ ವೇಸ್ಟ್‌ ಟ್ರೀಟ್‌ ಮೆಂಟ್‌ ಪ್ಲಾಂಟ್‌ ಬಳಿ ಚಿರತೆ ಪದೇಪದೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸುತ್ತಮುತ್ತಲ ನಿವಾಸಿಗಳಲ್ಲಿತೀವ್ರ ಆತಂಕ ಹೆಚ್ಚಿಸಿದೆ.

Vijaya Karnataka 24 Dec 2019, 5:00 am
ಭದ್ರಾವತಿ (ಶಿವಮೊಗ್ಗ) : ನಗರಸಭೆ ವ್ಯಾಪ್ತಿಯ ಜಟ್‌ ಪಟ್‌ ನಗರದ ಸಾಲಿಡ್‌ ವೇಸ್ಟ್‌ ಟ್ರೀಟ್‌ ಮೆಂಟ್‌ ಪ್ಲಾಂಟ್‌ ಬಳಿ ಚಿರತೆ ಪದೇಪದೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸುತ್ತಮುತ್ತಲ ನಿವಾಸಿಗಳಲ್ಲಿತೀವ್ರ ಆತಂಕ ಹೆಚ್ಚಿಸಿದೆ.
Vijaya Karnataka Web bhadravati had to cheat
ಭದ್ರಾವತಿಗೆ ಚಿರತೆ ಬಂತು ಚಿರತೆ!


ಕಳೆದ ಶುಕ್ರವಾರ ಮತ್ತು ಭಾನುವಾರ ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇಲ್ಲಿನ ಸುಶೀಲಾಬಾಯಿ ಅವರ ಮನೆ ಸಮೀಪ ಶುಕ್ರವಾರ ಮಧ್ಯಾಹ್ನ ಮೊದಲು ಕಾಣಿಸಿಕೊಂಡಿದ್ದು, ಕುಟುಂಬದವರು ಹೆದರಿ ಮನೆಯೊಳಗೆ ಓಡಿ ಬಾಗಿಲು ಮುಚ್ಚಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಬಾಗಿಲು ಓರೆ ಮಾಡಿ ನೋಡಿದಾಗ ಮನೆ ಮುಂಭಾಗದಲ್ಲಿದ್ದ ಕೋಳಿಯೊಂದನ್ನು ಕಚ್ಚಿಕೊಂಡು ಹಿಂಬದಿಯ ಭದ್ರಾನದಿ ಕಾಡಿನತ್ತ ಓಡುತ್ತಿದ್ದುದು ಕಂಡುಬಂದಿದೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಜನರು ಭಯ ಭೀತರಾಗಿದ್ದಾರೆ. ಸುದ್ದಿ ತಿಳಿದ ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಆಗಮಿಸಿ ಜನರಿಗೆ ಧೈರ್ಯ ತುಂಬಿದ್ದಾರೆ.

ಪುನಃ ಎರಡನೇ ಬಾರಿ ಭಾನುವಾರ ಸಂಜೆ ಸುಶೀಲಾಬಾಯಿ ಮನೆಯ ಬಳಿ, ಅವರ ಪುತ್ರಿ ಒಬ್ಬರೇ ಇದ್ದಾಗ ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣವೇ ನಗರಸಭೆ ಮಾಜಿ ಸದಸ್ಯ ಟಿಪ್ಪು ಸುಲ್ತಾನ್‌ ಮತ್ತು ಅವರ ಸ್ನೇಹಿತರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ರಾತ್ರಿಯಿಡಿ ಮನೆಯಮೇಲೆ ಅವಿತು ಕುಳಿತು ಗಸ್ತು ಮಾಡಿದ್ದಾರೆ. ಆದರೆ ಚಿರತೆಯ ಸುಳಿವು ದೊರೆತಿಲ್ಲ.
-------

ದೊಡ್ಡ ಗಾತ್ರದ ಬೆಕ್ಕಿರಬಹುದೇ?

ಚಿರತೆ ಕಂಡವೆಂದು ಮಾಹಿತಿ ದೊರೆತ ತಕ್ಷಣ ಸ್ಥಳ ಪರಿಶೀಲನೆ ಮಾಡಿದ್ದೇವೆ. ಆದರೆ, ಚಿರತೆ ಇರುವ ಸ್ಥಳದಲ್ಲಿನಾಯಿಗಳು ಇರುವುದಿಲ್ಲ. ಈ ಭಾಗದಲ್ಲಿಹೇರಳವಾಗಿ ನಾಯಿಗಳು ಸಂಚರಿಸುತ್ತಿವೆ. ಅಷ್ಟೆ ಪ್ರಮಾಣದಲ್ಲಿಬೆಕ್ಕುಗಳೂ ಇವೆ. ಹೆಜ್ಜೆ ಗುರುತುಗಳನ್ನು ಪರಿಶೀಲಿಸಲಾಗಿದೆ. ಅದು ಚಿರತೆಯ ಹೆಜ್ಜೆ ಗುರುತು ಅಲ್ಲವೆನ್ನಿಸುತ್ತದೆ. ಇದೊಂದು ದೊಡ್ಡ ಗಾತ್ರದ ಬೆಕ್ಕು ಇರಬಹುದು. ಆದರೂ ಇಲ್ಲಿನ ಕಂಬವೊಂದಕ್ಕೆ ನಾಯಿಯನ್ನು ಕಟ್ಟಿ, ಬೋನ್‌ ಇಡಲಾಗುತ್ತದೆ. ಈ ಭಾಗದ ನಿವಾಸಿಗಳು ಹೆದರುವುದು ಬೇಡ.

- ದಿನೇಶ್‌,
ಆರ್‌ಎಫ್‌ಒ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ