ಆ್ಯಪ್ನಗರ

ರೈತರಿಗೆ ಬಿಜೆಪಿ ಕೊಡುಗೆ ಏನು?

ಬಂಗಾರಪ್ಪ ಹಾಗೂ ಜನತಾ ಸರಕಾರವನ್ನು ಹೊರತುಪಡಿಸಿದರೆ ಯಾವ ಸರಕಾರವೂ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಕಾನೂನು ರೂಪಿಸಲಿಲ್ಲ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಹೇಳಿದರು.

Vijaya Karnataka 10 Jan 2019, 5:00 am
ಸೊರಬ: ಬಂಗಾರಪ್ಪ ಹಾಗೂ ಜನತಾ ಸರಕಾರವನ್ನು ಹೊರತುಪಡಿಸಿದರೆ ಯಾವ ಸರಕಾರವೂ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಕಾನೂನು ರೂಪಿಸಲಿಲ್ಲ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಹೇಳಿದರು.
Vijaya Karnataka Web MANJUNTHAGOWDA


ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕು ದೊರಕಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯ ಮಂತ್ರಿ ಎಸ್‌.ಬಂಗಾರಪ್ಪ ಅವರು ಫಾರಂ ನಂ. 50ರಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ನಂತರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಫಾರಂ ನಂ. 53 ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 57ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟು ಸಾಗುವಳಿದಾರರ ಪರವಾಗಿ ಕಾನೂನು ರೂಪಿಸಿದರು. ಆದರೆ, ಪ್ರಚಾರಕ್ಕೆ ಸೀಮಿತವಾಗಿರುವ ಬಿಜೆಪಿ ಮುಖಂಡರು, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಯಾವ ಹೋರಾಟ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಜ್ಯದ ಎಲ್ಲ ವರ್ಗದ ರೈತರ ಸಾಲಮನ್ನಾ ಮಾಡಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ 800 ಜನರಿಗೆ ಮಾತ್ರ ಸಾಲ ಮನ್ನಾ ಮಾಡಲಾಗಿದೆ ಎಂದು ದುರುದ್ದೇಶದ ಹೇಳಿಕೆ ನೀಡಿರುವುದು ಖಂಡಾನರ್ಹ. ಶಿವಮೊಗ್ಗ ಜಿಲ್ಲೆಯೊಂದರಲ್ಲಿ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ ಸೇರಿದಂತೆ 1.50 ಲಕ್ಷ ರೈತರ 1350ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಮೋದಿ ಅವರಿಗೆ ಸಾಲ ಮನ್ನಾದ ಅಂಕಿ-ಅಂಶ ಗೊತ್ತಿದ್ದರೂ ರಾಜಕೀಯ ಪ್ರೇರಿತವಾಗಿ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪರ ಆಡಳಿತ ನೀಡುತ್ತಿರುವ ಸಮ್ಮಿಶ್ರ ಸರಕಾರದ ಸಾಧನೆ ಸಹಿಸಲಾಗದ ಬಿಜೆಪಿ ನಾಯಕರು, ಸರಕಾರ ಬೀಳುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದ್ದು, ಈಗಾಗಲೇ ಮಾಜಿ ಶಾಸಕ ಮಧು ಬಂಗಾರಪ್ಪ ಅವರು, ತೀರ್ಥಹಳ್ಳಿ, ಹೊಸನಗರ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್‌ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಹಮೀದ್‌ ಹಮ್ಜಾ, ಬ್ಲಾಕ್‌ ಅಧ್ಯಕ್ಷ ಎಚ್‌.ಗಣಪತಿ, ವಕ್ತಾರ ಎಂ.ಡಿ.ಶೇಖರ್‌, ಕೆ.ವಿ.ಗೌಡ, ಜಿ.ಪಂ. ಸದಸ್ಯರಾದ ಶಿವಲಿಂಗೇಗೌಡ, ವಿರೇಶ್‌ ಕೊಟಗಿ, ತಾ.ಪಂ. ಉಪಾಧ್ಯಕ್ಷ ಸುರೇಶ್‌ ಹಾವಣ್ಣನವರ್‌, ಬಲರಾಮಪ್ಪ ಓಟೂರು, ಡಾಕಪ್ಪ, ಪರಶುರಾಮ ಸಣಬೈಲ್‌ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ